ಗುರು ಸ್ಥಾನಕ್ಕೆ ಹಿಂದಿನ ದಿನಗಳ ಮೌಲ್ಯ ಇಲ್ಲದಿರುವುದು ಕಟು ಸತ್ಯ
ತುಮಕೂರು: ಶಿಕ್ಷಕ ವೃತ್ತಿಯೂ ಒಂದು ಉದ್ಯೋಗ. ಗುರು ಎಂಬ ಸ್ಥಾನಕ್ಕೆ ಹಿಂದಿನ ದಿನಗಳ ಮೌಲ್ಯ ಇಂದು ಇಲ್ಲದಿರುವುದು ಕಟು ಸತ್ಯ. ಇದಕ್ಕೆ ಶಿಕ್ಷಕ, ಸಮಾಜ, ವಿದ್ಯಾರ್ಥಿಗಳೂ ಕಾರಣರಾಗಿದ್ದಾರೆ ಎಂದು ನಿವೃತ್ತ ಪ್ರಾಂಶುಪಾಲ ಡಾ. ಎಚ್.ಎಸ್. ನಿರಂಜನಾರಾಧ್ಯ ಅಭಿಪ್ರಾಯಪಟ್ಟರು. ಅವರು ಸಿದ್ಧಗಂಗಾ ಮಹಿಳಾ ಕಾಲೇಜಿನ ಶಿಕ್ಷಕರ ಸಂಘ ಅಕ್ಕಮಹಾದೇವಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಇಂದು ಶೇ 90 ರಷ್ಟು ಶಿಕ್ಷಕರಿಗೆ ತಮ್ಮ ಹುದ್ದೆಯ ಸ್ಥಾನದ ಅರಿವಿದೆ. ಶಿಕ್ಷಣ ರಂಗದಲ್ಲಿ ಇರುವುದಕ್ಕಿಂತ ಅನೈತಿಕತೆಯನ್ನು ಇತರೆ ಎಲ್ಲಾ ಕ್ಷೇತ್ರದ ಇಲಾಖೆಗಳಲ್ಲಿಯೂ ಗಮನಿಸಬಹುದು. ಆದರೆ ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಎನ್ನುವಂತೆ ಎಲ್ಲದಕ್ಕೂ ಶಿಕ್ಷಕರನ್ನು ದೂಷಿಸುವುದು ಸರಿಯಲ್ಲ ಎಂದರು. ಶಿಕ್ಷಕರಲ್ಲಿ ಉದ್ಯೋಗಕ್ಕೂ ಮೀರಿದ ಅಂತಃಕರಣ ಇದೆ. ಬದ್ಧತೆ ಇದೆ. ಅದನ್ನು ಎಲ್ಲಡೆ ಪ್ರದರ್ಶನಕ್ಕಿಟ್ಟು ಸಮಾಜದಿಂದ ಅನುಕಂಪ ಹೊಗಳಿಕೆಯ ಕಿರೀಟ ಗಿಟ್ಟಿಸುವ ಪ್ರಚಾರಪ್ರಿಯತೆ ಬೆಳೆಸಿಕೊಳ್ಳಬೇಕಾಗಿಲ್ಲ ಎಂದು ಖಾರವಾಗಿ ನುಡಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀ ಸಿದ್ಧಗಂಗಾ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ನಾಗಭೂಷಣ ಅವರು ಪ್ರಜೆಗಳನ್ನು ನಿರ್ಮಾಣ ಮಾಡುವ ಹೊಣೆ ಶಿಕ್ಷಕರದಾಗಿದೆ. ಆದ್ದರಿಂದ ಶಿಕ್ಷಕರ ಜವಾಬ್ದಾರಿ ಹಿಂದಿಗಿಂತ ಇಂದು ಹೆಚ್ಚಾಗಿದೆ ಎಂದರು. ಇಂದು ಜಾಗತೀಕರಣದ ಪರಿಣಾಮವಾಗಿ ಸ್ಪರ್ಧಾ ಪ್ರಪಂಚವೇ ಸೃಷ್ಟಿಯಾಗಿದೆ. ಆಧುನಿಕತೆಗೆ ತಕ್ಕಂತೆ ಶಿಕ್ಷಕರು ಬೋಧನಾ ಕೌಶಲ್ಯವನ್ನು ರೂಢಿಸಿಕೊಳ್ಳಬೇಕು ಅಲ್ಲದೆ ತಮ್ಮ ಗುಣಮಟ್ಟ ಹೆಚ್ಚಿಸಿಕೊಂಡರೆ ವಿದ್ಯಾರ್ಥಿಗಳ ಗುಣಮಟ್ಟವನ್ನು ಹೆಚ್ಚಿಸಲು ಸಾಧ್ಯ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

