ತುಮಕೂರು

ಖನಿಜ ಮಿಶ್ರಣ ಬಳಕೆ, ನಿರ್ವಹಣಾ ಕ್ರಮಗಳ ತರಬೇತಿ

Published On :

ತಿಪಟೂರು: ತಾಲೂಕಿನ ಬಿದರೆಗುಡಿ ಕಾವಲ್‌ನ  ಕೃಷಿ ವಿಜ್ಞಾನ ಕೇಂದ್ರದಲ್ಲಿ ಹೈನುರಾಸುಗಳಲ್ಲಿ ಖನಿಜ ಮಿಶ್ರಣ ಬಳಕೆ ಹಾಗೂ ನಿರ್ವಹಣಾ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಜಿ.ಎಂ. ಸುಜಿತ್ ಹೈನುಗಾರಿಕೆಯು ಸಮಗ್ರ ಕೃಷಿ ಪದ್ಧತಿಯ ಬಹುಮುಖ್ಯ ಅಂಗವಾಗಿದ್ದು, ರೈತರು ಸುಧಾರಿತ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಅಧಿಕ ಅದಾಯ ಗಳಿಸಬಹುದೆಂದು ತಿಳಿಸಿದರು.
  ಡಾ. ಸಿದ್ದರಾಮಣ್ಣನವರು ಹೈನುಗಾರಿಕೆಯಲ್ಲಿ ಅಳವಡಿಸಿಕೊಳ್ಳಬಹುದಾದ ಸುಧಾರಿತ ತಾಂತ್ರಿಕತೆಗಳಾದ ಮೇವಿನ ಬೆಳೆ, ಖನಿಜ ಮಿಶ್ರಣ, ರೋಗನಿರ್ವಹಣೆಯ ಕುರಿತು ಚರ್ಚಿಸಿದರು.
 ಕೇಂದ್ರದ ಪ್ರಾಣಿಶಾಸ್ತ್ರ ವಿಷಯದ ತಜ್ಞ ಡಾ.ಶಿವಪ್ಪನಾಯಕ ಇಂತಹ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದರಿಂದ ಕಡಿಮೆ ಖರ್ಚಿನಲ್ಲಿ ಅಧಿಕ ಆದಾಯ ಗಳಿಸಬಹುದೆಂದು ತಿಳಿಸಿದರು.  
    ಕೇಂದ್ರದ ವಿಷಯ ತಜ್ಞರಾದ ಡಾ.ಶ್ರೀನಿವಾಸ್, ಡಾ.ಶಂಕರ, ಡಾ. ನಾಗಪ್ಪದೇಸಾಯಿ ಸೇರಿದತೆ ಸುಮಾರು 50ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.