15 ಕೋಟಿ ವೆಚ್ಚದಲ್ಲಿ ತಿಪಟೂರು-ಯಡಿಯೂರು ರಸ್ತೆ ಅಭಿವೃಧ್ಧಿಗೆ ಚಾಲನೆ
ತುರುವೇಕೆರೆ: ಎಸ್.ಎಚ್.ಡಿ.ಪಿ ಯೋಜನೆಯಡಿ ಸುಮಾರು 15.88 ಕೋಟಿ ವೆಚ್ಚದಲ್ಲಿ ಯಡಿಯೂರು - ತಿಪಟೂರು ರಸ್ತೆಯ ಅಭಿವೃಧ್ಧಿ ಮಾಡಲು ಶಾಸಕ ಎಂ.ಟಿ.ಕೃಷ್ಣಪ್ಪ ಚಾಲನೆ ನೀಡಿದರು.
ಪಟ್ಟಣದ ಬಾಣಸಂದ್ರ ವೃತ್ತದಲ್ಲಿ ಗುದ್ದಲಿ ಪೂಜೆ ನೆರವೇರಿಸಿದರು. ರಸ್ತೆಯ ಅಭಿವೃಧ್ಧಿ ಕಾಮಗಾರಿಯನ್ನು ಬಿಎಸ್ಆರ್ಇನ್ ಫೋಟಿಕ್ ಇಂಡಿಯಾ ಲಿಮಿಟೆಡ್ ಕಂಪನಿಯು ನಿರ್ವಹಿಸಲಿದೆ. ಪಟ್ಟಣದ ಪರಿಮಿತಿಯಲ್ಲಿ 700 ಮೀಟರ್ ಉದ್ದದ ರಸ್ತೆ ನಿರ್ಮಾಣವಾಗಲಿದ್ದು ರಸ್ತೆ 15 ಮೀಟರ್ ಅಗಲವಿದ್ದು ಎರಡು ಭಾಗಗಳಾಗಿ ವಿಂಗಡಿಸಿ ಕಾಮಗಾರಿ ಮಾಡಲಾಗುವುದು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು. ಪಟ್ಟಣದ ಹೊರಭಾಗದಲ್ಲಿ ರಸ್ತೆ 5 ಮೀಟರ್ ಉದ್ದವಿರಲಿದೆ ಎಂದರು. ಸುಮಾರು 1.85 ಕೋಟಿ ವೆಚ್ಚದಲ್ಲಿ ಅವಶ್ಯವಿರುವ ಕಡೆ ಚರಂಡಿ ನಿರ್ಮಾಣ ಮಾಡಲೂ ಸಹ ಅನುವು ಮಾಡಲಾಗಿದೆ ಎಂದರು. ಕಾಮಗಾರಿಯನ್ನು 11 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದರು.
ಗುದ್ದಲಿ ಪೂಜಾ ವೇಳೆ ತುಮುಲ್ ನಿರ್ದೇಶಕ ಮಹಲಿಂಗಯ್ಯ, ಎಪಿಎಂಸಿ ಅಧ್ಯಕ್ಷ ಮಂಗೀಕುಪ್ಪೆ ಬಸವರಾಜು, ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ದಯಾನಂದ್, ಸಹಾಯಕ ಎಂಜಿನಿಯರ್ ಇಮ್ರಾನ್, ಗುತ್ತಿಗೆದಾರರಾದ ಗೋಪಿಕುಂಡಲ್ ರಾವ್, ಉಪಾಧ್ಯಕ್ಷ ಮುರುಳೀಧರನ್, ಯೋಜನಾ ನಿರ್ದೇಶಕ ರವೀಂದ್ರ, ಸ್ಥಳೀಯ ಮುಖಂಡರಾದ ಪುಟ್ಟಮಾದಿಹಳ್ಳಿ ತಾತಯ್ಯ, ಗುತ್ತಿಗೆದಾರ ತ್ಯಾಗರಾಜ್, ಡಿ.ಆರ್. ರಂಗಸ್ವಾಮಿ ಮೊದಲಾದವರು ಭಾಗವಹಿಸಿದ್ದರು.
ಈಜಲು ಹೋಗಿದ್ದ ವಿದ್ಯಾರ್ಥಿ ಸಾವು
ಕುಣಿಗಲ್: ಸ್ನೆಹಿತರೊಂದಿಗೆ ಈಜಲು ಹೋಗಿದ್ದ ಪಿಯು ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವ ಘಟನೆ ತಾಲೂಕಿನ ಗುನ್ನಾಗರೆ ಗ್ರಾಮದ ಬಳಿ ನಡೆದಿದೆ.
