ತುಮಕೂರು

ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಜಿ.ಪಂ.ಅಧ್ಯಕ್ಷೆ ಭೇಟಿ

Published On :

ಕ.ಪ್ರ.ವಾರ್ತೆ    ಮಧುಗಿರಿ    ಫೆ.2
ತಾಲೂಕಿನ ಮಿಡಿಗೇಶಿ ಹೋಬಳಿ ಬೇಡತ್ತೂರು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಜಿ.ಪಂ.ಅಧ್ಯಕ್ಷೆ ಸಾಕಮ್ಮ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ ಈಚೆಗೆ  ಭೇಟಿ ನೀಡಿ  ಪರಿಶೀಲಿಸಿದರು.
ಇಲ್ಲಿನ ಕುಂದು-ಕೊರತೆ ಬಗ್ಗೆ ವಿದ್ಯಾರ್ಥಿಗಳನ್ನು ವಿಚಾರಿಸಲಾಗಿ, ನಮಗೆ ಯಾವುದೇ ರೀತಿ ತೊಂದರೆ ಇಲ್ಲ, ಸಕಾಲದಲ್ಲಿ ಊಟ, ತಿಂಡಿ ಎಲ್ಲವು ನೀಡುತ್ತಾರೆ.
ಇಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ, ವಾರ್ಡನ್ ಮತ್ತು ಪ್ರಾಂಶುಪಾಲರು ಚೆನ್ನಾಗಿ ನೋಡಿಕೊಳ್ಳುತ್ತಾರೆ  ಎಂದು ವಿದ್ಯಾರ್ಥಿನಿಯರು ವಿವರಿಸಿದರು. ಈಗಿರುವ  ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುವಾಣವಾಗಿ ಸ್ನಾನದ ಗೃಹ ಮತ್ತು ಶೌಚಾಲಯಗಳ ಕೊರತೆಯಿದೆ ಇದನ್ನು ಸರಿಪಡಿಸಿ ಕೊಡುವಂತೆ ಕೋರಿದರು.
ಜಿ.ಪಂ.ಅಧ್ಯಕ್ಷೆ ಸಾಕಮ್ಮ ಈ ವಸತಿ ಶಾಲೆ ಹೆಣ್ಣು ಮಕ್ಕಳ ಶಾಲೆ ಆಗಿರುವುದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನುಗುಣವಾಗಿ  ಸರ್ಕಾರದಿಂದ ಬರುವ ಎಲ್ಲ ಸೌಲಭ್ಯಗಳನ್ನು ಚಾಚು ತಪ್ಪದೇ ನೀಡಿ ಶಿಕ್ಷಣ ಕಲಿಕೆಗೆ ಪ್ರೋತ್ಸಾಹಿಸುವ ಜವಾಬ್ದಾರಿ ವಾರ್ಡನ್ ಅಶ್ವತ್ಥಮ್ಮ ಮತ್ತು ಸಂಬಂಧಪಟ್ಟ  ಅಧಿಕಾರಿಗಳ ಕರ್ತವ್ಯವಾಗಿದೆ. ವಿದ್ಯಾರ್ಥಿಗಳಿಗೆ   ಯಾವುದೇ ರೀತಿ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ಸಲಹೆ ನೀಡಿದರು. ಈ ತಕ್ಷಣ  ನರೇಗಾ ಯೋಜನೆಯಡಿ  ಶೌಚಾಲಯ ಮತ್ತು ಸ್ನಾನದ ಮನೆಗಳನ್ನು  ನಿರ್ಮಿಸಿ ಕೊಡುವಂತೆ ಪಿಡಿಓ ಅವರಿಗೆ ಸೂಚಿಸಿದರು.
ನಂತರ ಪಟ್ಟಣದ ಬೆಸ್ಕಾಂ ಕಚೇರಿ ಹಿಂಭಾಗವಿರುವ ಸರ್ಕಾರಿ ಮೆಟ್ರಿಕ್ ನಂತರ ಹಾಸ್ಟೆಲ್ಗೆ ಭೇಟಿ ನೀಡಿ ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿದರು.
 ಈ ವೇಳೆ ಶೌಚಾಲಯದ ಅವ್ಯವಸ್ಥೆ ಬಗ್ಗೆ ಗಮನ ಹರಿಸುವಂತೆ ವಿದ್ಯಾರ್ಥಿಗಳು ಕೋರಿದಾಗ ಸ್ಥಳದಲ್ಲೇ ಹಾಜರಿದ್ದ ಸಮಾಜ ಕಲ್ಯಾಣಾಧಿಕಾರಿಗೆ ತಕ್ಷಣ ಶೌಚಾಲಯದ ಕೊರತೆ ನೀಗಿಸುವಂತೆ ತಾಕೀತು ಮಾಡಿದರು.
ಇದಕ್ಕೂ ಮುಂಚೆ ತಾ.ಪಂ.ಸಮಾಜ ಕಲ್ಯಾಣ ಇಲಾಖೆ, ಡಿಡಿಪಿಐ ಕಚೇರಿ,ಬಿಸಿಎಂ ಹಾಸ್ಟೆಲ್ಗಳಿಗೆ ಬೇಟಿ ನೀಡಿ ಪರಿಶೀಲಿದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.