ಎಸ್ಸಿ, ಎಸ್ಟಿ ಒಬಿಸಿ ಹಾಸ್ಟೆಲ್ ಸುಧಾರಣೆಗೆ ಎಬಿವಿಪಿ ಪ್ರತಿಭಟನೆ
ತುಮಕೂರು: ಎಸ್ಸಿ, ಎಸ್ಟಿ, ಒಬಿಸಿ ಹಾಸ್ಟೆಲ್ ಸುಧಾರಣೆಗೆ ಆಗ್ರಹಿಸಿ ಶುಕ್ರವಾರ ಎಬಿವಿಪಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತುಮಕೂರಿನ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಎಬಿವಿಪಿ ಪದಾಧಿಕಾರಿಗಳು ಪ್ರತಿಭಟನೆ ಹಮ್ಮಿಕೊಂಡಿದ್ದರು. ಬೆಲೆ ಏರಿಕೆಯಿಂದಾಗಿ ತರಕಾರಿ, ಅಕ್ಕಿ, ಬೇಳೆ, ನಿರುಳ್ಳಿ, ಗ್ಯಾಸ್ ಇದರ ಬೆಲೆ ಗಗನ ಕುಸುಮವಾಗಿದೆ. ಇಂತಹ ಸಂದರ್ಭದಲ್ಲಿ ಈ ಹಿಂದಿನ ಸರ್ಕಾರ ವಿದ್ಯಾರ್ಥಿಗಳಿಗೆ 850 ರಿಂದ 1 ಸಾವಿರಕ್ಕೆ ತಿಂಗಳ ಊಟದ ಖರ್ಚನ್ನು ನೀಡುವುದಾಗಿ ಬಜೆಟ್ನಲ್ಲಿ ಘೋಷಣೆ ಮಾಡಿತ್ತು.
ಆದರೆ ಈ ಸರ್ಕಾರ ಆ ಯೋಜನೆಯನ್ನು ರದ್ದು ಮಾಡಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ತೊಂದರೆಯನ್ನು ನೀಡುತ್ತಿದೆ. ಆದರಿಂದ ಈ ಕೂಡಲೇ ಸರಕಾರ ಊಟದ ವೆಚ್ಚವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.
ದಿನದಿಂದ ದಿನಕ್ಕೆ ಕಾಲೇಜುಗಳ ಸಂಖ್ಯೆ, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಎಂಥ ಕಡು ಬಡತನದಲ್ಲಿ ತನ್ನ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕೆಂಬ ಮಹಾ ಕನಸುಗಳನ್ನು ಅನೇಕರು ಕಟ್ಟಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ಹಾಸ್ಟೆಲ್ಗಳ ಸಂಖ್ಯೆ ಮಾತ್ರ ಆ ಪ್ರಮಾಣಕ್ಕುನುಗುಣವಾಗಿ ಹೆಚ್ಚಾಗುತ್ತಿಲ್ಲ ಎಂದು ದೂರಿದ್ದಾರೆ.
ಹಾಸ್ಟೆಲ್ಗಾಗಿ ಅರ್ಜಿ ಹಾಕಿರುವ ವಿದ್ಯಾರ್ಥಿಗಳಲ್ಲಿ ಕನಿಷ್ಠ ಶೇ. 50 ರಷ್ಟು ವಿದ್ಯಾರ್ಥಿಗಳಿಗಾದರೂ ಹಾಸ್ಟೆಲ್ ಒದಗಿಸಲು ಅಗತ್ಯವಾದ ಹೊಸ ಹಾಸ್ಟೆಲ್ಗಳನ್ನು ತುರ್ತಾಗಿ ಬರುವ ವರ್ಷದಿಂದಲೇ ಪ್ರಾರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿರುವ ಹಾಸ್ಟೆಲ್ಗಳ ಶೇ. 55 ವಿದ್ಯಾರ್ಥಿಗಳಿಗೆ ಕೊಠಡಿ ಸೌಲಭ್ಯವಿಲ್ಲ. ಹಾಗಾಗಿ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿ ಹಾಸ್ಟೆಲ್ನಲ್ಲೂ ಒಂದು ಶೈಕ್ಷಣಿಕ ಚಟುವಟಿಕಾ ಕೇಂದ್ರ ರಚಿಸಬೇಕು. ಆ ಊರಿನ ಕ್ರಿಯಾಶೀಲ ಎನ್ ಎಸ್ಎಸ್ ಎನ್ಸಿಸಿ ಅಧ್ಯಾಪಕರಿಗೆ, ಕಾಲೇಜಿಗೆ, ಸಂಘ ಸಂಸ್ಥೆಗೆ ಜವಾಬ್ದಾರಿಯನ್ನು ನೀಡಿ, ವಿಶೇಷ ಅನುದಾನ ಹಾಗೂ ಗೌರವಧನವನ್ನು ಒದಗಿಸಿ ವಿವಿಧ ರೀತಿಯ ತರಬೇತಿ ಕಾರ್ಯಕ್ರಮಗಳನ್ನು ಸಂಘಟಿಸಬೇಕು ಎಂದಿದ್ದಾರೆ.
ಹಾಸ್ಟೆಲ್ ಹೋರಾಟ ಸಮಿತಿ ರಾಜ್ಯ ಸಹ ಸಂಚಾಲಕ ಸುಬ್ರಮಣಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಅಮರೇಶ್, ನಗರ ಸಂಘಟನಾ ಕಾರ್ಯದರ್ಶಿ ಚೇತನ್ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

