ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಸ್ಥಾನಗಳಿಗೆ ಅರ್ಜಿ ಆಹ್ವಾನ
ಕ.ಪ್ರ.ವಾರ್ತೆ ಪಾವಗಡ ಮೇ 23
ತಾಲೂಕಿನ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿ ಇರುವ 4 ಅಂಗನವಾಡಿ ಕಾರ್ಯಕರ್ತೆ ಹಾಗೂ 13 ಸಹಾಯಕಿ ಸ್ಥಾನಗಳ ಹುದ್ದೆಗಳಿಗೆ ನಿಬಂಧನೆಗೊಳಪಟ್ಟು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕಾರ್ಯಕರ್ತೆಯರ ಹುದ್ದೆ ಖಾಲಿ ಇರುವ ಅಂಗನವಾಡಿ ಕೇಂದ್ರಗಳ ವಿವರ: ತಾ.ಸಾಸಲಕುಂಟೆ ಗ್ರಾಪಂ ವ್ಯಾಪ್ತಿಯ ಕೆಂಚಮ್ಮನಹಳ್ಳಿ ಗೊಲ್ಲರಹಟ್ಟಿ (ಸಾಮಾನ್ಯ) ನ್ಯಾಯದಗುಂಟೆ ಗ್ರಾಪಂ ವ್ಯಾಪ್ತಿಯ ನಿಡಗಲ್ (ಪ.ಪಂಗಡ ಎಸ್.ಟಿ) ಕೆ.ಟಿ.ಹಳ್ಳಿ ಗ್ರಾಪಂನ ಗೊಲ್ಲರಹಟ್ಟಿ (ಸಾಮಾನ್ಯ) ಪೊನ್ನಸಮುದ್ರ ಗ್ರಾಪಂನ ತಾಳೇಮರದಹಳ್ಳಿ (ಸಾಮಾನ್ಯ), ಸಹಾಯಕಿಯರ ಹುದ್ದೆ ಖಾಲಿ ಇರುವ ಅಂಗನವಾಡಿ ಕೇಂದ್ರಗಳ ವಿವರ: ತಾ,ರೊಪ್ಪ ಗ್ರಾಪಂ ವ್ಯಾಪ್ತಿಯ ಬೈರಾಪುರ(ಎಸ್.ಸಿ)ರೊಪ್ಪ ಗ್ರಾಪಂನ ನಲ್ಲದೀಗಲಬಂಡೆ(ಎಸ್ಸಿ) ಪೊತಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಕುಣಿಹಳ್ಳಿ (ಎಸ್.ಸಿ) ಪೋತಗಾನಹಳ್ಳಿ ಗ್ರಾಪಂನ ದಳವಾಯಿಹಳ್ಳಿ-1(ಎಸ್.ಟಿ)ಜೆ.ಅಚ್ಚಮ್ಮನಹಳ್ಳಿ ಗ್ರಾಪಂನ ಮೇಗಲಪಾಳ್ಯ -1(ಎಸ್ಸಿ.)ತಾಲೂಕಿನ ನೀಲಮ್ಮನಹಳ್ಳಿ-1(ಸಾಮಾನ್ಯ) ಬ್ಯಾಡನೂರು ಗ್ರಾಪಂನ ದೊಡ್ಡಹಟ್ಟಿ (ಸಾಮಾನ್ಯ) ಸಿ.ಕೆ.ಪುರ ಗ್ರಾಪಂನ ಹರಿಹರಪುರ (ಸಾಮಾನ್ಯ) ಸಿ.ಕೆ.ಪುರ ಗ್ರಾಪಂ ಕೊತ್ತೂರು-1(ಎಸ್.ಟಿ) ಸಿ.ಕೆ.ಪುರ ಗ್ರಾಪಂ ಟಿ.ಎನ್.ಕೋಟೆ, (ಸಾಮಾನ್ಯ) ನ್ಯಾಯದಗುಂಟೆ ಗ್ರಾಪಂನ ಕದಿರೇಹಳ್ಳಿ ಕಾಲೋನಿ (ಎಸ್.ಸಿ) ಪಳವಳ್ಳಿ ಗ್ರಾಪಂನ ಕೆಂಚಗಾನಹಳ್ಳಿ (ಸಾಮಾನ್ಯ) ಪೊನ್ನಸಮುದ್ರ ಗ್ರಾಪಂನ ಕೋಮಾರ್ಲಹಳ್ಳಿ(ಎಸ್.ಟಿ).
ಭರ್ತಿ ಮಾಡಿದ ಅರ್ಜಿಗಳನ್ನು ನಿಗದಿಪಡಿಸಿದ ಗಡುವಿನೊಳಗೆ ಆಂದರೆ 15-6-2013 ಸಂಜೆ 5ಗಂಟೆಯೊಳಗೆ ಸಿಡಿಪಿಒ ಇಲಾಖೆಗೆ ತಲುಪಿಸಲು ಕೋರಲಾಗಿದೆ.
ಮಾರ್ಗಸೂಚಿ ಅನ್ವಯ ಹುದ್ದೆಗಳ ನೇಮಕಾತಿಯನ್ನು ಇಲಾಖೆ ನಿಬಂಧನೆಗಳ ನಿಯಮನುಸಾರ ಆಯ್ಕೆ ಮಾಡುವುದರಿಂದ ಮಧ್ಯವರ್ತಿಗಳ ಆಮಿಷಗಳಿಗೆ ಬಲಿಯಾಗಿ ಮೋಸಹೋಗಬಾರರೆಂದು ಮನವಿ ಮಾಡಿದ ಸಿಡಿಪಿಒ ಉಷಾ ಆಸಕ್ತರು ವಿವರಗಳಿಗೆ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶ್ರೀನಿವಾಸ ನಗರ ಪಾವಗಡ ಇಲ್ಲಿಗೆ ಸಂಪರ್ಕಿಸಲು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

