ಕ್ರಿಕೆಟ್: ಪಟ್ಟನಾಯಕನಹಳ್ಳಿ ತಂಡಕ್ಕೆ ಪ್ರಥಮ ಬಹುಮಾನ
ಶಿರಾ: ಕ್ರಿಕೆಟ್ ಆಟದ ಮೂಲಕ ನಮ್ಮ ದೇಶದ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ಪ್ರಜ್ವಲಿಸುವಂತೆ ಮಾಡಿದ ಆದರ್ಶ ಪುರುಷ ಸಚಿನ್, ಈ ನಿಟ್ಟಿನಲ್ಲಿ ಯುವಕರು ಸಚಿನ್ ಆದರ್ಶ-ಛಲದ ಗುಣಗಳನ್ನು ಮೈಗೂಡಿಸಿಕೊಂಡು ಕ್ರೀಡೆಯಲ್ಲಿ ರೂಢಿಸಿಕೊಂಡು ಕ್ರಿಕೆಟ್ ಜೊತೆಗೆ ಹಳ್ಳಿ ಸೊಗಡಿನ ಕಬಡ್ಡಿಗೂ ಪ್ರಾಧಾನ್ಯತೆ ನೀಡಿ ಗ್ರಾಮೀಣ ಪ್ರದೇಶದ ಕ್ರೀಡೆಗಳ ಉಳಿಸಿ ಬೆಳಸಬೇಕೆಂದು ಸಮಾಜ ಸೇವಕ ತಿಪ್ಪೇಸ್ವಾಮಿ ಹೇಳಿದರು.
ಶಿರಾ ತಾಲೂಕಿನ ಕ್ಯಾದಿಗುಂಟೆ ಗ್ರಾಮದಲ್ಲಿ ಶ್ರೀರಂಗ ಯುವಕರ ಕ್ರಿಕೆಟ್ ಅಸೋಷಿಯನ್ ವತಿಯಿಂದ ಆಯೋಜಿಸಿದ್ದ ಎಚ್.ಡಿ.ದೇವೆಗೌಡ ಟೂರ್ನಿಮೆಂಟ್ನಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿದರು. ಗ್ರಾಮಾಂತರ ಪ್ರದೇಶದಲ್ಲಿ ಉತ್ತಮ ಪ್ರತಿಭೆಗಳಿದ್ದಾರೆ
ಪಟ್ಟನಾಯಕನಹಳ್ಳಿಯ ವಿನಾಯಕ ಕ್ರೀಡಾ ಮತ್ತು ಸಾಂಸ್ಕೃತಿಕ ಯುವಕ ಸಂಘದ ಯುವಕರು ಪ್ರಥಮ ಬಹುಮಾನ ಪಡೆದರು. ಹೊಸಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಮಂಜುಳಾ ತಿಪ್ಪೇಸ್ವಾಮಿ, ಚಿಕ್ಕದಾಸೇಗೌಡ, ಯೋಗಾನಂದ, ನಾಗೇಶ್, ರಂಗನಾಥ್, ಲಕ್ಷ್ಮೀ ನಾರಾಯಣ, ಲಕ್ಷ್ಮಣ್, ಎಸ್.ಮಧುಸೂದನ, ಟಿ.ರಾಘವೇಂದ್ರ, ಕೆ.ಟಿ.ರಂಗನಾಥ್ ಸೇರಿದಂತೆ ಹಲವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

