ಮಾಹಿತಿ ನೀಡುವಲ್ಲಿ ಪುರಸಭೆ ಮುಖ್ಯ ಅಧಿಕಾರಿ ವಿಫಲ: 5 ಸಾವಿರ ರು. ದಂಡ
ಕ.ಪ್ರ.ವಾರ್ತೆ ್ಣ ಕುಣಿಗಲ್ ್ಣ ಏ.27
ಸಾರ್ವಜನಿಕರೊಬ್ಬರು ಕೇಳಿದ ಮಾಹಿತಿಯನ್ನು ಸಕಾಲದೊಳಗೆ ನೀಡುವಲ್ಲಿ ವಿಫಲರಾದ ಕುಣಿಗಲ್ ಪುರಸಭೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಆದ ಪುರಸಭೆ ಮುಖ್ಯಾಧಿಕಾರಿ ಅನ್ನದಾನಿಯವರಿಗೆ ರಾಜ್ಯ ಮಾಹಿತಿ ಆಯೋಗದ ಮುಖ್ಯಮಾಹಿತಿ ಆಯುಕ್ತರು ಐದುಸಾವಿರ ರು. ದಂಡ ವಿಧಿಸಿದ್ದಾರೆ.
ಪುರಸಭೆಯಲ್ಲಿ 2010-11 ರಿಂದ 2012-13ನೇ ಸಾಲಿಗೆ, ರಾಜ್ಯ ಸರ್ಕಾರದ ವಿವಿಧ ಅನುದಾನಗಳಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕೆ ವಿನಿಯೋಗಿಸಿರುವ ಅನುದಾನಗಳ ಬಗ್ಗೆ ಶಿವಲಿಂಗಯ್ಯ ಎಂಬುವವರು 10-8 -2012ರಲ್ಲಿ ಮಾಹಿತಿ ಹಕ್ಕಿನಡಿಯಲ್ಲಿ ಮನವಿ ಸಲ್ಲಿಸಿದ್ದರು. ನಿಗದಿತ ಅವಧಿಯೊಳಗೆ ಪುರಸಭೆ ಸಾರ್ವಜನಿಕ ಮಾಹಿತಿ ಅಧಿಕಾರಿಯಾದ ಮುಖ್ಯಾಧಿಕಾರಿ ಮಾಹಿತಿ ನೀಡದ ಕಾರಣ, ಶಿವಲಿಂಗಯ್ಯ ಪ್ರಥಮ ಮೇಲ್ಮನವಿ ಅಧಿಕಾರಿಗಳಾದ ನಗರ ಯೋಜನಾ ನಿರ್ದೇಶಕರಿಗೆ 29-9-2012 ರಲ್ಲಿ ಮೇಲ್ಮನವಿ ಸಲ್ಲಿಸಿದ್ದರೂ ಕೂಡ ಮಾಹಿತಿ ನೀಡದ ಕಾರಣ ರಾಜ್ಯಮಾಹಿತಿ ಆಯೋಗಕ್ಕೆ 3-6-2013 ರಂದು ದೂರುಸಲ್ಲಿಸಿದ ಮೇರೆಗೆ, ರಾಜ್ಯ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರು, ಪ್ರಕರಣವನ್ನು ವಿಚಾರಣೆಗೆ ಕೈಗೊಂಡು 2-12-2013ರಲ್ಲಿ ಮಾಹಿತಿ ನೀಡುವಂತೆ ನೋಟಿಸ್ ಜಾರಿ ಮಾಡಿ ಹಲವು ಬಾರಿ ವಿಚಾರಣೆ ನಡೆಸಿದರೂ ಕೋರಿರುವ ಪೂರ್ಣ ಮಾಹಿತಿ ನೀಡುವಲ್ಲಿ ಮತ್ತು ಲಿಖಿತ ಕಾರಣಗಳನ್ನು ಸಲ್ಲಿಸದ ಕಾರಣ, ಪುರಸಭೆ ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಆದ ಮುಖ್ಯಾಧಿಕಾರಿ ಅನ್ನದಾನಿಯವರಿಗೆ ಐದುಸಾವಿರ ರು.ದಂಡ ವಿಧಿಸಿ ರಾಜ್ಯ ಮುಖ್ಯಮಾಹಿತಿ ಆಯುಕ್ತರಾದ ಎ.ಕೆ.ಎಂ.ನಾಯಕ್ ಆದೇಶಿಸಿದ್ದಾರೆ.
ಹಾವು ಕಡಿದು ವ್ಯಕ್ತಿ ಸಾವು
ಮಧುಗಿರಿ: ತಾಲೂಕಿನ ಗರಣಿ ಪಂಚಾಯಿತಿಗೆ ಸೇರಿದ ಹೊಡ್ಡರಹಟ್ಟಿ ಗ್ರಾಮದ ವ್ಯಕ್ತಿಯೊಬ್ಬ ತನ್ನ ಸ್ವಂತ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಹಾವು ಕಚ್ಚಿ ಮೃತಪಟ್ಟಿರುವ ಘಟನೆ ನಡೆಡಿದೆ. ಮರಡಿರಂಗಪ್ಪ (30) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಈತ ತನ್ನ ಸ್ವಂತ ಜಮೀನಿನಲ್ಲಿ ರಾಗಿ ಹೊಲಕ್ಕೆ ನೀರು ಹಾಯಿಸುತ್ತಿದ್ದಾಗ ಹಾವು ಕಚ್ಚಿದ ಪರಿಣಾಮ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

