ಎಲ್ಲ ಶಾಲೆಗಳಲ್ಲೂ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಿ: ಶಾಸಕ
ಮಧುಗಿರಿ: ತಾಲೂಕಿನ ಎಲ್ಲ ಶಾಲೆಗಳಲ್ಲೂ ಹೆಣ್ಣುಮಕ್ಕಳಿಗೆ ಕಡ್ಡಾಯವಾಗಿ ಪ್ರತ್ಯೇಕ ಶೌಚಾಲಯ ನಿರ್ಮಿಸಬೇಕು ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವತಿಯಿಂದ ಪಟ್ಟಣದ ಮಾಲಿಮರಿಯಯಪ್ಪ ರಂಗಮಂದಿರದಲ್ಲಿ ಏರ್ಪಡಿಸಿದ್ದ 2013-14ನೇ ಸಾಲಿನ ಶಿಕ್ಷಕರ ದಿನಾಚರಣೆ ಮತ್ತು ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಪಕ್ಷ ಭೇದವಿಲ್ಲದೆ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಬೇಕು.ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಶಾಲೆಗಳಲ್ಲೂ ಹೆಣ್ಣು- ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯವಿರಬೇಕು ಎಂದ ಅವರು, ಅಧಿಕಾರಿಗಳು ಸಕಾಲದಲ್ಲಿ ವಿದ್ಯಾರ್ಥಿ ವೇತನ ತರಿಸಿ ಕೊಡಬೇಕು. ಶಿಕ್ಷಕರು ಮಕ್ಕಳ ಜತೆ ಬೆರೆತು ಅವರ ಜ್ಞಾನಾರ್ಜನೆಗೆ ಅಧಿಕ ಒತ್ತು ಕೊಡಬೇಕು. ಕಂದಾಯ ಅಧಿಕಾರಿಗಳು ಜಾತಿ ಮತ್ತು ವರಮಾನ ಪ್ರಮಾಣ ಪತ್ರವನ್ನು ಆಯಾಯ ಶಾಲೆಯಲ್ಲೇ ಮಕ್ಕಳಿಗೆ ಮಾಡಿಕೊಡಬೇಕು ಎಂದು ತಾಕೀತು ಮಾಡಿದರು.
ಮುಖ್ಯ ಭಾಷಣಕರರಾಗಿ ಆಗಮಿಸಿದ್ದ ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಮಾತನಾಡಿ, ಶಿಕ್ಷಕ ಬಹು ಸಂಸ್ಕೃತೀಯ ರಕ್ಷಕನಾಗಬೇಕು. ಶಾಲೆಗೆ ಎಲ್ಲ ವರ್ಗದ, ವರ್ಣದ ಜನಾಂಗದ ಮಕ್ಕಳು ಬರುವುದರಿಂದ ಸೌಹಾರ್ದ ಮತ್ತು ಬ್ರಾತೃತ್ವ ಮನೋಭಾವ ಬೆಳಸಬೇಕು. ವಿದ್ಯಾರ್ಥಿಗಳನ್ನು ಬುದ್ಧಿವಂತರನ್ನಾಗಿ ರೂಪಿಸುವ ಜೊತೆಗೆ ಹೃದಯವಂತರನ್ನಾಗಿ ರೂಪಿಸಬೇಕು. ದೇಶದ ಭವಿಷ್ಯ ನಾಲ್ಕೂ ಗೋಡೆಗಳ ಮಧ್ಯ ರೂಪುಗೊಳ್ಳತ್ತದೆ ಎಂದರು. ತಾ.ಪಂ.ಅಧ್ಯಕ್ಷೆ ಯಶೋಧ ರಾಜಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಉಪವಿಭಾಗಾಧಿಕಾರಿ ತಬಸ್ಸುಮ್ ಹೇರಾ, ಜಿ.ಪಂ.ಸದಸ್ಯ ಎಚ್.ಕೆಂಚಮಾರಯ್ಯ ಮಾತನಾಡಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಜಿ.ಪಂ.ಸದಸ್ಯ ಮಂಜುಳಾ ವೀರೇಂದ್ರ ಪ್ರಸಾದ್, ಉಪಾಧ್ಯಕ್ಷೆ ಸಿದ್ಧಾಗಂಗಾಂಭಿಕೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಲ್ಲಿಕಾರ್ಜುನಯ್ಯ, ರಾಜ್ ಗೋಪಾಲ್, ಗುಟ್ಟೆ ಚಿಕ್ಕರಂಗಪ್ಪ, ಪುರಸಭೆ ಸದಸ್ಯ ಎನ್. ಗಂಗಣ್ಣ,ನೌಕರರ ಸಂಘ ಅಧ್ಯಕ್ಷ ಮಹಾಲಿಂಗೇಶ್, ಶಿಕ್ಷಕ ರಂಗಧಾಮಯ್ಯ ಮೊದಲಾದವರು ಉಪಸ್ಥಿತರಿದ್ದರು. ಬಿಇಓ ವೈ.ಎನ್. ರಾಮಕೃಷ್ಣಯ್ಯ ಸ್ವಾಗತಿಸಿ ಮಂಜುನಾಥ್ ವಂದಿಸಿದರು.
ನಾಳೆ ಕಾಂಗ್ರೆಸ್ ವೀಕ್ಷಕರು ಮಧುಗಿರಿಗೆ
ಮಧುಗಿರಿ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸುವ ಸಲುವಾಗಿ ಕಾಂಗ್ರೆಸ್ ವೀಕ್ಷಕರು ಸೆ.7 ರ ಶನಿವಾರ ಮಧ್ಯಾಹ್ನ 2 ಗಂಟೆಗೆ ಮಧುಗಿರಿಗೆ ಆಗಮಿಸಲಿದ್ದಾರೆ. ವೀಕ್ಷಕರಾದ ಬಿ.ಎಲ್. ಶಂಕರ್, ಮಹಿಮಾ ಪಟೇಲ್, ಪಿ.ಎನ್.ಮಂಜುನಾಥ್ ಹಾಗೂ ಧನಂಜಯ್ ಆಗಮಿಸುವರು. ಇದರ ಅಂಗವಾಗಿ ಪಟ್ಟಣದ ಮಾಲೀಮರಿಯಪ್ಪ ರಂಗಮಂದಿರದಲ್ಲಿ ಮುಖಂಡರ ಹಾಗೂ ಕಾರ್ಯಕರ್ತರ ಸಭೆ ಏರ್ಪಡಿಸಲಾಗಿದೆ. ಶಾಸಕ ಕೆ.ಎನ್.ರಾಜಣ್ಣ, ಜಿಲ್ಲಾಧ್ಯಕ್ಷ ಷಫಿ ಅಹಮದ್ ಸೇರಿದಂತೆ ಕಾಂಗ್ರೆಸ್ ಗಣ್ಯರು ಭಾಗವಹಿಸಲಿದ್ದಾರೆ. ಆದ ಕಾರಣ ಕಾರ್ಯಕರ್ತರು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆ ಯಶಸ್ವಿಗೊಳಿಸುವಂತೆ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

