ಹಲವೆಡೆ ಬೆಟ್ಟಿಂಗ್ ಭರಾಟೆ ಬಲು ಜೋರು
ಕುಣಿಗಲ್: ಐಪಿಲ್ ಕ್ರಿಕೆಟ್ ಭರಾಟೆ ರಂಗೇರುತ್ತಿದ್ದಂತೆ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಯಲ್ಲಿ ಬೆಟ್ಟಿಂಗ್ ಭರಾಟೆ ಜೋರಾಗಿ ನಡೆಯುತ್ತಿದ್ದು, ಯುವಜನತೆ ಸೇರಿದಂತೆ ಜೂಜಾಟದ ನಶೆಯಲ್ಲಿ ಮುಳುಗಿರುವ ಬಹುತೇಕರು ಸ್ವಾಸ್ತ್ಯ ಸಮಾಜದಲ್ಲಿ ಹಲವು ಸಮಸ್ಯೆಗೆ ಕಾರಣರಾಗಿದ್ದಾರೆ.
ಐಪಿಎಲ್ ಸೇರಿದಂತೆ ಯಾವುದೇ ಕ್ರಿಕೆಟ್ ಪಂದ್ಯಾವಳಿ ಇರಲಿ, ಚುನಾವಣೆ ಫಲಿತಾಂಶ ಇರಲಿ, ಬೆಟ್ಟಿಂಗ್ ದಂಧೆ ಪಟ್ಟಣದಲ್ಲಿ ವ್ಯಾಪಕವಾಗಿ ನಡೆಯುತ್ತದೆ. ಸಂಪೂರ್ಣ ಹೈ ಪೈ ವ್ಯವಸ್ಥೆಯಲ್ಲಿ ನಡೆಯುತ್ತಿರುವುದರಿಂದ ಯಾವ ಕಾನೂನಿನ ಬಲೆಗೆ ಸಿಲುಕದೆ ಬುಕ್ಕಿಗಳು ವ್ಯವಸ್ಥಿತವಾಗಿ ದಂಧೆ ನಡೆಸುತ್ತಿದ್ದಾರೆ. ಪ್ರತಿಯೊಂದು ವಾರ್ಡನಲ್ಲೂ ತಮಗೆ ಬೇಕಾದ ವ್ಯಕ್ತಿಯನ್ನು ಬಳಸಿಕೊಳ್ಳುವ ಬುಕ್ಕಿಗಳು ಅವರ ಸಹಾಯದಿಂದ ಬೆಟ್ಟಿಂಗ್ ಹಣ ಕಟ್ಟಿಸಿಕೊಳ್ಳುತ್ತಿದ್ದಾರೆ. ಪ್ರತಿಯೊಂದು ಬೆಟ್ಟಿಂಗ್ ಮೊಬೈಲ್, ಎಸ್‌ಎಂಎಸ್ ಮೂಲಕ ನಡೆಯುತ್ತಿದ್ದು, ಯಾವುದೆ ಪತ್ರ ವ್ಯವಹಾರವಾಗಲಿ ಅಥವಾ ಚೀಟಿ ನೀಡುವುದಾಗಲಿ ಈ ದಂಧೆಯಲ್ಲಿ ಇಲ್ಲ.
ಇದರಿಂದ ದಂಧೆ ನಡೆಸುವವರನ್ನು ಬಲೆಗೆ ಕೆಡವಲು ಪೊಲೀಸರಿಗೂ ತಲೆನೋವಿನ ಕೆಲಸವಾಗಿದೆ.
ಬೆಟ್ಟಿಂಗ್ ದಂಧೆಗೆ ಬಲಿ: ಕ್ರಿಕೆಟ್ ಪಂದ್ಯಾವಳಿಗಳನ್ನು ನೋಡುವ ಹವ್ಯಾಸ ಬೆಳೆಸಿಕೊಳ್ಳುವ ಯುವಜನಾಂಗ, ಬಹುತೇಕರು ದಿನಕಳೆದಂತೆ ಬೆಟ್ಟಿಂಗ್ ದಂಧೆಗೆ ಬಲಿಯಾಗುತ್ತಿರುವುದು, ಸಂಭಾವಿತರ ಮನೆಗಳಲ್ಲಿ ಒಂದು ಸಮಸ್ಯೆಯಾದರೆ, ಇನ್ನು ಕೂಲಿ ಕಾರ್ಮಿಕ ವರ್ಗದಲ್ಲೂ ಈ ಹವ್ಯಾಸ ವ್ಯಾಪಕವಾಗಿ ದುಡಿದ ಹಣವನ್ನೆಲ್ಲಾ ಈ ದಂಧೆಗೆ ಸುರಿದು ಬರಿಗೈಲಿ ಮನೆಗೆ ತೆರಳುವ ಸ್ಥಿತಿ ಕೆಲವರದಾಗಿದೆ.
