ತುಮಕೂರು

'ಡಿ.ಕೆ. ಸುರೇಶ್ಗೆ ಮತ ಕೇಳುವ ನೈತಿಕ ಹಕ್ಕಿಲ್ಲ'

Published On :

ಕುಣಿಗಲ್: ಚುನಾವಣೆಗೆ ಮುನ್ನ ಅನುಮೋದನೆಗೊಂಡಿದ್ದ ತಾಲೂಕಿನ 158 ಗ್ರಾಮಗಳ ವ್ಯಾಪ್ತಿಯ ಕುಡಿಯುವ ನೀರು ಪೂರೈಕೆ ಕಾಮಗಾರಿಗೆ ಅಡ್ಡಿಪಡಿಸಿ 200 ಗ್ರಾಮಗಳ ಜನತೆ ಕುಡಿಯುವ ನೀರಿಗೆ ಪರದಾಡುವಂತೆ ಮಾಡಿರುವುದೆ ಸಂಸದ ಡಿ.ಕೆ.ಸುರೇಶ್ ಸಾಧನೆಯಾಗಿದ್ದು, ಕ್ಷೇತ್ರದ ಜನರ ಮತ ಕೇಳುವ ನೈತಿಕತೆ ಉಳಿಸಿಕೊಂಡಿಲ್ಲವೆಂದು ಶಾಸಕ ಡಿ.ನಾಗರಾಜಯ್ಯ ತಿಳಿಸಿದರು.
ಶುಕ್ರವಾರ, ಪಟ್ಟಣದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭೆಯ ಜೆಡಿಎಸ್ ಅಭ್ಯರ್ಥಿ ಪ್ರಭಾಕರರೆಡ್ಡಿ ಚುನಾವಣೆ ಪ್ರಚಾರ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿ, ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಲು
ಚುನಾವಣೆ ನೀತಿಸಂಹಿತೆ ಅಡ್ಡಿಯಲ್ಲದಿದ್ದರೂ, ಶಾಸಕರಾದ ತಮ್ಮ ಅಧ್ಯಕ್ಷತೆಯಲ್ಲಿ ತಾಲೂಕಿನಾದ್ಯಂತ ತೀವ್ರ ಕುಡಿವ ನೀರಿನ ಅಭಾವ ಇರುವ 158 ಗ್ರಾಮಗಳಲ್ಲಿ ಕೊಳವೆಬಾವಿ ಕೊರೆಸಲು ಕಾಮಗಾರಿ ಅನುಮೋದನೆಗೊಂಡಿದ್ದು, ಡಿ.ಕೆ.ಸುರೇಶ್ ಅವರು ತಮ್ಮ ಪ್ರಭಾವ ಬಳಸಿ, ಕುಣಿಗಲ್  ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿರುವ ತಮ್ಮದೇ ಪಕ್ಷದ ಮುಖಂಡ ಡಾ.ರಂಗನಾಥ್ ಮೂಲಕ, ಕುತಂತ್ರ ನಡೆಸಿ ಲೋಕಸಭೆ ಚುನಾವಣೆ ಘೋಷಣೆಯಾದಾಗ ರದ್ದುಗೊಳಿಸಿದ್ದಾರೆ. ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಹೊಸದಾಗಿ
ಪಟ್ಟಿಸಿದ್ಧಮಾಡಲು ಹೊರಟಿದ್ದು ಹಲವು ಸಮಸ್ಯೆಗೆ ಕಾರಣವಾಗಿ 200 ಗ್ರಾಮಗಳ ಜನತೆ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.
ಇದು ಸಂಸದರ ಸಾಧನೆಯಾಗಿದ್ದು ಇವರ ದೌರ್ಜನ್ಯಕ್ಕೆ ಕ್ಷೇತ್ರದ ಜನತೆ  ಬೇಸತ್ತಿದ್ದಾರೆ ಎಂದರು.
ಲೋಕಾಯುಕ್ತರಿಗೆ ದೂರು: ಇನ್ನು ನರೇಗ ಕಾಮಗಾರಿಗಳು ತಾಲೂಕಿನಲ್ಲಿ ಸಮರ್ಪಕವಾಗಿ ನಡೆದಿದ್ದು, ಕೆಲಸ ಮಾಡಿದ ಕೂಲಿಯ ಹಣ ಪಡೆಯಲು ಫಲಾನುಭವಿಗಳು ಮುಂದಾದಾಗ, ಡಿ.ಕೆ.ಸುರೇಶ್,  ಲೋಕಾಯುಕ್ತರಿಗೆ ದೂರು ನೀಡಿ ಬಿಲ್  ಪಾವತಿಯಾಗದಂತೆ ತಡೆಹಿಡಿದು ಕೆಲಸಮಾಡಿದ ಫಲಾನುಭವಿಗಳು ಹಿಡಿಶಾಪ ಹಾಕುವಂತೆ ಮಾಡಿದ್ದಾರೆ ಎಂದರು.
ತಾಲೂಕು ಅಧ್ಯಕ್ಷ ಮತ್ತು ಪುರಸಭಾಧ್ಯಕ್ಷ ಕೆ.ಎಲ್.ಹರೀಶ್, ಜಿಪಂ ಸದಸ್ಯರಾದ ಡಾ.ಬಿ.ಎನ್.ರವಿ, ವೈ.ಎಚ್.ಹುಚ್ಚಯ್ಯ,  ಮುಖಂಡರಾದ ಜಗದೀಶ್, ಅನ್ಸರ್ ಅಹಮದ, ಈ.ಮಂಜು. ಸತೀಶ, ಜಯಶೀಲಾ ನಾಗರಾಜ್, ರಂಗಣ್ಣ, ಚಿಕ್ಕಣ್ಣ, ಸುರೇಶ್, ನಾಗೇಶ್, ಗಿರೀಶ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.