ತುಮಕೂರು

'ಸಮಾಜಮುಖಿ ಅಧ್ಯಾಪಕರ ಸಂಖ್ಯೆ ವಿರಳ'

Published On :

ತುಮಕೂರು: ಇಂದಿನ ದಿನಮಾನದಲ್ಲಿ ಸಮಾಜಮುಖಿ ಚಿಂತನೆಯ ಅಧ್ಯಾಪಕರ ಸಂಖ್ಯೆ ಕಡಿಮೆಯಾಗುತ್ತಿದ್ದು, ಪರಮೇಶ್ವರರಾವ್ ಅವರಂತಹ ಶಿಕ್ಷಕರನ್ನು ಹೊಸ ತಲೆಮಾರಿನವರು ಆದರ್ಶವಾಗಿ ಪರಿಗಣಿಸಬೇಕಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಸೋ.ಮು.ಭಾಸ್ಕರಚಾರ್ ಸಲಹೆ ನೀಡಿದರು.
ಇಲ್ಲಿನ ಎಚ್ಎಂಟಿ ವಸತಿಗೃಹದ ಆವರಣದಲ್ಲಿ ಡಾ.ಜಿ.ವೆಂಕಟೇಶಲು ಅಭಿಮಾನಿ ಬಳಗ, ಸ್ನೇಹಾದ್ರಿ ಸ್ವಸಹಾಯ ಸಂಘ ಹಾಗೂ ಜಿಲ್ಲಾ ಕಸಾಪ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಶಿಕ್ಷಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮೌಲ್ಯ ರಹಿತ ಬದುಕು ಅದು ಬದುಕಲ್ಲ. ಶಿಕ್ಷಕ ವೃತ್ತಿಯಿಂದ ಉನ್ನತ ಸ್ಥಾನಕ್ಕೇರಿದ ಮಾಜಿ ರಾಷ್ಟ್ರಪತಿ ರಾಧಾಕೃಷ್ಣನ್, ಶಿಕ್ಷಣ ತಜ್ಞ ಎಚ್. ನರಸಿಂಹಯ್ಯ ಬದುಕನ್ನು ಅವಲೋಕಿಸಿದರೆ ಮೌಲ್ಯಗಳನ್ನೇ ಜೀವನವಾಗಿಸಿಕೊಂಡಿರುವುದು ವೇದ್ಯವಾಗುತ್ತದೆ. ಇಂದಿಗೂ ನಮ್ಮ ಸಮಾಜದಲ್ಲಿ ಮೌಲ್ಯಗಳು ಉಳಿದುಕೊಂಡಿವೆ ಎಂಬುದಕ್ಕೆ  ಪರಮೇಶ್ವರರಾವ್ ಅಂತಹ ಬಹುಮುಖಿ ಪ್ರತಿಭೆಯ ಶಿಕ್ಷಕರೇ ನಿದರ್ಶನ ಎಂದರು.
ಇಂದು ಶಿಕ್ಷಣ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳು ಕಲುಷಿತಗೊಳ್ಳುತ್ತಿವೆ ಎಂದು ವಿಷಾದಿಸಿದ ಭಾಸ್ಕರಚಾರ್ ಅವರು ಸಮಾಜಕ್ಕೆ ಭದ್ರ ಅಡಿಪಾಯ ಹಾಕುವ ಕೆಲಸ ಶಿಕ್ಷಕರಿಂದ ಆಗಬೇಕಿದೆ. ಶಿಕ್ಷೆಯಿಂದ ಶಿಕ್ಷಣ ಎಂಬ ಹಿಂದಿನ ಕಲಿಕಾ ಪದ್ದತಿ ಹೋಗಿ ವಿದ್ಯಾರ್ಥಿಗಳೊಡನೆ ಸ್ನೇಹಿತರಾಗಿ ಕಲಿಸುವ ಪದ್ಧತಿ ರೂಡಿಗೆ ಬಂದಿದೆ.
ವಿದ್ಯಾರ್ಥಿಗಳನ್ನು ಗುಣವಂತರಾಗಿ ಸೇವಾಮನೋಭಾವವುಳ್ಳವರನ್ನಾಗಿ ರೂಪಿಸುವ ಮಹತ್ತರ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದು ನುಡಿದು ಆದರ್ಶ ಶಿಕ್ಷಕರನ್ನು ಗುರುತಿಸಿ ಗೌರವಿಸುತ್ತಿರುವ ಕಾರ್ಯ ಶ್ಲಾಘನೀಯವೆಂದರು. ನಿವೃತ್ತ ಶಿಕ್ಷಕ ಪರಮೇಶ್ವರರಾವ್ ದಂಪತಿಯನ್ನು ಸನ್ಮಾನಿಸಿ ಮಾತನಾಡಿದ ಎಚ್ಎಂಟಿ ನಿವೃತ್ತ ಉಪ ಮಹಾಪ್ರಬಂಧಕ ಡಾ.ಜಿ.ವೆಂಕಟೇಶಲು ರಂಗಭೂಮಿ ಕಲಾವಿದರಾಗಿ, ಶಿಕ್ಷಕರಿಗೆ ಸೇವಾ ಕಾರ್ಯಗಳಿಗೆ ತಮ್ಮ ವೃತ್ತಿಯನ್ನು ಮೀಸಲಿಟ್ಟ ಶಿಕ್ಷಕ ರಾಮಚಂದ್ರರಾವ್ ಅವರ ಬದುಕು ನಮಗೆಲ್ಲ ಅನುಕರಣೀಯ. ಇಂತಹವರನ್ನು ಸಮಾಜ ಗುರುತಿಸುವ ಕಾರ್ಯ ಆಗಬೇಕಿದೆ ಎಂದು ಆಶಿಸಿದರು.
ಭವಿಷ್ಯ ನಿಧಿ ಪ್ರಾದೇಶಿಕ ಆಯುಕ್ತ ಬಾಲಕೃಷ್ಣನಾಯಕ್ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸ್ನೇಹಾದ್ರಿ ಸ್ವಸಹಾಯ ಸಂಘದ ಅಧ್ಯಕ್ಷ ಚಿ.ನಿ.ಪುರುಷೋತ್ತಮ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈವಜ್ಞ ನರಸಿಂಹರಾವ್, ಎಚ್ಎಂಟಿ ಅಧಿಕಾರಿ ಬಿ.ಎಲ್. ರವೀಂದ್ರಕುಮಾರ್ ಮಾತನಾಡಿದರು.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.