ತುಮಕೂರು

ಕುರುಬ ಸಮಾಜದ ಯುವಕರಲ್ಲಿ ಜಾಗೃತಿ ಮೂಡಿಸುವುದೇ ನನ್ನ ಗುರಿ: ಮಹಾಲಿಂಗಯ್ಯ

Published On :

ಕನ್ನಡಪ್ರಭ ವಾರ್ತೆ   ತುಮಕೂರು   ಸೆ.2
ಕುರುಬ ಜನಾಂಗದ ಯುವಕರನ್ನು ಜಾಗೃತರಾಗುವಂತೆ ಮಾಡುವುದೇ ನನ್ನ ಮುಖ್ಯ ಉದ್ದೇಶವಾಗಿದೆ ಎಂದು ಕರ್ನಾಟಕ  ಪ್ರದೇಶ ಯುವ ಕುರುಬರ ಸಂಘದ ಜಿಲ್ಲಾಧ್ಯಕ್ಷ ಎ. ಮಹಾಲಿಂಗಯ್ಯ ತಿಳಿಸಿದರು.
ಪಾವಗಡ ತಾಲೂಕಿನ ವೈ.ಎನ್. ಹೊಸಕೊಟೆ ಹೋಬಳಿ ಘಟಕದ ಉದ್ಘಾಟನೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಕುರುಬ ಸಮಾಜವು ರಾಜ್ಯದಲ್ಲಿ ಅನೇಕ ತೊಂದರೆಗಳಿಂದ ಬಳಲುತ್ತಿದ್ದು, ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು  ಪಡೆದುಕೊಳ್ಳುವಲ್ಲಿ ಹಿಂದೆ ಉಳಿದಿದೆ. ಕುರುಬ ಜನಾಂಗವು ಹೈನುಗಾರಿಕೆಯಲ್ಲಿ ಹೆಚ್ಚಾಗಿ ತೊಡಗಿದ್ದು, ಕುರಿಗಳನ್ನು ಕಾಡು ಮೇಡುಗಳಲ್ಲಿ ಮೇಯಿಸಿಕೊಂಡು ಜೀವನ ನಡೆಸುತ್ತಿದ್ದು, ಇಂದಿಗೂ ಕೂಡ ಯುವಕರು ಸಮಾಜ ಮುಖಿಗಳಾಗಿ ಹೊರ ಬರುತ್ತಿಲ್ಲ ಎಂದು ವಿಷಾದಿಸಿದರು.
ಆದ್ದರಿಂದ ಯುವಕರು ಎಚ್ಚೆತ್ತುಕೊಂಡು ಒಮ್ಮತದಲ್ಲಿ ಸಂಘಟಿತರಾಗಿ ಕುರುಬ ಸಮಾಜವನ್ನು ಬೆಳೆಸಬೇಕಾಗಿದೆ. ರಾಜ್ಯದಲ್ಲಿ ಕುರುಬ ಸಮಾಜವು ಅನೇಕ ಕಾರಣಗಳಿಂದ ಹಿಂದೆ ಉಳಿಯುತ್ತಿರುವುದರ ಉದ್ದೇಶದಿಂದ ನಾನು ಜಿಲ್ಲಾದ್ಯಂತ ಪ್ರತಿಯೊಂದು ಹೋಬಳಿ, ತಾಲೂಕಿಗೆ ಪ್ರಯಾಣ ಬೆಳೆಸಿ ಯುವಕರನ್ನು ಒಗ್ಗೂಡಿಸಿ ಮುಂದೆ  ತರುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಮಾಡುತ್ತಿದ್ದೇನೆಂದು ತಿಳಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿ.ಪಂ. ಮಾಜಿ ಸದಸ್ಯ ಪೂಜಾರ್ ಚೌಡಪ್ಪ ಅವರು ಇಂದಿನ ಯುವಕರು ಸಂಘ ಸಂಸ್ಥೆಗಳನ್ನು ಕಟ್ಟುತ್ತಿರುವುದು ಸಂತೋಷದ ವಿಷಯವಾಗಿದೆ.  ಪ್ರತಿಯೊಬ್ಬ ಯುವಕರು ಜಾಗೃತರಾಗುತ್ತಿರುವುದು ಉತ್ತಮವಾದ ಕೆಲಸವಾಗಿದೆ ಎಂದರು. ನಂತರ ಜಿಲ್ಲಾಧ್ಯಕ್ಷ ಎ. ಮಹಾಲಿಂಗಯ್ಯ ಮಾತನಾಡಿದರು. ಈ ಸಮಾರಂಭದಲ್ಲಿ ಜಿಲ್ಲಾ ನಿರ್ದೇಶಕ ಪಿ. ಅನಿಲ್ಕುಮಾರ್,  ವೈ ಬಸವರಾಜು, ತಾಲೂಕು ಗೌರವಾಧ್ಯಕ್ಷ ಟಿ.ಎ. ರಾಮಾಂಜಿನಪ್ಪ, ತಾಲೂಕು ಅಧ್ಯಕ್ಷ ಪಿ.ಎಲ್. ದೇವರಾಜು, ಪ್ರಧಾನ ಕಾರ್ಯದರ್ಶಿ ಎನ್. ಕೃಷ್ಣಮೂರ್ತಿ , ಖಜಾಂಚಿ ಪಿ.ಎಲ್ಎಸ್ ಬಾಬು ಹೋಬಳಿ ಘಟಕದ ಗೌರವಾಧ್ಯಕ್ಷರಾಗಿ ಡಾ. ಬೊಂಶಂಕರಪ್ಪ, ಅಧ್ಯಕ್ಷರಾಗಿ ಎಚ್.ಸಿ ಮುರುಳಿಧರ, ಉಪಾಧ್ಯಕ್ಷರಾಗಿ ಎಸ್. ವೆಂಕಟೇಶ್, ರಾಮಾಂಜಿ (ಸಿದ್ದಾಪುರ), ಹನುಮಂತರಾಯ (ಆರ್.ಡಿ.ಕೊಪ್ಪ), ಕಾರ್ಯಾಧ್ಯಕ್ಷ ಗಂಗಪ್ಪ, ಪ್ರಧಾನ ಕಾರ್ಯದರ್ಶಿ ನಂದೀಶ್. ಸಿ, ಸಹಕಾರ್ಯದರ್ಶಿ ತಿಪ್ಪೆಸ್ವಾಮಿ ಕೆ, ಸಂ. ಕಾರ್ಯದರ್ಶಿ ಶಿವಲಿಂಗ, ಖಜಾಂಚಿ ಎಚ್.ಆರ್. ದೇವರಾಜು ಆಯ್ಕೆಯಾಗಿ ಸುಮಾರು ನೂರಾರು ಕುರುಬ ಸಮಾಜದ ಯುವಕರು ಪ್ರಮಾಣ ವಚನ ಸ್ವೀಕರಿಸಿದರು. ಶಿಕ್ಷಕ ಶಿವಣ್ಣ ಸ್ವಾಗತಿಸಿ, ನಾಗೇಂದ್ರ ವಂದಿಸಿದರು. ಎನ್. ಕೃಷ್ಣಮೂರ್ತಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.