ಅಪ್ಪಚ್ಚು ರಂಜನ್ಗೆ ವಂಚಿಸಲು ಹೋಗಿ ಸಿಕ್ಕಿ ಬಿದ್ದರು!
ಸೋಮವಾರಪೇಟೆ: ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಮೊಬೈಲ್ಗೆ ಕರೆ ಮಾಡಿ ತಾವು ನಬಾರ್ಡ್ ಸಂಸ್ಥೆಯವರೆಂದು ಪರಿಚಯ ಮಾಡಿಕೊಂಡು 27 ಸಾವಿರ ಹಣವನ್ನು ಬ್ಯಾಂಕ್ ಖಾತೆ ಮೂಲಕ ಪಡೆದು ವಂಚಿಸಲು ಯತ್ನಿಸಿದ ಇಬ್ಬರನ್ನು ಸೋಮವಾರಪೇಟೆ ಪೊಲೀಸಲು ಬಂಧಿಸಿದ್ದಾರೆ.
ಶಾಸಕ ಅಪ್ಪಚ್ಚು ರಂಜನ್ ಮೊಬೈಲ್ಗೆ ಕಳೆದ ಆಗಸ್ಟ್ನಲ್ಲಿ ಕರೆ ಮಾಡಿದ್ದ ವಂಚಕರು, ತಾವು ನಬಾರ್ಡ್ನಿಂದ ಮಾತನಾಡುತ್ತಿದ್ದು, ನಿಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಆರು ಮಂದಿ ರೈತರಿಗೆ ಸಬ್ಸಿಡಿ ರೂಪದಲ್ಲಿ ಕೃಷಿ ಪರಿಕರಗಳನ್ನು ನೀಡುತ್ತೇವೆ. ಇದಕ್ಕೆ ತಗಲುವ ಕನಿಷ್ಠ ವೆಚ್ಚವನ್ನು ನೀವು ಬ್ಯಾಂಕ್ ಖಾತೆ ಮೂಲಕ ಪಾವತಿಸಬೇಕು ಎಂದು ತಿಳಿಸಿದ್ದರು.
ರೈತರಿಗೆ ಅನುಕೂಲವಾಗುವ ಯೋಜನೆ ಎಂದು ತಿಳಿದ ಶಾಸಕರು ತಮ್ಮ ಆಪ್ತ ಸಹಾಯಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದಾದ ನಂತರ ಆ ವಂಚಕರು ಮತ್ತೆ ರಂಜನ್ ಅವರಿಗೆ ಕರೆ ಮಾಡಿ ಹಣ ಹಾಕುವಂತೆ ಹೇಳಿದ್ದಾರೆ. ಶಾಸಕರು ತಮ್ಮ ಆಪ್ತ ಸಹಾಯಕ ರವಿಗೆ ವಂಚಕರ ಮೊಬೈಲ್ ಸಂಖ್ಯೆ ನೀಡಿ ಕೂಡಲೇ ಹಣ ಹಾಕುವಂತೆ ಹೇಳಿದ್ದಾರೆ. ನಂತರ ರವಿ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿರುವ ಕಾರ್ಪೊರೇಷನ್ ಬ್ಯಾಂಕ್ನ ಖಾತೆಗೆ 27 ಸಾವಿರ ಹಣವನ್ನು 4 ಮಂದಿ ರೈತರಿಂದ ಜಮೆ ಮಾಡಿಸಿದ್ದಾರೆ. ಬ್ಯಾಂಕ್ ಖಾತೆಗೆ ಹಣ ಜಮೆಯಾದ ದಿನದಿಂದ ನಕಲಿ ನಬಾರ್ಡ್ನ ವ್ಯಕ್ತಿಗಳು ತಮ್ಮ ಮೊಬೈಲ್ ಸ್ವಿಚ್ಆಫ್ ಮಾಡಿದ್ದಾರೆ. ಇದರಿಂದ ಸಂಶಯಗೊಂಡ ರವಿ ಸೋಮವಾರಪೇಟೆ ಪೊಲೀಸರಿಗೆ ದೂರು ನೀಡಿದ್ದರು.
ಠಾಣಾಧಿಕಾರಿ ಎಸ್.ಎಸ್. ರವಿಕಿರಣ್ ಮತ್ತು ಸಿಬ್ಬಂದಿ ತನಿಖೆ ಕೈಗೊಂಡು ಮೊಬೈಲ್ ಕರೆ ಹಾಗೂ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿ ಗ್ರಾಹಕರ ಹೆಸರು ಹಾಗೂ ವಿಳಾಸ ಪತ್ತೆಹಚ್ಚಿದ್ದಾರೆ. ಕೆಜಿಎಫ್ನ ದೊಡ್ಡಚಿನ್ನನಹಳ್ಳಿ ಗ್ರಾಮದ ಉಜಿನಿಗೌಡ ಎಂಬ ವ್ಯಕ್ತಿಯ ಹೆಸರಿನಲ್ಲಿ ಖಾತೆ ಇರುವುದು ಪತ್ತೆಯಾಗಿದೆ. ಸೋಮವಾರಪೇಟೆ ಠಾಣೆಯ ಮುಖ್ಯಪೇದೆ ಬಿ.ಎನ್. ಶಿವಪ್ಪ ಹಾಗೂ ಪೇದೆ ಸುಧೀಶ್ ಅವರು ಕೆಜಿಎಫ್ಗೆ ತೆರಳಿ ಉಜಿನಿಗೌಡ ಎಂಬವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಬಂಗಾರಪೇಟೆಯ ರಾಮಪ್ಪ ಎಂಬ ವ್ಯಕ್ತಿಯೂ ಭಾಗಿಯಾಗಿದ್ದು, ಆತನನ್ನೂ ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದಾಗ ವಂಚನೆಯನ್ನು ಒಪ್ಪಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

