ಕಾಂಗ್ರೆಸ್ ದೇಶಕ್ಕಾಗಿ ತ್ಯಾಗ ಮಾಡಿದೆ: ಟಿ.ಬಿ. ಜಯಚಂದ್ರ
ತಿಪಟೂರು: ಕಾರ್ಪೋರೇಟ್ ಕಿಂಗ್ಗಳು ಮೋದಿಯವರನ್ನು ಪ್ರಧಾನಿ ಮಾಡಿ ತಮ್ಮ ಬೇಳೆಬೇಯಿಸಿಕೊಳ್ಳಲು ಹೆಣಗಾಡುತ್ತಿರುವುದನ್ನು ದೇಶದ ಜನತೆ ಬಹಳ ಎಚ್ಚರಿಕೆಯಿಂದ ಗಮನಿಸಬೇಕಲ್ಲದೆ ದೇಶಕ್ಕಾಗಿ ಸಾಕಷ್ಟು ಹೋರಾಟ ಮಾಡಿ ಬಡವರ, ಮಧ್ಯಮವರ್ಗದವರ ಕಷ್ಟಸುಖಗಳಿಗೆ ನಿರಂತವಾಗಿ ಶ್ರಮಿಸುವುದರ ಜೊತೆಗೆ ವಿಶ್ವದಲ್ಲಿ ಭಾರತ ಬಲಿಷ್ಠ ಎಂಬುದನ್ನು ತೋರಿಸಿಕೊಟ್ಟಿರುವ ಕಾಂಗ್ರೆಸ್ಗೆ ಮಾತ್ರ ಮತ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಮನವಿ ಮಾಡಿದರು.
ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಗುಜರಾತಿನಲ್ಲಿ ಮೋದಿ ಮಾಡಿರುವ ಕೆಲಸವೆಂದರೆ ರೈತರ ಕೃಷಿ ಜಮೀನುಗಳನ್ನು ಕಿತ್ತುಕೊಂಡು ಕೈಗಾರಿಕೆ, ಬೃಹತ್ ಕಟ್ಟಡಗಳನ್ನು ಕಟ್ಟಿ ಸಾಮಾನ್ಯ ಜನತೆಯನ್ನು ಸಂಕಷ್ಟಕ್ಕೆ ದೂಡಿರುವುದೇ ದೊಡ್ಡ ಸಾಧನೆ. ಬಿಜೆಪಿ ಮೋದಿ ಎಂಬ ಬೇಜವಾಬ್ದಾರಿ ವ್ಯಕ್ತಿಯನ್ನು ಮುಂದಿಟ್ಟುಕೊಂಡು ಮಾತ್ರ ಮಾತ ಯಾಚಿಸುತ್ತಿದೆ ಹೊರತು ಪಕ್ಷ ದೇಶಕ್ಕಾಗಿ ಯಾವ, ತ್ಯಾಗ, ಹೋರಾಟ ಮಾಡಿದೆ ಎಂಬುದನ್ನು ಜನತೆಗೆ ಮನವರಿಕೆ ಮಾಡಿ ಮತ ಕೇಳಲಿ ನೋಡೋಣ ಎಂದರು. ಸಭೆಯಲ್ಲಿ ಮುಖಂಡರಾದ ಪರಮಶಿವಯ್ಯ, ಶಿವಪ್ರಸಾದ್, ಶಶಿಧರ್, ರಾಜಶೇಖರ್, ಅಬ್ದುಲ್ ಖಾದರ್, ಕೆ.ಎಸ್. ಸದಾಶಿವಯ್ಯ, ಮೋಹನ್ಸ್ಥ್ಳೀಯ ಸಂಸ್ತೆಗಳ ಚುನಾಯಿತ ಪ್ರತಿನಿಧಿಗಳು, ಸಾಕಷ್ಟು ಮುಖಂಡರುಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

