ಹುಲಿಯೂರುದುರ್ಗ ಬಂದ್ ಸಂಪೂರ್ಣ
ಕುಣಿಗಲ್: ಹುಲಿಯೂರುದುರ್ಗ ಗ್ರಾಪಂಯನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸುವಂತೆ ಮತ್ತು ಸೂಕ್ತ ರುದ್ರಭೂಮಿ ಕಲ್ಪಿಸಿ ಕೊಡುವಂತೆ ಸ್ಥಳೀಯ ಕರವೇ ನೇತೃತ್ವದಲ್ಲಿ ಇತರೆ ಸಂಘ ಸಂಸ್ಥೆಗಳು ಬುಧವಾರ ಕರೆ ನೀಡಿದ್ದ ಹುಲಿಯೂರುದುರ್ಗ ಬಂದ್ ಸಂಪೂರ್ಣ ಯಶಸ್ವಿಯಾಯಿತು.
ತಾಲೂಕು ಕರವೇ ಅಧ್ಯಕ್ಷ ಎಂ.ಸಿ.ಬಾಬು, ಪದಾಧಿಕಾರಿಗಳಾದ ಬಾಬು.ಮಧು,ದೇವರಾಜು, ವಿವೇಕಾನಂದ, ಗ್ರಾಪಂ ಅಧ್ಯಕ್ಷ ವೆಂಕಟೇಶ್, ಸದಸ್ಯ ನಟರಾಜ್, ಕಿಲಾಡಿಕೃಷ್ಣಪ್ಪ ಮತ್ತಿತರರ ನೇತೃತ್ವದಲ್ಲಿ ಸಂಘಟಿತರಾದ ಆಟೋ ಚಾಲಕ ಸಂಘ, ಟ್ಯಾಕ್ಸಿ ತಾಲಕರ ಸಂಘ ಸೇರಿದಂತೆ ಇತರೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪ್ರಮುಖ ಬೀದಿಗಳಲ್ಲಿ ಕಂದಾಯ ಇಲಾಖೆ ಮತ್ತು ಸರ್ಕಾರದ ವಿರುದ್ದ ಘೋಷಣೆ ಕೂಗಿ ವೈ.ಕೆ. ರಾಮಯ್ಯ ಸರ್ಕಲ್ನಲ್ಲಿ ಪ್ರತಿಭಟನಾ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಪಂ ಅಧ್ಯಕ್ಷ ವೆಂಕಟೇಶ್, ಮರಳು ಲಾರಿ ಹಿಡಿಯುವಲ್ಲಿ ಧಾವಂತ ತೋರುವ ಕಂದಾಯ ಇಲಾಖಾಧಿಕಾರಿಗಳು, ಗ್ರಾಮದ ಜನತೆ ಸತ್ತರೆ ಹೂಳಲು ಜಾಗ ತೋರಿಸುವ ಧಾವಂತ ಮಾಡದೆ, ಗ್ರಾಮಸ್ಥರು ವಿಧಿ ಇಲ್ಲದೆ ಸತ್ತವರನ್ನು ಕೆರೆ ಅಂಗಳದಲ್ಲಿ ಹೂಳುವಂತಾಗಿದೆ.ಕಳೆದ ಐದುವರ್ಶಗಳಲ್ಲಿ ಐದನೇ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸುತ್ತಿದ್ದು, ಇಲಾಖಾಧಿಕಾರಿಗಳ ನಿರ್ಲಕ್ಷ್ಯದಿಂದ ಪರಿಸ್ಥಿತಿ ಹದಗೆಟ್ಟಿದೆ,ಸೂಕ್ತ ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ, ಕಂದಾಯ ಇಲಾಖಾಧಿಕಾರಿಗಗಳು ಸಕಾಲಕ್ಕೆ ಆಗಮಿಸಿ ಮನವಿ ಸ್ವೀಕರಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಕರವೇ ಅಧ್ಯಕ್ಷ ಎಂ.ಸಿ.ಬಾಬು ಮಾತನಾಡಿ, ಹು.ದುರ್ಗದಲ್ಲಿ ಎಂಟು ಸಾವಿರಕ್ಕೂ ಹೆಚ್ಚುಮಂದಿ ಇದ್ದಾರೆ. ಅಕ್ಕಪಕ್ಕದ ಗ್ರಾಮಗಳು ಸೇರಿದರೆ ಪಟ್ಟಣ ಪಂಚಾಯಿತಿ ಆಗುವ ಅರ್ಹತೆ ಹೊಂದಿದೆ. ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಪ.ಪಂ ಆಗಿಲ್ಲ, ರುದ್ರಭೂಮಿಗೆ ಸೂಕ್ತ ಜಾಗ ಗುರುತಿಸಲು ಕಂದಾಯ ಇಲಾಖೆ ವಿಫಲವಾಗಿದ್ದು, ರುದ್ರಭೂಮಿ ಜಾಗ ಗುರುತಿಸಿಕೊಡುವವರೆಗೂ ಹೋರಾಟ ಕೈಬಿಡುವ ಪ್ರಶ್ನೆಇಲ್ಲ, ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ತಿಳಿಸಿದರು.
ಪ್ರತಿಭಟನಾಕಾರರೊಂದಿಗೆ ಚರ್ಚಿಸಿದ ತಹಸೀಲ್ದಾರ್ ಪುಟ್ಟನರಸಯ್ಯ, ಚಿತಾಗಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

