ತುಮಕೂರು

ಸಾರಿಗೆ ಘಟಕದ ವ್ಯವಸ್ಥಾಪಕರಿಗೆ ಹಿಗ್ಗಾ ಮುಗ್ಗಾ ತರಾಟೆ

Published On :

ಪಾವಗಡ: ಪ್ರಯಾಣಿಕ್ಕೆ ತೊಂದರೆ ಆದ ಹಿನ್ನೆಲೆಯಲ್ಲಿ ಪಟ್ಟಣದ ಡಿಪೋ ಬಳಿ ತೆರಳಿದ ನೂರಾರು ಮಂದಿ ಪ್ರಯಾಣಿಕರು ಸಾರಿಗೆ ಘಟಕದ ವ್ಯವಸ್ಥಾಪಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಛೀಮಾರಿ ಹಾಕಿದ ಘಟನೆ ಗುರುವಾರ ಕೆಎಸ್ಆರ್ಟಿಸಿ ಘಟಕದಲ್ಲಿ ನಡೆದಿದೆ.
ಪಾವಗಡ, ತುಮಕೂರು ಮಾರ್ಗವಾಗಿ ಪ್ರತಿ ದಿನ 4 ಬಾರೀ ಓಡಾಡಲು ಹಳೇ ತುಕ್ಕು ಹಿಡಿದ ಕೆಎಸ್ಆರ್ಟಿಸಿ ಬಸ್ ಒಂದನ್ನು ನಿಯೋಜಿಸಿದ್ದು ಇದು ಪ್ರತಿದಿನ ಓಡಾಡುವಾಗ ಎಲ್ಲೆಂದರಲ್ಲೇ ಕೆಟ್ಟುಹೋಗಿ ಪ್ರಯಾಣಿಕರಿಗೆ ತುಂಬ ತೊಂದರೆ ಆಗುತ್ತಿರುವುದಾಗಿ ತಿಳಿದಿದೆ. ಇದೇ ತುಕ್ಕು ಹಿಡಿದ ಹಳೇ ಸರ್ಕಾರಿ ಬಸ್ ಗುರುವಾರ ಬೆಳಿಗ್ಗೆ 11ಗಂಟೆಗೆ ಪಾವಗಡ ಬಸ್ ನಿಲ್ದಾಣದಿಂದ ಹೊರಟು  ಸುಮಾರು 5ಕಿಮೀ ಸಂಚರಿಸಿದ ನಂತರ ರಾಜವಂತಿ ಗಡಿ ಪ್ರದೇಶದಲ್ಲಿ ಬಸ್ ಕೆಟ್ಟು ಹೋಯಿತು. ಸುಮಾರು 2ಗಂಟೆ ಕಳೆದರೂ ಬಸ್ ಮಾತ್ರ ರಿಪೇರಿ ಆಗದ ಕಾರಣ ನಿಗದಿತ ಅವಧಿಗೆ ಇಲಾಖೆಯ ಕೆಲಸ ಕಾರ್ಯಗಳಿಗೆ ಮಧುಗಿರಿ, ತುಮಕೂರು ಮತ್ತು ಬೆಂಗಳೂರು ಮಾರ್ಗವಾಗಿ ತೆರಳಲು ಆಗಮಿಸಿದ್ದ ಸರ್ಕಾರಿ ನೌಕರರು, ಇತರೆ ಕೆಲಸ ಕಾರ್ಯಗಳಿಗೆ ಹೋಗಬೇಕಿದ್ದ ಸಾಮಾನ್ಯ ಜನತೆ ಕಂಗಾಲಾಗಿ ಬಸ್ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸ್ವಲ್ಪ ಮಟ್ಟಿಗೆ ಬಸ್ ರಿಪೇರಿ ಆದ ನಂತರ ಅದೇ ಬಸ್ನಲ್ಲಿ ಹತ್ತಿದ ಪ್ರಯಾಣಿಕರು ಚಾಲಕನಿಗೆ ಬಸ್ ವಾಪಸು ತಿರುಗಿಸಲು ಸೂಚಿಸಿ ಪಟ್ಟಣದ ಡಿಪೋ ಬಳಿ ಕರೆದೊಯ್ದು ಈ ಬಸ್ ನಿಯೋಜಿಸಿರುವ ಬಗ್ಗೆ ಡಿಪೋ ವ್ಯವಸ್ಥಾಪಕ ರಂಗಸ್ವಾಮಿ ಎಂಬುವರನ್ನು ಪ್ರಶ್ನಿಸಿದರು. ತುಮಕೂರಿಗೆ ತೆರಳಲು ವ್ಯವಸ್ಥಿತವಾದ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ಪ್ರಯಾಣಿಕರು ಒತ್ತಾಯಿಸಿದರು.
ಇದಕ್ಕೆ ಡಿಪೋ ವ್ಯವಸ್ಥಾಪಕ ನಿರಾಕರಿಸಿ ಬೇಜಾವಾಬ್ದಾರಿಯಿಂದ ವರ್ತಿಸಿದ್ದ ಹಿನ್ನೆಲೆಯಲ್ಲಿ ಡಿಪೋ  ವ್ಯವಸ್ಥಾಪಕರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡ ಕಾರಣ ಪ್ರಯಾಣಿಕರ ಆವೇಶಕ್ಕೆ ಮಣಿದ  ವ್ಯವಸ್ಥಾಪಕ ಬೇರೆ ಬಸ್ ನಿಯೋಜಿಸಿದರು.
ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿದೇ ಪ್ರಯಾಣಿಕರಿಗೆ ತೊಂದರೆ ನೀಡಿದ ಡಿಪೋ ವ್ಯವಸ್ಥಾಪಕ ರಂಗಸ್ವಾಮಿ ಅವರನ್ನು ಬದಲಾಯಿಸುವಂತೆ ಜಿಲ್ಲಾಧಿಕಾರಿ ಅವರಲ್ಲಿ ಪ್ರಯಾಣಿಕರು ಮನವಿ ಮಾಡಿ ವ್ಯವಸ್ಥಿತವಾದ ಹೆಚ್ಚುವರಿ ಸರ್ಕಾರಿ ಬಸ್ಗಳನ್ನು ನಿಯೋಜಿಸುವಂತೆ  ಸಾರ್ವಜನಿಕರು ಒತ್ತಾಯಿಸಿದ್ದಾರೆ.     

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.