'ಕೇಬಲ್ ಡಿಜಿಟಲೀಕರಣದಿಂದ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಸಾಧ್ಯ'
ತುರುವೇಕೆರೆ, ನ,29. ಕೇಬಲ್ ಡಿಜಿಟಲೀಕರಣ ಮಾಡುವುದರಿಂದ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಲು ಅವಕಾಶವಾಗುತ್ತದೆ ಎಂದು ಇ ಡಿಜಿಟಲ್ನ ಮುಖ್ಯಸ್ಥ ಸೋಮಶೇಖರ್ ಅಭಿಪ್ರಾಯಪಟ್ಟರು.
ತಾಲೂಕು ಕೇಬಲ್ ಆಪರೇಟರ್ಗಳ ಸಂಘದ ವತಿಯಿಂದ ನಡೆದ ಉದ್ಘಾಟನಾ ಹಾಗೂ ಡಿಜಿಟಲ್ ಸೇವೆಯ ಬಗ್ಗೆ ಮಾಹಿತಿ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸದ್ಯ ಆನ್ಲಾಗ್ ಮೂಲಕ ಗ್ರಾಹಕರಿಗೆ ಕೇಬಲ್ ಸೇವೆಯನ್ನು ಒದಗಿಸಲಾಗುತ್ತಿದೆ. ಇನ್ನು ಕೇವಲ ಮೂರ್ನಾಲ್ಕು ತಿಂಗಳಿನಲ್ಲಿ ಈ ವ್ಯವಸ್ಥೆಯನ್ನು ಹಂತ ಹಂತವಾಗಿ ನಿಲ್ಲಿಸಲಾಗುವುದು. ಈಗಾಗಲೇ ಡಿಜಿಟಲ್ ಸೇವೆ ಗ್ರಾಹಕರಿಗೆ ಲಭ್ಯವಿದೆ. ಗ್ರಾಹಕರು ಡಿಜಿಟಲ್ ಸೇವೆಯನ್ನು ಒಪ್ಪಿದ್ದಾರೆ. ಉತ್ತಮವಾದ ಸೇವೆ ನೀಡುವುದರಿಂದ ಗ್ರಾಹಕರು ಸೆಟ್ ಅಪ್ ಬಾಕ್ಸ್ ಅನ್ನು ಸಹಜವಾಗಿ ಅಪೇಕ್ಷಿಸುತ್ತಿದ್ದಾರೆ. ತಮ್ಮ ಇ ಡಿಜಿಟಲ್ನಲ್ಲಿ ಸುಮಾರು 300 ಕ್ಕೂ ಹೆಚ್ಚು ಚಾನಲ್ಗಳು ಲಭ್ಯವಿದೆ. ಅತ್ಯುತ್ತಮ ಗುಣ ಮಟ್ಟದ ಸುಮಾರು 25 ಹೆಚ್.ಡಿ.ಚಾನಲ್ಗಳು ಹಾಗೂ ಸುಮಾರು 20 ಎಫ್ಎಂ ಸೇವೆಗಳು ಈಗಾಗಲೇ ಗ್ರಾಹಕರಿಗೆ ಲಭ್ಯವಿದೆ. ಮುಂದಿನ ವರ್ಷದ ಆರಂಭದಲ್ಲಿ ಗ್ರಾಹಕರು ತಮ್ಮ ಇಚ್ಛೆ ಅನುಸಾರ ಚಾನಲ್ಗಳನ್ನು ಪಡೆಯಲು ಅವಕಾಶವಿರುವುದರಿಂದ ಗ್ರಾಹಕರಿಗೆ ಈಗ ಎಲ್ಲಾ ಚಾನಲ್ಗಳನ್ನು ವೀಕ್ಷಿಸಲು ಅವಕಾಶ ನೀಡಲಾಗುತ್ತಿದೆ ಎಂದು ಸೋಮಶೇಖರ್ ಹೇಳಿದರು.
ಗ್ರಾಹಕರೂ ಸಹ ತಮಗೆ ಅಗತ್ಯವಾಗಿ ಬೇಕಾಗಿರುವ ಸೆಟ್ ಅಪ್ ಬಾಕ್ಸ್ ಅನ್ನು ಕೇಬಲ್ ಆಪರೇಟರ್ಗಳಿಂದ ಪಡೆದುಕೊಳ್ಳಲು ಸೂಚಿಸಿದರು. ಕೇಬಲ್ ಆಪರೇಟರ್ಗಳೂ ಸಹ ತಮಗೆ ಅಗತ್ಯವಿರುವ ಸೆಟ್ ಅಪ್ ಬಾಕ್ಸ್ ನ್ನು ದಾಸ್ತಾನು ಮಾಡಿಕೊಳ್ಳುವುದು ಅಗತ್ಯ. ದಿನಕಳೆದಂತೆ ಸೆಟ್ ಅಪ್ ಬಾಕ್ಸ್ ಗೆ ಮಾರುಕಟ್ಟೆಯಲ್ಲಿ ಬೇಡಿಕೆ ಬರಲೂಬಹುದು ಹಾಗೂ ಸಿಗದೇ ಇರಲೂಬಹುದು. ಆಗ ದರದಲ್ಲಿ ಏರುಪೇರು ಆಗುವ ಸಾಧ್ಯತೆಯೂ ಇದೆ. ಆದ್ದರಿಂದ ಗ್ರಾಹಕರು ಹಾಗೂ ಕೇಬಲ್ ಆಪರೇಟರ್ಗಳು ಡಿಜಿಟಲ್ನ ಉತ್ತಮ ಸೇವೆ ಒದಗಿಸಲು ಸೆಟ್ ಅಪ್ ಬಾಕ್ಸ್ಗಳನ್ನು ಹೊಂದುವುದು ಅಗತ್ಯವಾಗಿದೆ ಎಂದು ಸೋಮಶೇಖರ್ ಕಿವಿಮಾತು ಹೇಳಿದರು.
ಇ ಡಿಜಿಟಲ್ ನ ಗೋವಿಂದರಾಜು, ತುರುವೇಕೆರೆ ಕೇಬಲ್ ಆಪರೇಟರ್ಗಳ ಸಂಘದ ಗೌರವಾಧ್ಯಕ್ಷ ಟಿ.ಎಂ.ಸತೀಶ್, ತಿಪಟೂರಿನ ಸಂಗಮೇಶ್, ತುಮಕೂರು ಕೇಬಲ್ ಆಪರೇಟರ್ಗಳ ಸಂಘದ ಅಧ್ಯಕ್ಷ ಷಣ್ಮುಖ, ಅಮ್ಮಸಂದ್ರದ ಜಯರಾಮ್ ಮೊದಲಾದವರು ಉಪಸ್ಥಿತರಿದ್ದರು.
ತುರುವೇಕೆರೆ ಕೇಬಲ್ ಆಪರೇಟರ್ಗಳ ಹಾಗೂ ನೌಕರರ ಸಂಘದ ಅಧ್ಯಕ್ಷ ರಾಜಶೇಖರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕರುಣಾನಿಧಿ ಸ್ವಾಗತಿಸಿದರು. ನಾಗಭೂಷಣ್ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

