ಯುವ ಜನತೆಯಲ್ಲಿ ಸಂಸ್ಕಾರ ಮಾಯ: ಡಾ.ಶಿವಾನಂದ ಸ್ವಾಮೀಜಿ ವಿಷಾದ
ತುಮಕೂರು: ಇಂದಿನ ಯುವ ಜನತೆಯಲ್ಲಿ ವಿದ್ಯಾವಂತರ ಸಂಖ್ಯೆ ಸಾಕಷ್ಟಿದೆ. ಆದರೆ, ಸಂಸ್ಕಾರವಂತರ ಪ್ರಮಾಣ ಕಡಿಮೆಯಿದೆ ಎಂದು ತುಮಕೂರಿನ ಹಿರೇ ಮಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
ಇಲ್ಲಿನ ಹಿರೇಮಠದಲ್ಲಿ ನಡೆದ ಡಾ.ಜಯದೇವಿ ತಾಯಿ ಲಿಗಾಡೆ ಜನ್ಮ ಶತಮಾನೋತ್ಸವ ವರ್ಷಾಚರಣೆ ನಿಮಿತ್ತ ವಿದ್ವಾನ್ ಎಂ.ಜಿ. ಸಿದ್ದರಾಮಯ್ಯನವರ 'ಸಂಕಲ್ಪ ಒಂದು ನೂರು ಉಪನ್ಯಾಸ' ಮಾಲೆಯ 91 ನೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ: ಸಂಸ್ಕಾರವಂತ ಯುವಜನತೆ ದೇಶದೆಲ್ಲೆಡೆ ಭವಿಷ್ಯದ ಸಂಪತ್ತಾಗಬೇಕು.ಇತ್ತೀಚೆಗೆ ಎಲ್ಲ ರಂಗದಲ್ಲಿಯೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಮಾಧ್ಯಮ ಕಹಿಘಟನೆ ವೈಭವೀಕರಿಸುತ್ತಿವೆ ಎಂದು ವಿಷಾದಿಸಿದರು. ಎಂ.ಜಿ. ಸಿದ್ದರಾಮಯ್ಯ ಮಾತನಾಡಿ, ನಾಡು-ನುಡಿಗಾಗಿ ದುಡಿದವರ ಬಗ್ಗೆ ಯುವ ಪೀಳಿಗೆ ಅರಿತು ಆಚರಣೆಗೆ ತರಬೇಕು ಎಂದರು. ಡಾ.ಶಿವಾನಂದ ಶಿವಾಚಾರ್ಯರ ಸೂಕ್ತಿ ಜ್ಞಾನ ಪ್ರಕಾಶಿಕೆ ಫಲಕ ಬಿಡುಗಡೆ ಮಾಡಲಾಯಿತು. ಜಿಎಸ್ಎಸ್ ಮೂರ್ತಿ ಗೀತ ಗಾಯನ ನಡೆಸಿಕೊಟ್ಟು, ಅಧ್ಯಕ್ಷತೆ ವಹಿಸಿದ್ದರು. ಶಿವಮ್ಮ ಚಂದ್ರಶೇಖರ್, ನಾಗರತ್ನ ಉದಯ್, ಮ್ಯಾನೇಜರ್ ತೀತಾ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು. ಶಿವಮ್ಮ ಚಂದ್ರಶೇಖರ್ ನಿರೂಪಿಸಿದರು. ನಾಗರತ್ನ ಉದಯ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