ಪಟ್ಟಣದಲ್ಲಿನ ಕೆಲ ಸೆಲೂನ್, ಮೊಬೈಲ್ ಫೋನ್ ರಿಪೇರಿ ಅಂಗಡಿ ಮತ್ತು ಬಸ್ ನಿಲ್ದಾಣದ ಸಮೀಪದ ಕೆಲ ಅಂಗಡಿಗಳಲ್ಲಿ ಬುಕ್ಕಿಗಳ ಪರವಾಗಿ ಹಣ ಕಟ್ಟಿಸಿಕೊಳ್ಳುವ ಜಾಲ ಕೆಲವೇ ಗಂಟೆಗಳ ಕಾಲ ಸಕ್ರಿಯವಾಗಿದ್ದು, ನಂತರ ಸದಾ ಮೊಬೆಲ್ ಸಂಪರ್ಕದ ಮೂಲಕ ಭರವಸೆ ಮೇಲೆ ಹಣಕಟ್ಟಿಸಿಕೊಳ್ಳುತ್ತಿದ್ದಾರೆನ್ನಲಾಗಿದೆ.
ವ್ಯಾಪಕ: ಕೇವಲ ಪ್ರತಿಷ್ಠಿತ ಬಡಾವಣೆಗಳಗಷ್ಟೆ ಸೀಮಿತವಲ್ಲದ ಈ ದಂಧೆ ಕೋಟೆ, ಗುಜ್ಜಾರಿ ಮೊಹಲ್ಲ, ಮದ್ದೂರುರಸ್ತೆಯ ಕಾರ್ಮಿಕ ವರ್ಗ ಹಿಂದುಳಿದ ವರ್ಗವದರು ವಾಸಿಸುವ ಪ್ರದೇಶದಲ್ಲೂ ವ್ಯಾಪಕವಾಗಿ ನಡೆಯುತ್ತಿದ್ದು ಈಗಾಗಲೆ ಬಹತೇಕ ಯುವಕರು ದಂಧೆಯ ಜಾಲಕ್ಕೆ ಸಿಕ್ಕು ಸಾಕಷ್ಟು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಪಟ್ಟಣದಲ್ಲಿ ಈ ಹಿಂದೆ ಒಂದಂಕಿ ಲಾಟರಿ ಮತ್ತು ಮಟ್ಕಾ ಚೀಟಿ ನಡೆಸುತ್ತಿದ್ದ ಹಳೇ ಅಸಾಮಿ ಒಬ್ಬರು ಕ್ರಿಕೆಟ್ ಬೆಟ್ಟಿಂಗ್‌ನ ಸೂತ್ರಧಾರನೆಂದು ಈಗಾಗಲೆ ದಂಧೆಯಲ್ಲಿ ನಷ್ಟಕ್ಕೊಳಗಾದ ಯುವಕರು ಹೇಳಿಕೊಂಡು ಹಿಡಿಶಾಪ ಹಾಕುತ್ತಾ ಒಡಾಡುತ್ತಿದ್ದಾರೆ. ಈ ಮದ್ಯೆ ಕೆಲ ಸಂಭಾವಿತ ಕುಟುಂಬದ ಮಕ್ಕಳು ಸಹ ಬೆಟ್ಟಿಂಗ್ ಜಾಲದ ಸುಳಿಗೆ ಸಿಕ್ಕು ಮನೆಯವರಿಗೆ ಗೊತ್ತಿಲ್ಲದೆ ಸಾಲ, ಸೋಲ ಮಾಡಿಕೊಂಡು ಪರದಾಡುವಂತಾಗಿದ್ದು, ಈ ಬೆಟ್ಟಿಂಗ್ ಜಾಲದ ಬಲೆಗೆ ಮತ್ತಷ್ಟು ಅಮಾಯಕರು ಸಿಕ್ಕು ಬಲಿಯಾಗುವ ಮುನ್ನ ಸಂಬಂಧಪಟ್ಟ ಇಲಾಖಾಧಿಕಾರಿಗಳು
ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಿ ಯುವಜನಾಂಗವನ್ನು ರಕ್ಷಿಸುವಂತೆ ಹಿರಿಯ ನಾಗರಿಕರು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

