ಬಸವರಾಜು ಅವರೇ ಅಭ್ಯರ್ಥಿ: ಬಿಎಸ್ವೈ
ಚೇಳೂರು: ಮಠ ಮಾನ್ಯಗಳು ಸರ್ಕಾರಕ್ಕಿಂತಲೂ ಒಂದು ಹೆಜ್ಜೆ ಮುಂದೆ ಇಟ್ಟು ಕಡುಬಡ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿವೆ. ಆ ಶಿಕ್ಷಣದ ಜೊತೆಗೆ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಿ ಉತ್ತಮ ಪ್ರಜೆಗಳಾಗಲು ಮಠ-ಮಂದಿರಗಳು ಸಹಕಾರ ನೀಡುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಅವರು ಗುಬ್ಬಿ ತಾಲೂಕಿನ ಬೆಟ್ಟದಹಳ್ಳಿ ಗವಿಮಠ ಪುನರ್ ನಿರ್ಮಾಣದ ಶಿಲಾಕಟ್ಟಡದ ಉದ್ಘಾಟನೆ ಹಾಗೂ ಶಿವಯೋಗಿ ಸಿದ್ದರಾಮೇಶ್ವರರ 841 ನೇ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವೀರಶೈವ ಧರ್ಮದಲ್ಲಿ ಹುಟ್ಟಿರುವ ಜನರು ನಮ್ಮ ನಮ್ಮ ಗ್ರಾಮಗಳಲ್ಲಿ ನಮ್ಮ ಜಾತಿಯ ಜನಗಳ ಜೊತೆಗೆ ಬೇರೆ ಜಾತಿಯ ಜನರನ್ನು ಪ್ರೀತಿ ವಿಶ್ವಾಸವನ್ನು ಗಳಿಸಿ ಅವರನ್ನು ನಮ್ಮ ಜೊತೆಯಲ್ಲಿ ಇದ್ದಾರೆ ಎಂದು ತಿಳಿದುಕೊಂಡು ನಮ್ಮ ಸಂಸ್ಕಾರ ಅವರ ಸಂಸ್ಕಾರಗಳನ್ನು ಜೊತೆಗೂಡಿ ಎಲ್ಲರೂ ಒಂದೇ ಎಂದು ಬಾಳಬೇಕು. ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು ಜಾತಿಯ ವಿಷಬೀಜವನ್ನು ಬಿತ್ತಿ ನಮ್ಮ ಮನಸ್ಸಗಳನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಇಂತವುಗಳಿಗೆ ಅವಕಾಶ ಕೊಡದೆ ವೀರಶೈವ ಜನಾಂಗದವರು ಎಚ್ಚೆತ್ತುಕೊಳ್ಳಬೇಕು ಎಂದರು.
ಬಸವರಾಜು ಅಭ್ಯರ್ಥಿ: ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲು ತುಮಕೂರು ಜಿಲ್ಲೆಗೆ ಜಿ.ಎಸ್. ಬಸವರಾಜು ಅವರೆ ಅಭ್ಯರ್ಥಿಯಾಗುತ್ತಾರೆ. ಅವರಿಗೆ ನಿಮ್ಮೆಲ್ಲರ ಸಹಕಾರ ಇರಬೇಕು. ಅವರು ಈಗಾಗಲೇ ನೀರಾವರಿ ಬಗ್ಗೆ ಹೆಚ್ಚಿನ ಹೋರಾಟವನ್ನು ಮಾಡುತ್ತಿದ್ದು, ಅಳಿಲುಘಟ್ಟ, ಹಾಗಲವಾಡಿ, ಹೊಸಕೆರೆ, ಚೇಳೂರು, ವಿವಿಧ ಕೆರೆಗಳಿಗೆ ನೀರು ಹರಿಸಲು ಪ್ರಯತ್ನ ಪಡುತ್ತಿದ್ದು ಅಂತ ಹೋರಾಟ ಮಾಡುವವರಿಗೆ ಸಹಕಾರ ನೀಡಬೇಕು ಎಂದರು.
ದೇಶದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿಯವರು ಆ ರಾಜ್ಯದ ಅಭಿವೃದ್ಧಿಯನ್ನು ಮಾಡಿ ಎಲ್ಲ ರೈತರಿಗೂ ನೀರು ರಸ್ತೆ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಿ ದೇಶದಲ್ಲಿ ಹೆಸರು ಮಾಡಿದ್ದಾರೆ. ಅಂತಹ ಒಬ್ಬ ರಾಜಕಾರಣಿ ಒಂದು ಟೀ ಅಂಗಡಿಯಲ್ಲಿ ಟೀ ವ್ಯಾಪಾರ ಮಾಡಿಕೊಂಡು ರಾಜ್ಯದ ಮುಖ್ಯಮಂತ್ರಿಯಾಗಿ ಈ ದೇಶವನ್ನು ಅಭಿವೃದ್ಧಿ ಪಡಿಸಲು ಎಲ್ಲಾ ರಾಜ್ಯದ ಜನರು ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕು ಎಂಬ ಮನಸ್ಸು ಮಾತು ಕೇಳಿಬರುತ್ತಿದೆ. ಅಂತ ಹೆಸರು ಗಳಿಸಬೇಕಾದರೆ ಅವರು ಯಾವ ರೀತಿ ಅಭಿವೃದ್ಧಿ ಮಾಡಿದ್ದಾರೆ. ಜನರು ಮತ್ತು ದೇಶದ ಬಗ್ಗೆ ಎಷ್ಟು ಚಿಂತನೆ ಮಾಡಿದ್ದಾರೆ. ಅಂತಹ ಒಬ್ಬ ಮುಖ್ಯಮಂತ್ರಿಗೆ ನಾವೆಲ್ಲರೂ ಪ್ರಧಾನಿ ಮಾಡಲು ಸಹಕರಿಸಬೇಕು. ಎಂದರು.
ಮುಗಿದ ಸರ್ವೇಕಾರ್ಯ: ಸಂಸದ ಜಿ.ಎಸ್. ಬಸವರಾಜು ಮಾತನಾಡಿ ಗುಬ್ಬಿ ತಾಲೂಕಿನಲ್ಲಿ ಹಾಗಲವಾಡಿ ಚೇಳೂರು ಭಾಗದ ಕೆರೆಗಳಿಗೆ ನೀರು ಹರಿಸಲು ಈಗಾಗಲೇ ಸರ್ವೇಕಾರ್ಯ ಮುಗಿದಿದ್ದು, ಹಣ ಬಿಡುಗಡೆಯಾಗಿದೆ. ಅನುಮೋದನೆ ದೊರೆತು ಟೆಂಡರ್ ಪ್ರಕ್ರಿಯೆ ಪ್ರಾರಂಭವಾದ ನಂತರ ಕಾಮಗಾರಿ ಚಾಲನೆ ನೀಡಲಾಗುತ್ತದೆ. ಈ ಭಾಗದ ರೈತರಿಗೆ ಬೇಕಾಗಿರುವುದು ಕೆರೆ ಕಟ್ಟೆಗಳಿಗೆ ನೀರು ಬಿಡಬೇಕು. ಆಗ ರೈತರು ಜನಜಾನುವಾರುಗಳನ್ನು ಸಾಕಿಕೊಳ್ಳಲು ಅನುಕೂಲವಾಗುತ್ತದೆ ಎಂದರು.
ಬೆಟ್ಟದಹಳ್ಳಿ ಗವಿಮಠಾಧ್ಯಕ್ಷ ಚಂದ್ರಶೇಖರ ಸ್ವಾಮಿಗಳು ಈ ಭಾಗದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅವಿರತ ಪ್ರಯತ್ನ ಹಾಕುತ್ತಿದ್ದು ಸಂಸ್ಥೆಗಳನ್ನು ಕಟ್ಟಿಕೊಂಡು ಶಿಕ್ಷಕರು ಮತ್ತು ಭಕ್ತರ ಸಹಕಾರದಿಂದ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದ್ದಾರೆ ಎಂದರು.
ಸಾನಿಧ್ಯ ವಹಿಸಿದ್ದ ಶ್ರೀ ಕ್ಷೇತ್ರಗವಿಮಠ ಬೆಟ್ಟದಹಳ್ಳಿಯ ಚಂದ್ರಶೇಖರಸ್ವಾಮಿಗಳು ಮಾತನಾಡಿ ಈ ಶಿವಯೋಗಿ ಸಿದ್ದರಾಮೇಶ್ವರರ 841 ನೇ ಜಯಂತಿ ಹಾಗೂ ಈ ಮಠದ ಶಿಲಾಕಟ್ಟಡಕ್ಕೆ ಸಹಕಾರ ನೀಡಿದ ಬೆಟ್ಟದಹಳ್ಳಿ ಗ್ರಾಮಸ್ಥರು ಹಾಗೂ ಅಕ್ಕ-ಪಕ್ಕದ ಗ್ರಾಮಸ್ಥರು ಕಾರ್ಯಕಾರಿ ಮಂಡಳಿಯವರು ನೌಕರರ ವರ್ಗ ಹಾಗೂ ಭಕ್ತಾದಿಗಳು ಸಹಕಾರ ನೀಡಿದ್ದಾರೆ. ಎಲ್ಲರಿಗೂ ಶರಣಾರ್ಥಿ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

