ತುಮಕೂರು

ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ: ಉರುಳಿಗೆ ಸಿಲುಕಿದ್ದ ಚಿರತೆ ಸಾವು

Published On :

ಚಿಕ್ಕನಾಯಕನಹಳ್ಳಿ: ಕಾಡು ಹಂದಿಯ ಬೇಟೆಗಾಗಿ ಹಾಕಿದ್ದ ಉರುಳಿಗೆ ಬಿದ್ದ ಚಿರತೆಯೊಂದು ಸಾವನ್ನಪ್ಪಿರುವ ಘಟನೆ ತಾಲೂಕಿನಲ್ಲಿ ನಡೆದಿದೆ. ಕಾಡುಹಂದಿಯ ಬೇಟೆಗಾಗಿ ಹಾಕಿದ್ದ ಉರುಳಿಗೆ  ಬಿದ್ದ ಚಿರತೆಯನ್ನು ಅರಣ್ಯ ಇಲಾಖೆಯವರು ಸಕಾಲದಲ್ಲಿ ರಕ್ಷಿಸದ ಕಾರಣ ಚಿರತೆ ಸಾವನ್ನಪ್ಪಿದೆ.
ಸಮೀಪದ ಗೊಲ್ಲರಹಳ್ಳಿ ಬಳಿ ಪಳನಿಯಪ್ಪ ಎಂಬುವರ ಜಮೀನಿನಲ್ಲಿ  ಉರುಳಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆ ಗುರುವಾರ ಮಧ್ಯಾಹ್ನ ಸುಮಾರು 3 ಗಂಟೆಯ ಹೊತ್ತಿಗೆ ನೋಡಿದ್ದಾರೆ. ಸದರಿ ಚಿರತೆಯನ್ನು ಹಿಡಿಯಲು ತಿಪಟೂರಿನಿಂದ ಬಲೆ ಮತ್ತು ವಿಶೇಷ ತರಬೇತುದಾರರನ್ನು ಕರೆಸುವ ಹೊತ್ತಿಗೆ, ಚಿರತೆ ಮೃತಪಟ್ಟಿದೆ. ಈ ಚಿರತೆಗೆ ಸುಮಾರು ಮೂರುವರೆ ವರ್ಷ. ಜಿಲ್ಲಾ ಅರಣ್ಯ ಇಲಾಖೆ  ಡಿಎಫ್ಓ ಅಮರನಾಥ್, ಸಹಾಯಕ  ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಸ್. ನಾಗೇಂದ್ರರಾವ್, ಅರವಳಿಕೆ  ತಜ್ಞರುಗಳಾದ ಡಾ.ಸುಜಯ್, ಡಾ.ಚೇತನ್, ಇತರೆ 10 ಜನ ಸಿಬ್ಬಂದಿಯೊಂದಿಗೆ ಆಗಮಿಸುವ ವೇಳೆಗಾಗಲೇ ಚಿರತೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.  ಚಿರತೆಯ ಸಾವಿಗೆ ಕಾರಣನಾದ ಪಳನಿಸ್ವಾಮಿಯ ಮೇಲೆ  ವನ್ಯಜೀವಿ ಸಂರಕ್ಷಣಾಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸ್ಥಳದಲ್ಲಿ ತಾಲೂಕು ಅರಣ್ಯ ಸಂರಕ್ಷಣಾಧಿಕಾರಿ ಮಾರುತಿ, ಸಹಾಯಕ ಸಿಬ್ಬಂದಿ ಕೃಷ್ಣಾನಾಯಕ್ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.