ಲವ್ ಜಿಹಾದ್ ಜಿಲ್ಲೆಯಲ್ಲಿ ಅವ್ಯಾಹತ
ತುಮಕೂರು: ತುಮಕೂರು ಜಿಲ್ಲೆಯಲ್ಲಿ ಅವ್ಯಾಹತವಾಗಿ ಲವ್ ಜಿಹಾದ್ ನಡೆಯುತ್ತಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಗಂಭೀರ ಆರೋಪ ಮಾಡಿದರು.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತುಮಕೂರು, ತಿಪಟೂರು ಮುಂತಾದ ಕಡೆ ಅವ್ಯಾಹತವಾಗಿ ನಡೆಯುತ್ತಿದೆ. ಕೆಲವು ಕಡೆ ಪ್ರಕರಣ ಕೂಡ ದಾಖಲಾಗುತ್ತಿಲ್ಲ ಎಂದರು.
ತುಮಕೂರಿನ ಚಿಕ್ಕಪೇಟೆ ಸೇರಿದಂತೆ ಬಹುತೇಕ ಕಡೆ ಒಂದು ಕೋಮಿನವರನ್ನೇ ಗುರಿ ಮಾಡಲಾಗುತ್ತಿದೆ. ಈ ಸಂಬಂಧ ಕ್ರಮ ಕೈಗೊಳ್ಳಬೇಕೆಂದು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು. ತಿಪಟೂರಿನಲ್ಲಿ ಲವ್ ಜಿಹಾದ್ ಪ್ರಕರಣವೊಂದು ಕಂಡು ಬಂದಿತ್ತು. ಕೂಡಲೇ ಅಲ್ಲಿನ ಮಾಜಿ ಶಾಸಕ ಬಿ.ಸಿ. ನಾಗೇಶ್ ಅವರು ಮೌಲ್ವಿಗಳಿಗೆ ಈ ವಿಷಯ ತಿಳಿಸಿದ್ದರು ಎಂದರು.
ಅವ್ಯಾಹತವಾಗಿ ಲಂಚ: ತುಮಕೂರಿನ ಸರ್ಕಾರಿ ಕಚೇರಿಯಲ್ಲಿ ಒಂದು ಟೇಬಲ್‌ನಿಂದ ಮತ್ತೊಂದು ಟೇಬಲ್‌ಗೆ ವರ್ಗಾವಣೆ ಆಗಬೇಕೆಂದರೆ 50 ಸಾವಿರ ರು. ಲಂಚ ನೀಡಬೇಕಾದ ಸ್ಥಿತಿ ಇದೆ ಎಂದು ಶಿವಣ್ಣ ಆರೋಪಿಸಿದರು. ಇಡೀ ಸರ್ಕಾರವೇ ವಸೂಲಿ ಬಾಜಿಗೆ ಇಳಿದಿದೆ ಎಂದು ಹರಿಹಾಯ್ದರು. ತುಮಕೂರು ನಗರ ತುಂಬೆಲ್ಲಾ ಬೀದಿ ದೀಪಗಳೇ ಇಲ್ಲ. ಎಲ್ಲವೂ ಕೆಟ್ಟು ಕೂತಿವೆ. ಅದನ್ನು ರಿಪೇರಿ ಮಾಡುವ ಕೆಲಸ ಮಾತ್ರ ನಡೆಯುತ್ತಿಲ್ಲ ಎಂದು ತಿಳಿಸಿದರು.
ತುಮಕೂರಿನ ಎಲ್ಲಾ 35 ವಾರ್ಡ್‌ಗಳಲ್ಲೂ ಇದೇ ಸಮಸ್ಯೆ ಇದೆ. ಶಾಸಕರು ಕೂಡ ಈ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಹರಿಹಾಯ್ದರು.
