ರಾಮ್ದೇವ್ ಗಡಿಪಾರಿಗೆ ಆಗ್ರಹ
ಶಿರಾ: ಎಐಸಿಸಿ ಉಪಾಧ್ಯಕ್ಷ ರಾಹುಲ್ಗಾಂಧಿ ದಲಿತರ ಕೇರಿಗೆ ಹೋಗಿ ವಾಸ್ತವ್ಯ ಮಾಡುತ್ತಿರುವುದು ಹನಿಮೂನ್ಗೆ ಮತ್ತು ಪಿಕ್ನಿಕ್ಗೆ ಎಂದು ಅವಹೇಳನಕಾರಿಯಾಗಿ ಮಾತನಾಡಿರುವ ಬಾಬಾ ರಾಮ್ದೇವ್ ಅವರನ್ನು ಗಡಿಪಾರು ಮಾಡುವಂತೆ ತಾಲೂಕು ದಲಿತ ಸಂಘರ್ಷ ಸಮಿತಿ (ಪ್ರೊ. ಕೃಷ್ಣಪ್ಪ ಸ್ಥಾಪಿತ) ತಾಲೂಕು ಸಂಚಾಲಕ ಟೈರ್ ರಂಗನಾಥ್ಗ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದ ಸರ್ಕಲ್ನಲ್ಲಿ ಇಂದು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಟೈರ್ ರಂಗನಾಥ್ ದಲಿತ ಜನಾಂಗದವರು ಸ್ವಾಭಿಮಾನಿಗಳು. ದಲಿತರ ಬಗ್ಗೆ ಕೇವಲವಾಗಿ ಮಾತನಾಡಿರುವ ಬಾಬಾ ರಾಮ್ದೇವ್ ದಲಿತರ ಕ್ಷಮೆ ಕೇಳಬೇಕು ಎಂದರು.
ರಾಮ್ದೇವ್ ಅವರಿಗೆ ರಾಜಕೀಯ ಇಚ್ಛಾಶಕ್ತಿ ಇದ್ದರೆ ರಾಹುಲ್ ಗಾಂಧಿ ವಿರುದ್ಧ ಚುನಾವಣೆಗೆ ನಿಂತು ಗೆಲ್ಲಲಿ. ಅದನ್ನು ಬಿಟ್ಟು ದಲಿತರಿಗೆ ಅವಮಾನವಾಗುವಂತೆ ಮಾತನಾಡುವುದು, ದಲಿತರ ಆತ್ಮಗೌರವಕ್ಕೆ ಧಕ್ಕೆ ತಂದಿದೆ ಎಂದ ಅವರು ದಲಿತ ಮಹಿಳೆಯರ ಬಗ್ಗೆ ಅವರ ಕಲ್ಪನೆಗಳೇನು. ಈ ದೇಶದ ಮೂಲ ನಿವಾಸಿಗಳಾದ ನಾವು ನಿಜವಾದ ಶೀಲವಂತರು. ನಮ್ಮ ಮಾನ ಹಾನಿಯನ್ನುಂಟು ಮಾಡುವ ರಾಮ್ದೇವ್ ಕರ್ನಾಟಕಕ್ಕೆ ಬಂದರೆ ತೀವ್ರ ರೀತಿಯ ಪ್ರತಿಭಟನೆ ಎದುರಿಸಬೆಕಾಗುತ್ತದೆ ಎಂದರು.
ರಾಜ್ಯ ಬಿ.ಎಸ್.ಪಿ. ಮುಖಂಡ ರಾಜಸಿಂಹ ಅವರು ಮಾತನಾಡಿ ರಾಹುಲ್ಗಾಂಧಿ ದಲಿತರ ಮನೆಗೆ ಮಧುಚಂದ್ರಕ್ಕೆ ಹೋಗುತ್ತಾರೆ ಎಂದು ಮಾತನಾಡಿರುವ ಬಾಬಾ ರಾಮ್ದೇವ್ ಅವರ ಮೇಲೆ ಅಸ್ಪೃಶ್ಯತಾ ಕಾಯ್ದೆ ಹಾಗೂ ಮಾನವ ಹಕ್ಕುಗಳ ಕಾಯ್ದೆಯಡಿ ಬಂಧಿಸಬೇಕು. ಹಿಂಧೂ ಧರ್ಮವನ್ನು ಇಂತಹ ಸ್ವಾಮಿಗಳು ಹಾಳು ಮಾಡುತ್ತಿದ್ದಾರೆ. ಹಿಂದೂಗಳ ಮಧ್ಯೆ ಹೀಗೆ ಜಾತಿ ಜಾತಿ ವೈಷಮ್ಯಕ್ಕೆ ದಾರಿ ಮಾಡಿಕೊಡುತ್ತಿದ್ದಾರೆ. ಇವರ ಮೇಲೆ ಸರಕಾರಗಳು ನಿಗಾ ಇಡಬೇಕು ಎಂದರು.
ಸಮಸ್ಯೆ ತಿಳಿಯಲು ಸಾಧ್ಯ: ಬಾಬಾ ರಾಮ್ದೇವ್ ಅವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಯಾವುದೇ ರಾಜಕೀಯ ನಾಯಕ ದಲಿತರ ಕೇರಿಗಳಲ್ಲಿ ವಾಸ್ತವ್ಯ ಮಾಡಿದರೆ ಅವರ ಸಮಸ್ಯೆ ತಿಳಿಯಲು ಸಾಧ್ಯವಾಗುತ್ತದೆ. ಅದೇ ಕೆಲಸವನ್ನು ರಾಹುಲ್ಗಾಂಧಿ ಮಾಡುತ್ತಿದ್ದಾರೆ. ಆದರೆ ರಾಮ್ದೇವ್ ಅವರು ಎಂದಾದರೂ ದಲಿತರು ಮನೆಯಲ್ಲಿ ಊಟ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.
ನಗರಸಭೆ ಮಾಜಿ ಸದಸ್ಯ ಹಾಗೂ ದಲಿತ ಮುಖಂಡ ಕೆ.ಮಂಜುನಾಥ್ ಮಾತನಾಡಿ ಬಾಬಾ ರಾಮ್ದೇವ್ ಅವರು ರಾಹುಲ್ ಗಾಂಧಿ ದಲಿತರ ಕೇರಿ ಭೇಟಿಯನ್ನು ಹನಿಮೂನ್ಗೆ ಹೋಲಿಸಿರುವುದು ಅವರ ಅರೆ
ಹುಚ್ಚತನದ ಪರಮಾವಧಿಯನ್ನು ತೋರಿಸುತ್ತಿದ್ದು, ದಲಿತ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಅವರನ್ನು ಸರ್ಕಾರ ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದಲಿತ ಮುಖಮುಖಂಡರಾದ ರಾಜು, ಕಾರೇಹಳ್ಳಿ ರಂಗನಾಥ್, ಗೋವಿಂದರಾಜು, ಧನಂಜಯನಾಯ್ಕ ಸೇರಿದಂತೆ ಹಲವರು ಹಾಜರಿದ್ದರು. ಪ್ರತಿಭಟನೆಯ ನಂತರ ತಾಲೂಕು ಕಚೇರಿಗೆ ತೆರಳಿದ ಪ್ರತಿಭಟನಾಕಾರರು ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
-
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

