ನನ್ನ ಗೆಲವಿಗೆ ಸಹಕರಿಸಿ: ಗೂಳಿಹಟ್ಟಿ ಶೇಖರ್ಮನವಿ
ಶಿರಾ: ಬರದ ನಾಡು ಶಿರಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಅಭಿವೃದ್ಧಿಪಡಿಸುವ ಮೂಲಕ ನನ್ನ ಕರ್ತವ್ಯವನ್ನು ಪಾಲಿಸುವೆ. ಕ್ಷೇತ್ರದ ಮತದಾರರ ನೋವು ನಲಿವಿಗೆ 3-4 ತಿಂಗಳಿಗೊಮ್ಮೆಯಾದರೂ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರವಾಸ ಮಾಡುವೆ. ನನ್ನ ಗೆಲವಿಗೆ ಮತದಾರರು ಸಹಕರಿಸಿ ಎಂದು ಚಿತ್ರದುರ್ಗ ಲೋಕಸಭಾ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಗೂಳಿಹಟ್ಟಿ ಶೇಖರ್ ನುಡಿದರು.
ಅವರು ತಾಲೂಕಿನ ಹುಲಿಕುಂಟೆ ಹೋಬಳಿಯ ಬರಗೂರಿನಲ್ಲಿ ಜೆಡಿಎಸ್ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕ್ರೀಡಾ ಮಂತ್ರಿಯಾಗಿದ್ದಾಗ ಕ್ರೀಡೆಗಳಿಗೆ ಅನುಕೂಲವಾಗುವಂತಹ ಕೆಲಸಗಳನ್ನು ಮಾಡಿದ್ದು ಕ್ರೀಡಾ ಇಲಾಖೆಯಲ್ಲಿ ಹಣ ಇಲ್ಲದಂತಹ ಸನ್ನಿವೇಶದಲ್ಲಿ ಹಣ ತಂದು ಕ್ಷೇತ್ರಕ್ಕೆ ನೀಡಿದ್ದೇನೆ. ಮೂರು ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಅನುಕೂಲವಾಗುವಂತೆ ಕೆ.ಸಿ.ರೆಡ್ಡಿಯವರ ವರದಿಯಾಧಾರದಿಂದ ಅಪ್ಪರ್ ಭದ್ರ ಯೋಜನೆಯನ್ನು ಜಾರಿಗೆ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರದ ಅವಧಿಯಲ್ಲಿ ಸುಮಾರು ಆರುನೂರು ಕೋಟಿ ರೂ. ಹೆಚ್ಚು ಹಣವನ್ನು ಮಂಜೂರು ನೀಡಿದ್ದೆವು. ತುಮಕೂರು ಚಿತ್ರದುರ್ಗ ರೈಲು ಯೋಜನೆಯು ಮುಂದುವರೆದಿಲ್ಲ. ವಿವಿಧ ಯೋಜನೆಗಳನ್ನು ಬಲಪಡಿಸಲು ನೀವು ನಮ್ಮ ಪಕ್ಷವನ್ನು ಬೆಂಬಲಿಸಿ ಲೋಕಸಭೆಗೆ ಆಯ್ಕೆ ಮಾಡಿದರೆ ಕೆಲಸ ಮಾಡುವೆ ಎಂದರು. ಜೆಡಿಎಸ್ನ ಚಿತ್ರದುರ್ಗ ಜಿಲ್ಲಾಧ್ಯಕ್ಷ ಯಶೋಧರ ಮಾತನಾಡಿದರು. ಮಾಜಿ ಸಚಿವ ಬಿ. ಸತ್ಯನಾರಾಯಣ ಮಾತನಾಡಿ ದೇವೇಗೌಡರ ಕೈ ಬಲಪಡಿಸುವ ಮೂಲಕ ಕೇಂದ್ರದಲ್ಲಿ ಸುಭದ್ರ ಸರ್ಕಾರ ರಚಿಸಲು ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಪಕ್ಷದ ಜೆಡಿಎಸ್ ಅಭ್ಯರ್ಥಿ ಗೂಳಿಹಟ್ಟಿ ಶೇಖರ್ರನ್ನು ಬೆಂಬಲಿಸಿ ಗೆಲವಿಗೆ ಶ್ರಮಿಸುವಂತೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

