ಪತ್ನಿಗೆ ಕಿರುಕುಳ: ಪತಿ ಬಂಧನ
ತುರುವೇಕೆರೆ: ಪತ್ನಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡಿದ ಆಪಾದನೆಯ ಮೇರೆಗೆ ಆಕೆಯ ಪತಿ ಹಾಗೂ ಮಾವನನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಿರುವ ಪ್ರಕರಣ ತಾಲೂಕಿನ ಹಾವಾಳ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಬಲಮಾದಿಹಳ್ಳಿಯ ಮಹಲಿಂಗಪ್ಪನವರ ಮಗಳು ರೂಪಾಳನ್ನು ಹಾವಾಳ ಗ್ರಾಮದ ಲಕ್ಷ್ಮಣಗೌಡರ ಮಗ ನಾಗರಾಜುಗೆ ಕಳೆದ ಜೂನ್ 2011 ರಲ್ಲಿ ಕೊಟ್ಟು ವಿವಾಹ ಮಾಡಲಾಗಿತ್ತು. ಮದುವೆ ವೇಳೆ 130 ಗ್ರಾಂ ಬಂಗಾರ ಹಾಗೂ ರು.50 ಸಾವಿರ ನೀಡಿ ಮದುವೆ ಮಾಡಿಕೊಡಲಾಗಿತ್ತು.
ಮದುವೆಯಾದ 6 ತಿಂಗಳ ತನಕ ರೂಪಾಳನ್ನು ಚೆನ್ನಾಗಿಯೇ ನೋಡಿಕೊಳ್ಳಲಾಗಿತ್ತು. ಆದರೆ ತದ ನಂತರದ ದಿನಗಳಲ್ಲಿ ರೂಪಾಳನ್ನು ಆಕೆಯ ಪತಿ ನಾಗರಾಜು ಹಾಗೂ ಅವರ ಕುಟುಂಬದವರು ವಿನಾಕಾರಣ ದೈಹಿಕ ಹಿಂಸೆ ಕೊಡುತ್ತಿದ್ದರು ಎಂದು ರೂಪಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಗ್ರಾಮದ ಹಾಗೂ ತಮ್ಮ ಬಂಧುಗಳು ನಡೆಸಿದ ರಾಜಿ ಸಂಧಾನವೂ ಫಲ ನೀಡಿರಲಿಲ್ಲ. ಕಳೆದ 27 ರಂದು ಮಧ್ಯಾಹ್ನ ರೂಪಾಳಿಗೆ ಸಣ್ಣ ಪುಟ್ಟ ವಿಚಾರಕ್ಕೆ ಪತಿ ನಾಗರಾಜು, ಮಾವ ಲಕ್ಷ್ಮಣಗೌಡ, ಅತ್ತೆ ಲಕ್ಕಮ್ಮ ಹಾಗೂ ನಾದಿನಿ ಕಲಾವತಿ ಮಾನಸಿಕವಾಗಿ ಕಿರುಕುಳ ನೀಡಿದ್ದಲ್ಲದೆ ದೊಣ್ಣೆಯಿಂದ ಕೈಗೆ ಥಳಿಸಿದ್ದಾರೆ ಎಂದು ರೂಪಾ ಪೊಲೀಸರಿಗೆ ದೂರು ನೀಡಿದ್ದಾರೆ. ರೂಪಾ ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೋಲಿಸರು ಆರೋಪಿಗಳಾದ ಪತಿ ನಾಗರಾಜು ಹಾಗೂ ಮಾವ ಲಕ್ಷ್ಮಣಗೌಡರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

