ಸತ್ಯ ಅರಿತು ಆರಾಧಿಸಿದಾಗ ಆತ್ಮಸಾಕ್ಷಾತ್ಕಾರ ಸಾಧ್ಯ: ಎಂ.ಎಚ್. ಗೋಪಾಲ್ ಅಭಿಮತ
ತುಮಕೂರು: ಸದ್ಗುರುವಿನ ಸತ್ಯ ಅರಿತು ಆರಾಧಿಸಿದಾಗ ಆತ್ಮಸಾಕ್ಷಾತ್ಕಾರ ಸಾಧ್ಯ ಎಂದು ಶ್ರೀ ಸಾಯಿ ಚೇತನ ಚಾರಿಟಬಲ್ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಎಚ್. ಗೋಪಾಲ್ ಅಭಿಪ್ರಾಯಪಟ್ಟರು.
ಅವರು ಜಯನಗರ ಪೂರ್ವ ಬಡಾವಣೆಯಲ್ಲಿರುವ ಸಾಯಿಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಲಾಗಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾನವ ಜೀವನ ಅಮೂಲ್ಯವಾದುದು. ಮರಣ ಅನಿವಾರ್ಯವೆಂದು ಗ್ರಹಿಸಿ ಮನುಷ್ಯನು ಯಾವಾಗಲೂ ಜಾಗರೂಕನಾಗಿದ್ದು ಜೀವನವನ್ನು ಸಾರ್ಥಕವನ್ನಾಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಬೇಕು. ಪಾಪ ಹಾಗೂ ಅಹಂಕಾರಗಳು ನಾಶವಾಗದ ಹೊರೆತು ಜ್ಞಾನ ಪ್ರಾಪ್ತವಾಗುವುದಿಲ್ಲ ಎಂದರು.
ಮನುಷ್ಯ ಸಂಸಾರ ಬಂಧನದಿಂದ ಹೊರಬರಬೇಕು. ತನ್ನಲ್ಲಿರುವ ಅರಿಷಡ್ವರ್ಗಗಳೆಂಬ ಆಂತರಿಕ ಶತೃಗಳನ್ನು ನಿಗ್ರಹಿಸಬೇಕು. ಇದಕ್ಕೆ ಸದ್ಗುರುವಿನ ಸತ್ಯದ ಅರಿವು ಮತ್ತು ಅವನ ನೆರವು ಅಗತ್ಯ. ಅಂತಹ ಸದ್ಗುರುವೇ ಶ್ರೀ ಶಿರಡಿ ಸಾಯಿಬಾಬ. ಸಾಯಿಬಾಬಾರವರಿಗಿಂತ ಮಿಗಿಲಾದ ಉದಾರಿ ಮತ್ತು ದಯಾಳು ಮತ್ತೊಬ್ಬರಿಲ್ಲ. ಶ್ರೀ ಸಾಯಿ ಒಬ್ಬ ಮಹಾತ್ಮ ಎಂದರು.
ಯಾರು ಸಾಯಿ ಶಕ್ತಿಯನ್ನು ಗ್ರಹಿಸುವರೋ ಅಂತಹವರಿಗೆ ಪ್ರೇಮ, ವಿಶ್ವಾಸ, ಭಕ್ತಿ ಸಹಜವಾಗಿ ಲಭಿಸುವುದು. ಸದ್ಗುರುವನ್ನು ಅರಿತು ಆರಾಧಿಸಿದಾಗ ಜ್ಞಾನ ಮತ್ತು ಆತ್ಮಸಾಕ್ಷಾತ್ಕಾರಗಳು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಸಾಯಿ ಭಜನಾ ಕೈಂಕರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಿವೃತ್ತ ಉಪನ್ಯಾಸಕ ವೀರಮಲ್ಲಯ್ಯ ಅವರನ್ನು ಗೌರವಿಸಲಾಯಿತು. ಸಾಯಿಚೇತನ ಚಾರಿಟಬಲ್ ಟ್ರಸ್ಟ್ನ ಗೌರವಾಧ್ಯಕ್ಷ ಎಸ್. ಮಹದೇವಯ್ಯ, ಉಪಾಧ್ಯಕ್ಷ ಬಿ.ಆರ್. ಪರಮೇಶ್, ಪ್ರಧಾನ ಕಾರ್ಯದರ್ಶಿ ವೀರಪ್ಪ ದೇವರು, ಟ್ರಸ್ಟಿಗಳಾದ ಮಹಾಲಕ್ಷ್ಮೀ, ಪದ್ಮಾ, ಎಚ್. ಲೋಕೇಶ್ ಮತ್ತು ಸಾಯಿಮಂದಿರದ ಅರ್ಚಕ ಹರಿಪ್ರಸಾದ್ ಉಪಾಧ್ಯಾಯ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

