ತುಮಕೂರು

ವಿದ್ಯಾರ್ಥಿಗಳ ಮೊಬೈಲ್ ಬಳಕೆ: ಕಠಿಣ ಕ್ರಮ ಅನಿವಾರ್ಯ- ಶಾಸಕ

Published On :

ಕ.ಪ್ರ. ವಾರ್ತೆ   ಕುಣಿಗಲ್   ಫೆ.17
ಪಿಯೂ ವ್ಯಾಸಂಗದ ವಿದ್ಯಾರ್ಥಿಗಳು ಮೊಬೈಲ್ ಬಳಕೆಯ ದುಶ್ಚಟಗಳಿಗೆ ಬಲಿಯಾಗುವುದು ಸಾಮಾನ್ಯವಾಗುತ್ತಿದ್ದು, ಕಾಲೇಜಿನ ಆಡಳಿತ ವರ್ಗ, ಉಪನ್ಯಾಸವರ್ಗದವರು ಕಾಲೇಜು ಅವಧಿಯಲ್ಲಿ ವಿದ್ಯಾರ್ಥಿಗಳ ಮೊಬೈಲ್ ಬಳಕೆಯ ಬಗ್ಗೆ ಕಠಿಣವಾಗಿ ವರ್ತಿಸುವ ಅನಿವಾರ್ಯತೆ ಇದೆ ಎಂದು ಶಾಸಕ ಡಿ. ನಾಗರಾಜಯ್ಯ ಅಭಿಪ್ರಾಯಪಟ್ಟರು.
ಗುರುವಾರ, ಪಟ್ಟಣದ ಸ್ವಾಮಿ ಪ.ಪೂ.ಕಾಲೇಜಿನ 2013-14ನೇ ಸಾಲಿನ ಸಾಂಸ್ಕೃತಿಕ ಕಾರ್ಯಕ್ರಮಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ತಾಲೂಕಿನ ಬಹುತೇಕ ಕಾಲೇಜುಗಳಲ್ಲಿ ಗ್ರಾಮಾಂತರ ಪ್ರದೇಶದಿಂದಲೇ  ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಲಿಯಲು ಆಗಮಿಸುತ್ತಿದ್ದು, ತಾವೇ ಗಮನಿಸಿದಂತೆ ಸಾಕಷ್ಟು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮೊಬೈಲ್ನಲ್ಲೆ ಮುಳುಗಿರುತ್ತಾರೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಮಾರಕವಾಗಿದೆ. ವಿದ್ಯಾರ್ಥಿಗಳು,ತಮ್ಮ ಪೋಷಕರ ಸ್ಥಿತಿಗತಿಗಳ ಬಗ್ಗೆ ಕಿಂಚಿತ್ತು ಆಲೋಚಿಸಿ ಅವರ ನಂಬಕೆ ಚ್ಯುತಿ ಬಾರದಂತೆ ಬದ್ಧತೆಯಿಂದ ವರ್ತಿಸಬೇಕಿದೆ ಎಂದರು.
ಜಿಪಂಸದಸ್ಯ ವೈ.ಎಚ್. ಹುಚ್ಚಯ್ಯ, ಪದವಿಪೂರ್ವ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ, ಪಿಯು ಶಿಕ್ಷಣ ಅವರ ಜೀವನದ ತಿರುವಿನ ಘಟ್ಟವಾಗಿದೆ. ಸತತಸಾಧನೆಯಿಂದ ವಿದ್ಯಾರ್ಥಿಗಳು ಸಾರ್ಥಕ ಜೀವನ ನಡೆಸಬೇಕೆಂದರು. ಭಗವಾನ್ ಬುದ್ಧ ಫಿಲಾಸಫಿ ಪ್ರಶಸ್ತಿ ಪಡೆದ ಕೊರಟಗೆರೆಯ ಕಲಾವಿದ ಮರಿಯಪ್ಪ, ಉತ್ತಮ ಸಾಧನೆ ಮಾಡಿದ ಶಾಲಾ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಾಹಿತಿ ಮೇಜರ್ ಚಂದ್ರಪ್ಪ ಉಪನ್ಸಾಸ ನೀಡಿದರು. ಪ್ರಾಚಾರ್ಯ ಮಲ್ಲಪ್ಪ, ಆಡಳಿದ ಮಂಡಳಿ ಅಧ್ಯಕ್ಷ ವರದರಾಜು, ಕಾರ್ಯದರ್ಶಿ ವೆಂಕಟಯ್ಯ ಇತರರು ಉಪಸ್ಥಿತರಿದ್ದು, ಕಾಲೇಜಿನ ಕೆಲ ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಆಡಳಿತ ಮಂಡಳಿ ಗಮನಹರಿಸುತ್ತಿಲ್ಲವೆಂದು ಶಾಸಕರಲ್ಲಿ ದೂರಿದ ಮೇರೆಗೆ, ಅಗತ್ಯ ಕ್ರಮ ಕೈಗೊಳ್ಳುವಂತೆ ಆಡಳಿತ ಮಂಡಳಿಗೆ ಸಲಹೆ ನೀಡಿದ ಶಾಸಕರು, ವಿದ್ಯಾರ್ಥಿಗಳ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಮುಂದೆ ಭಾರಿ ಬೆಲೆ ತೆರೆಬೇಕಾಗುತ್ತದೆ ಎಂದು ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.