ಮೃತನನ್ನು ಪಟ್ಟಣದ ಖಾಸಗಿ ಪದವಿ ಪೂರ್ವ ಕಾಲೇಜಿನ ದ್ವೀತಿಯ ಪಿಯು ವಿದ್ಯಾರ್ಥಿ ರಘು (16) ಎಂದು ಗುರುತಿಸಲಾಗಿದೆ. ಈತ ಮೂಲತಃ ಕಗ್ಗೆರೆ ಗ್ರಾಮದವನಾಗಿದ್ದು ಸ್ನೇಹಿತರೊಂದಿಗೆ ಸೋಮವಾರ ಮಧ್ಯಾಹ್ನ ಗುನ್ನಾಗರೆ ಗ್ರಾಮದ ಹೊರವಲಯದಲ್ಲಿನ ಕಲ್ಯಾಣಿಯಲ್ಲಿ ಈಜಲು ತೆರಳಿದಾಗ ಘಟನೆ ಸಂಭವಿಸಿದೆ.
ಪ್ರೊ. ಚಿಕ್ಕಹನುಮಯ್ಯ ಅಮಾನತ್ತು ಹಿಂಪಡೆಯಲು ಒತ್ತಾಯ
ತುಮಕೂರು: ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಿನ್ಪಿಪಾಲ್ ಪ್ರೊ. ಚಿಕ್ಕಹನುಮಯ್ಯನವರ ಅಮಾನತ್ತು ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿ ಕಾಲೇಜಿನ ವಿದ್ಯಾರ್ಥಿಗಳು ತುಮಕೂರಿನಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಉನ್ನತ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. 2012-13 ನೇ ಸಾಲಿನ 5 ನೇ ಸೆಮಿಸ್ಟರ್ ಗಣಿತ ಪ್ರಶ್ನೆ ಪತ್ರಿಕೆಯ ಉತ್ತರ ಪತ್ರಿಕೆಗಳು ಕಳೆದು ಹೋಗಿದ್ದು, ಆ ನಂತರದ ದಿನಗಳಲ್ಲಿ ಮರುಪರೀಕ್ಷೆ ನಡೆಸಲಾಗಿದೆ. ಉತ್ತಮ ಫಲಿತಾಂಶವೂ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಹಿತ ಕಾಪಾಡಲು ಶ್ರಮಿಸುತ್ತಿರುವ ಪ್ರಿನ್ಸಿಪಾಲ್ ಪ್ರೊ. ಚಿಕ್ಕಹನುಮಯ್ಯನವರದು ಯಾವುದೇ ತಪ್ಪಿಲ್ಲ. ಆದರೂ ಅವರನ್ನು ಅಮಾನತ್ತು ಮಾಡಿರುವುದು ಸರ್ಕಾರದ ತಪ್ಪು ನಿರ್ಧಾರ. ಈ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಾದ ನಾವು ಯಾರ ವಿರುದ್ಧವೂ ದೂರು ನೀಡಿರುವುದಿಲ್ಲ. ಆದರೆ 4 ತಿಂಗಳ ಹಿಂದೆ ನಡೆದ ಘಟನೆಗೆ ಸಂಬಂಧಿಸಿದಂತೆ ಈಗ ಅಮಾನತ್ತು ಕ್ರಮ ಕೈಗೊಂಡಿರುವುದು ರಾಜಕೀಯ ಒತ್ತಡ ಮತ್ತು ದುರುದ್ದೇಶಪೂರಿತ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಅವರ ಅಮಾನತ್ತು ಆದೇಶವನ್ನು ಕೂಡಲೇ ರದ್ದುಗೊಳಿಸಬೇಕು. ಹಾಗೆಯೇ ಜಿ. ರಾಮಚಂದ್ರಯ್ಯ ಅವರ ಅಮಾನತ್ತು ಆದೇಶವನ್ನು ತೆರವುಗೊಳಿಸಬೇಕು. ಅಲ್ಲಿಯವರೆಗೂ ನಾವು ಕಾಲೇಜಿಗೆ ಹಾಜರಾಗುವುದಿಲ್ಲ. ಅಲ್ಲದೆ ಹೋರಾಟವನ್ನು ಕೈಬಿಡುವುದಿಲ್ಲ ಎಂದು ವಿದ್ಯಾರ್ಥಿ ಮುಖಂಡರಾದ ಎನ್. ಆದರ್ಶ, ಅಭಿಷೇಕ್, ಬಿಂದು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಮನವಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

