ತುಮಕೂರು

ಹಿಂದುಳಿದ ವರ್ಗ ಸಮಗ್ರ ಅಭಿವೃದ್ಧಿಗೆ ಬದ್ಧ: ಜೆಡಿಎಸ್ ಅಭ್ಯರ್ಥಿ ಎ. ಕೃಷ್ಣಪ್ಪ

Published On :

ತುಮಕೂರು: ತಾವು ಒಬ್ಬ ಹಿಂದುಳಿದ ವರ್ಗದ ನಾಯಕನಾಗಿದ್ದು, ಶಾಸಕನಾಗಿ ಸಚಿವನಾಗಿ ಕೆಲಸ ಮಾಡಿದ ಅನುಭವವಿದೆ. ದೇವಗೌಡರು ಮತ್ತು ತಮ್ಮೆಲ್ಲರ ಆಶೀರ್ವಾದದಿಂದ ನಾನು ಅಭ್ಯರ್ಥಿಯಾಗಿದ್ದೇನೆ. ತಾವು ಸಂಸದನಾಗಿ ಆಯ್ಕೆಯಾದರೆ, ಅನುದಾನದಲ್ಲಿ ಶೇ. 25 ರಷ್ಟು ಹಣ ಅಲ್ಪ ಸಂಖ್ಯಾತರ ಅಭಿವೃದ್ಧಿಗೋಸ್ಕರ ಮೀಸಲಿಡುವೆ ಎಂದು ತುಮಕೂರು ಜೆಡಿಎಸ್ ಅಭ್ಯರ್ಥಿ ಎ. ಕೃಷ್ಣಪ್ಪ ಭರವಸೆ ನೀಡಿದರು.
ಇಲ್ಲಿನ ಉಪ್ಪಾರಹಳ್ಳಿಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಘಟಕ ವತಿಯಿಂದ ಏರ್ಪಡಿಸಿದ್ದ ಜೆಡಿಎಸ್ ಚುನಾವಣಾ ಪ್ರಚಾರ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಈ ಸರ್ಕಾರಗಳು ಸುಮಾರು 40 ವರ್ಷಗಳಿಂದ ಅಲ್ಪಸಂಖ್ಯಾತರ ಓಲೈಕೆ ಮಾಡಿಕೊಂಡು ಅಧಿಕಾರಕ್ಕೆ ಬಂದಿವೆಯಾದರೂ ಅಲ್ಪ ಸಂಖ್ಯಾತರನ್ನು ತನ್ನ ಓಟ್ ಬ್ಯಾಂಕಿಗೆ ಮಾತ್ರ  ಮೀಸಲಿಟ್ಟುದ್ದು, ಯಾವುದೇ ಜನೋಪಯೋಗಿ ಕಾರ್ಯಕ್ರಮಗಳನ್ನು ಇದುವರೆಗೂ ಮಾಡಿಲ್ಲ, ಆದರೆ ದೇವಗೌಡರು ಪ್ರಧಾನಮಂತ್ರಿಯಾದ ಅವಧಿಯಲ್ಲಿ ಹಿಂದುಳಿದ ವರ್ಗ ಅಲ್ಪ ಸಂಖ್ಯಾತರಿಗೆ ಬಹಳಷ್ಟು ಯೋಜನೆಗಳನ್ನು ರೂಪಿಸಿದರು. ಹಾಗೂ ಹುಬ್ಬಳ್ಳಿ ಈದ್ಗಾ ಮೈದಾನದ ಕೋಮುಗಲಭೆಯನ್ನು ನಿಯಂತ್ರಿಸಿ ಹಿಂದೂ ಮುಸ್ಲಿಂರನ್ನು ಒಗ್ಗೂಡಿಸಿ ಮೆರೆಸಿದ ಕೀರ್ತಿ ಜೆಡಿಎಸ್ಗೆ ಸಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ನಿಟ್ಟಿನಲ್ಲಿ ಅಲ್ಪಸಂಖ್ಯಾತರ ಹಿತ ಕಾಪಾಡಲು ಜೆಡಿಎಸ್ನಿಂದ ಮಾತ್ರ ಸಾಧ್ಯ ಎಂಬುದನ್ನು ಮನಗಂಡು ತಾವೆಲ್ಲರೂ ಈ ಬಾರಿ ಜೆಡಿಎಸ್ ಗೆಲ್ಲಿಸಿದರೆ ತಮಕೂರು ಲೋಕಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದು ಮನವಿ ಮಾಡಿದರು.
 ಶಾಸಕ ಡಾ. ಎಂ.ಆರ್. ಹುಲಿನಾಯಕ್ ಮಾತನಾಡಿ, ಹಿಂದುಳಿದ ವರ್ಗದ ಮಹಾನ್ ನಾಯಕ ಕೃಷ್ಣಪ್ಪ ಅವರು ಎಂದೂ  ಜಾತಿ ಭೇದ ಮಾಡಿದವರಲ್ಲ. ಮೇಲು-ಕೀಳು ಎಂಬುದು ಗೊತ್ತಿಲ್ಲ ಅವರಿಗೆ ಗೊತ್ತಿರುವುದು ಎಲ್ಲರೂ ಒಂದೇ ಎಂದು, ಅವರನ್ನು  ಬಹುಮತದಿಂದ ಗೆಲ್ಲಿಸಲು ಪ್ರತಿಯೊಬ್ಬರು ಪ್ರಯತ್ನಿಸಿದರೆ ಎಲ್ಲರ ಹಿತ ಕಾಯುತ್ತಾರೆ ಎಂದರು.
ಜೆಡಿಎಸ್ ಮುಂಖಂಡರಾದ ಗೋವಿಂದರಾಜು, ಹುಚ್ಚಯ್ಯ ವೈ.ಹೆಚ್, ನರಸೇಗೌಡ, ಗಂಗಣ್ಣ, ಬೆಳ್ಳಿ ಲೋಕೇಶ, ಮುಜಾಯಿದ್ ತಾಹಿರಾಬಾನು, ಮಲ್ಲಿಕ್ ರೆಹಮಾನ್, ಷಫಿ, ಹನೀಸ್, ಮೋಸಿನಾ, ಕುಮಾರ್, ಶ್ರೀನಿವಾಸ್, ಷೇಕ್ ಮಹಮದ್, ನೂರುಲ್ಲಾ ಅಸ್ ಲಾಂ. ಬಾಬಾ ಜಾನ್, ಜಬೀವುಲ್ಲಾ, ಮುಬಾರಕ್, ಮುಹಬೂಬ್ ಪಾಷಾ, ಜಯಲಕ್ಷ್ಮಮ್ಮ, ಪದ್ಮ, ಮಹಾಲಕ್ಷ್ಮಿ, ಪುಟ್ಟಮ್ಮ, ಜಗನ್ನಾಥ್, ಮಂಜು ಮುಂತಾದವರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.