ಗರಿಷ್ಠ ಅಭಿವೃದ್ಧಿ: ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾಗಿ ತಿಳಿಸಿದ ಶಿವಣ್ಣ ಅವರು ಶಾಸಕ ರಫೀಕ್ ಮಾಡಿರುವ ಅಭಿವೃದ್ಧಿ ಪಟ್ಟಿಯ ಕಿರು ಹೊತ್ತಿಗೆಯಲ್ಲಿ ಇರುವ ಎಲ್ಲಾ ಕಾರ್ಯಗಳು ತಮ್ಮ ಅವಧಿಯಲ್ಲಿ ಆಗಿದ್ದು. ಕೇವಲ ಅವರು ಮರುಪ್ರಸಾರ ಮಾಡುತ್ತಿದ್ದಾರೆ ಎಂದು ಛೇಡಿಸಿದರು.
ಕೆರೆ ಅಭಿವೃದ್ಧಿ, ರಸ್ತೆ, ಮೇಲ್ಸೇತುವೆ ಸೇರಿದಂತೆ ಎಲ್ಲಾ ಅಭಿವೃದ್ಧಿ ಕಾರ್ಯಗಳು ತಮ್ಮ ಸರ್ಕಾರ ಇದ್ದಾಗ ಆಗಿದ್ದು. ತಮ್ಮ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾಗಿರುವ ಹಣವನ್ನು ಖರ್ಚು ಮಾಡುವ ಗೋಜಿಗೂ ಹೋಗುತ್ತಿಲ್ಲ ಎಂದು ಶಾಸಕರ ವಿರುದ್ಧ ತೀಕ್ಷ್ಮಣವಾಗಿ ಪ್ರತಿಕ್ರಿಯಿಸಿದರು.
ಬಸ್ಸು ಬಂದಿಲ್ಲ: ನರ್ಮ್ ಯೋಜನೆಯಡಿ ತುಮಕೂರಿಗೆ 40 ಬಸ್ ಬರ ಬೇಕಾಗಿತ್ತು. ಆದರೆ ಈವರೆಗೆ ಬಂದಿಲ್ಲ. ಇದರ ಬಗ್ಗೆ ಗಮನಹರಿಸುವ ಗೋಜಿಗೂ ಶಾಸಕ ರಫೀಕ್ ಅಹಮದ್ ಹೋಗಿಲ್ಲ. ಅಲ್ಲದೇ ಈಗಾಗಲೇ ಸಿಟಿ ಬಸ್ ಟ್ರಿಪ್‌ಗಳನ್ನು ಕೂಡ ಕ್ಯಾನ್ಸಲ್ ಮಾಡಿದ್ದಾರೆ ಎಂದು ಟೀಕಿಸಿದರು.
ಪಾರ್ಕ್ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ನಿರ್ಧಾರವನ್ನು ಸ್ವಾಗತಿಸಿದ ಶಿವಣ್ಣ ಯಾರೇ ಒತ್ತುವರಿ ಮಾಡಲಿ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಿ ಎಂದರು.
ಧರಣಿ ನಿಶ್ಚಿತ: ತುಮಕೂರಿಗೆ ಮೆಡಿಕಲ್ ಕಾಲೇಜು ಸ್ಥಾಪನೆ ಸಂಬಂಧ ಮಾರ್ಚ್ 1 ರಂದು ತಮ್ಮ ಧರಣಿ ನಿಶ್ಚಿತ ಎಂದ ಅವರು ಮೆಡಿಕಲ್ ಕಾಲೇಜು ವಿಷಯದಲ್ಲಿ ಹಾಲಿ ಶಾಸಕರು ತಪ್ಪು ತಪ್ಪು ಹೇಳಿಕೆ ನೀಡುವುದನ್ನು ಬಿಡಲಿ ಎಂದರು.
ಕಾಲೇಜಿಗೆ ಹಣ ನೀಡಲಿ: ತುಮಕೂರು ಸರ್ಕಾರಿ ಕಾಲೇಜನ್ನು ನಮ್ಮ ಸರ್ಕಾರ ಸ್ಥಾಪಿಸಿದ್ದು ಈ ಕೂಡಲೇ ಕಾಲೇಜಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಎಂ.ಬಿ. ನಂದೀಶ್, ಸ್ನೇಕ್ ನಂದೀಶ್, ಕೆ.ಪಿ. ಮಹೇಶ್ ಇತರರು ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

