ಐಕ್ಯ ಹೋರಾಟದಿಂದ ಬೇಡಿಕೆಗಳ ಈಡೇರಿಸಿಕೊಳ್ಳಲು ಸಾಧ್ಯ
ಕ.ಪ್ರ.ವಾರ್ತೆ ತುಮಕೂರು ಮೇ 30
ಕಾರ್ಮಿಕರು ಐಕ್ಯ ಹೋರಾಟದಿಂದ ಅಷ್ಟೆ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯ ಎಂದು ಇತಿಹಾಸ ಸಾಬೀತು ಪಡಿಸಿದೆ. ಅದು ಇಂದಿಗೂ ಸತ್ಯ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಕೆ. ಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.
ಪಾವಗಡದ ಶ್ರೀ ಯೋಗಿನಾರಾಯಣಸ್ವಾಮಿ ಭವನದಲ್ಲಿ ಪಾವಗಡ ತಾಲೂಕು ಸಿಐಟಿಯು ಸಮಿತಿಯಿಂದ ಆಯೋಜಿಸಲಾಗಿದ್ದ ವಿಶ್ವ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡುತ್ತಿದ್ದರು. ಗ್ರಾಮಪಂಚಾಯಿತಿಯ ನೌಕರ ಸಂಘಟನೆಯ ಮುಖಂಡರಾದ ಹನುಮಂತರಾಯಪ್ಪ ಮಾತನಾಡಿ ಸರ್ಕಾರದ ಅಧೀನದಲ್ಲೇ ಇರುವ ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರವೇ ನಿಗದಿಮಾಡಿದ ವೇತನ ಕಾನೂನುಗಳು ಜಾರಿಯಾಗದೆ ನೌಕರರನ್ನು ಶೋಷಣೆ ಮಾಡಲಾಗುತ್ತಿದೆ ಎಂದರು. ವಿದ್ಯಾರ್ಥಿ ಮುಖಂಡ ಶಿವಣ್ಣ ಮಾತನಾಡಿ ಪಾವಗಡ ತಾಲೂಕಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು ಈ ಸಂಬಂದ ಶಾಶ್ವತ ನೀರಾವರಿ ಜಾರಿಗಾಗಿ ಕಾರ್ಮಿಕ ವರ್ಗ ವಿದ್ಯಾರ್ಥಿಗಳು ಜೊತೆಗೂಡಿ ಐಕ್ಯ ಹೋರಾಟಕ್ಕೆ ಮುಂದಾಗಬೇಕಾಗಿದೆ ಎಂದು ಕರೆ ನೀಡಿದರು.
ಅಕ್ಷರ ದಾಸೋಹ ಸಂಘಟನೆಯ ತಾಲೂಕು ಮುಖಂಡರಾದ ಕೆಂಚಮ್ಮನವರು ಮಾತನಾಡಿ ಸ್ಕೀಮ್ ವರ್ಕ್ನಲ್ಲಿ ಕೆಲಸ ಮಾಡುವ ಅಂಗನವಾಡಿ, ಆಶಾ, ಅಕ್ಷರ ದಾಸೋಹ, ಮೂರಾರ್ಜಿ ಶಾಲೆಯಲ್ಲಿ ಕೆಲಸ ಮಾಡುವ ಶಿಕ್ಷಕರುಗಳು, ಆಸ್ಪತ್ರೆ ಕಾರ್ಮಿಕರು, ಸರ್ಕಾರಿ ನೌಕರರೆಂದು ಭಾವಿಸಿ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ನೀಡಬೇಕೆಂದರು.
ಅಭಿವೃದ್ಧಿ ಕುಂಟಿತ: ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸುಶೀಲಾ ಅವರು ಪಾವಗಡ ತಾಲೂಕಿನಲ್ಲಿ ಕಳೆದ 5 ವರ್ಷಗಳಿಂದ ಬರಗಾಲ ಪರಿಸ್ಥಿತಿ ಇದ್ದು ದುಡಿಯುವ ಜನತೆಗೆ ಕೆಲಸ ಇಲ್ಲದೆ ಜೀವನ ಸಾಗಿಸಲು ಕಷ್ಟಕರವಾಗಿದ್ದು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉದ್ಯೋಗಗಳು ನೀಡದೆ ತಾಲೂಕಿನ ಅಭಿವೃದ್ಧಿ ಕುಂಠಿತವಾಗಿದೆ ಎಂದರು.
ಹೊಸದಾಗಿ ರಚನೆಯಾಗಿರುವ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯನ್ನು ಭ್ರಷ್ಟಾಚಾರರಹಿತವಾಗಿ ಪರಿಣಾಮಕಾರಿಯಾಗಿ ಜಾರಿಮಾಡಬೇಕು. ರೈತರಿಗೆ ಬಡ್ಡಿ ರಹಿತ ಸಾಲ ನೀಡಿ ಕೃಷಿಗೆ ಆದ್ಯತೆಯನ್ನು ನೀಡಿ ಸಣ್ಣ ಹಿಡುವಳಿದಾರರಿಗೆ ನೂತನ ಸರ್ಕಾರ ಕ್ರಮಕೈಗೊಳ್ಳಬೇಕೆಂದರು. ವೇದಿಕೆಯಲ್ಲಿ ಹಮಾಲಿ ಕಾರ್ಮಿಕ ಸಂಘಟನೆಯ ರಾಮಾಂಜಿನಪ್ಪ ಅಂಗನವಾಡಿ ನೌಕರರ ಸಂಘಟನೆಯ ಸುಬ್ಬಮ್ಮ, ಮುಂತಾದವರು ಉಪಸ್ಥಿತರಿದ್ದರು. ಹನುಮಕ್ಕ ಸ್ವಾಗತಿಸಿ ಸೀನಪ್ಪ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

