ಬರಹಗಾರನಿಗೆ ಬದುಕಿನ ಕಾಳಜಿ ಇರಲಿ: ಡಾ. ಸೋಮು ಭಾಸ್ಕರಾಚಾರ್
ಕನ್ನಡಪ್ರಭ ವಾರ್ತ್ಣೆ ತುಮಕೂರು , ಮೇ 23
ಬರಹಗಾರನು ಬದುಕಿನ ಬಗ್ಗೆ ಕಾಳಜಿಯುಳ್ಳವನಾಗಿರಬೇಕು. ತನ್ನ ವೈಯಕ್ತಿಕ ನೆಲೆಯಿಂದ ಸಮಷ್ಟಿಮುಖಿಯಾಗಬೇಕು. ಭಾಷೆಯ ಸ್ಪಷ್ಟತೆಯೊಂದಿಗೆ ಸಂಸ್ಕೃತಿಯ ಅರಿವಿರಬೇಕು. ಅದಕ್ಕಾಗಿ ಲೋಕಜ್ಞಾನವಿರಬೇಕೆಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಸೋಮು ಭಾಸ್ಕರಾಚಾರ್ ತಿಳಿಸಿದರು.
ಅವರು ಕೆ.ಎನ್. ನವೀನ್‌ಕುಮಾರ್ ಅವರ ಕಾಂತಿದೇವಿಗೆ ಲಲಿತ ಪ್ರಬಂಧಗಳ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಾವುದೇ ವಿಷಯವನ್ನು ತಲಸ್ಪರ್ಶಿಯಾಗಿ ಹೇಳುವ ಕೌಶಲ್ಯ ಬರಹಗಾರನಿಗೆ ಇರಬೇಕು. ಮೌಢ್ಯತೆ, ಜಾತಿ, ಸಂಪ್ರದಾಯಗಳ ಸಂಕೋಲೆಯಿಂದ ಬಿಡುಗಡೆಗೊಂಡು ಸಮಾಜಮುಖಿಯಾಗಿ ಚಿಂತಿಸಿ ಬರೆಯುವ ಲೇಖಕನೇ ನಿಜವಾದ ಲೇಖಕ ಎಂದರು. ಬದುಕು ಮತ್ತು ಬರವಣಿಗೆಗಳೆರಡರಲ್ಲೂ ಸಮನ್ವಯ ಸಾಧಿಸಿರಬೇಕು. ಹಾಗಾಗಿ ಬರಹಗಾರ ಸಾಂಪ್ರದಾಯಿಕ ಕಟ್ಟು ಕಟ್ಟಳೆಗಳನ್ನು ಮೀರುವ ಪ್ರಬುದ್ಧತೆ ತೋರಬೇಕು. ಇಂತಹ ಒಳಹುಗಳಿಗೆ ಇಂಬಾಗಿರುವ ಕಾಂತಿ ದೀವಿಗೆ ಭರವಸೆ ಮೂಡಿಸುವ ಕೃತಿಯಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಅವರು ವಿದ್ಯಾರ್ಥಿ ದೆಸೆಯಿಂದಲೂ ಪ್ರತಿಭಾವಂತರಾಗಿದ್ದು ಇಂದು ಬರೆಹಗಾರನಾಗಿ ಬೆಳಕಿಗೆ ಬಂದಿರುವ ಶಿಕ್ಷಕ ನವೀನ್‌ಕುಮಾರ್ ಸಾಧನೆ ಆದರ್ಶವಾದುದು ಎಂದರು. ಕೃತಿ ಪರಿಚಯಿಸಿದ ಪ್ರೊ. ವೆಂಕಟರೆಡ್ಡಿ ರಾಮರೆಡ್ಡಿ ಅವರು ಇಲ್ಲಿನ ಲಲಿತ ಪ್ರಬಂಧಗಳಲ್ಲಿ ಶ್ರೇಷ್ಠ ಚಿಂತನೆ ಹಾಗೂ ಸುಲಲಿತ ಬರವಣಿಗೆ ಇದ್ದು ಮೊದಲ ಕೃತಿಯಿಂದಲೇ ಪ್ರಬಂಧಕಾರರಾಗಿ ಕಾಣುತ್ತಾರೆ ಎಂದರು.
ಕೃತಿ ಬಿಡುಗಡೆಗೊಳಿಸಿದ ಸಿಐಟಿ ಕಾರ್ಯದರ್ಶಿ ಜ್ಯೋತಿ ಗಣೇಶ್ ಸಾಹಿತ್ಯ ಮತ್ತು ಕಲೆಗಳು ಬದುಕಿನ ಹಿರಿಮೆಗೆ ನೆರವಾಗುವ ಸಾಧನಗಳು. ಹಾಗಾಗಿ ಕೃತಿಕಾರನ ಸಾಧನೆ ಯುವಜನಾಂಗಕ್ಕೆ ಮಾದರಿಯಾಗಿದೆ ಎಂದರು.
ಜಿಲ್ಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನ್‌ಕುಮಾರ್, ತಾಲೂಕು ಕಸಾಪ ಅಧ್ಯಕ್ಷ ಕೆಂ.ಬ. ರೇಣುಕಯ್ಯ, ಪ್ರಾಚಾರ್ಯ ಲಿಂಗದೇವರು ಮಾತನಾಡಿದರು. ಉಪನ್ಯಾಸಕ ಚಿದಾನಂದ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

