ಪಶುಸಂಗೋಪನಾ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಕೂಡಲೆ ಕೆಲಸ: ಸಚಿವ ಟಿ.ಬಿ. ಜಯಚಂದ್ರ
ತಿಪಟೂರು: ಇದೇ ಪ್ರಥಮವಾಗಿ ಪ್ರಾರಂಭವಾಗಿದ್ದ 2 ವರ್ಷಗಳ ಪಶುಸಂಗೋಪನಾ ಡಿಪ್ಲೊಮೊ ಕೋರ್ಸ್ ಪಡೆದಿರುವ ಮೊದಲ ಬ್ಯಾಚ್ನ ಎಲ್ಲಾ 150ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಪಶುಪಾಲನಾ ಇಲಾಖೆಗೆ
ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗೆ ಇದೇ ತಿಂಗಳ ಕೊನೆಯಿಂದ ಚಾಲನೆ ನೀಡಲಾಗುವುದೆಂದು ಪಶುಸಂಗೋಪನೆ ಹಾಗೂ ಕಾನೂನು ಸಂಸದೀಯ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.
ತಾಲೂಕಿನ ಕೊನೇಹಳ್ಳಿಯಲ್ಲಿ ಕರ್ನಾಟಕ ಪಶುವೈದ್ಯಕೀಯ ಬೀದರ್, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಪಶುಸಂಗೋಪನಾ ಹಾಗೂ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಪ್ರಥಮ ಬಾರಿಗೆ ಸರ್ಕಾರದ ಯಾವುದಾದರೂ ಇಲಾಖೆಯಲ್ಲಿ ಕಡಿಮೆ ಅವಧಿಯಲ್ಲಿ ಒಂದು ಸಾವಿರ ನೇಮಕಾತಿಗಳನ್ನು ಮಾಡಿಕೊಂಡಿದ್ದರೆ ಅದು ಪಶುಸಂಗೋಪನಾ ಇಲಾಖೆ ಮಾತ್ರ. ಗೋ ಸಂಪತ್ತನ್ನು ರಕ್ಷಿಸುವ ಸದುದ್ದೇಶದಿಂದ ಕಾಲು ಬಾಯಿ ಜ್ವರದಿಂದ ಮೃತಪಟ್ಟ ಸುಮಾರು 15ಸಾವಿರ ರಾಸುಗಳಿಗೆ ಪರಿಹಾರವಾಗಿ 27ಕೋಟಿ ರು. ನೀಡಬೇಕಾಗಿದ್ದು, ಇದರಲ್ಲಿ 17ಕೋಟಿ ನೀಡಿಯಾಗಿದೆ. ಉಳಿದ ಹಣವನ್ನು ಕೂಡಲೆ ಬಿಡುಗಡೆ ಗೊಳಿಸಲಾಗುವುದು.
ಸ್ವಾವಲಂಬಿಗಳಾಗಿ: ಪಶುಪಾಲನೆಯಲ್ಲಿ ಡಿಪ್ಲೊಮೊ ಪಡೆದ ವಿದ್ಯಾರ್ಥಿಗಳು ಸ್ವಂತವಾಗಿ ಪಶುಪಾಲನೆಯಲ್ಲಿ
ತೊಡಗಿಸಿಕೊಳ್ಳಿ. ಪಶುಸಂಗೋಪನೆಯಲ್ಲಿ ತರಬೇತಿ ಪಡೆದಾಕ್ಷಣ ನೀವು ಸರ್ಕಾರಿ ಉದ್ಯೋಗಕ್ಕೆ ಸೇರಬೇಕೆಂಬ ಹಠ ಬೇಡ. ಇಂದು ಪಶುಪಾಲನೆಯನ್ನು ಲಾಭದಾಯಕ ಉದ್ದಿಮೆಯನ್ನಾಗಿಸಬಹುದು. ಕರ್ನಾಟಕ ಹೈನುಗಾರಿಕೆಯಲ್ಲಿ ಎರಡನೇ ಸ್ಥಾನ ಪಡೆಯಲು ಈ ಉದ್ಯಮ ಲಾಭದಾಯಕವಾಗಿದ್ದರಿಂದ. ಡಿಪ್ಲೊಮೊ ವಿದ್ಯಾರ್ಥಿಗಳು ಸ್ವಂತವಾಗಿ ಈ ನಿಟ್ಟಿನಲ್ಲಿ ಉದ್ಯಮ ಆರಂಭಿಸಲು ಆಸಕ್ತಿ ಹೊಂದಿದ್ದರೆ ಇಲಾಖೆಯಿಂದ ಅಗತ್ಯ ಆರ್ಥಿಕ ಸೌಲಭ್ಯ ನೀಡಲು ನಾನು ಉತ್ಸುಕನಾಗಿದ್ದೇನೆ. ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿ ಎಂದು ತಿಳಿಸಿದರು. ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿವಿಯು ಉತ್ತಮ ಕೆಲಸ ಮಾಡುತ್ತಿದೆ ಎಂದರು ಶ್ಲಾಘಿಸಿದರು.
ರೈತರ ಕೈ ಹಿಡಿದಿದೆ: ಶಾಸಕ ಕೆ.ಷಡಕ್ಷರಿ ಮಾತನಾಡಿ ನಮ್ಮ ಹಿರಿಯರು ಗೋ ಸಂಪತ್ತಿನಿಂದಲೇ ಉತ್ತಮ ಕೃಷಿ ಮಾಡುತ್ತಿದ್ದು, ಒಟ್ಟಾರೆ ಪಶುಸಂಪತ್ತು ಬಹಳ ಹಿಂದಿನಿಂದಲೂ ರೈತರ ಕೈ ಹಿಡಿದಿದೆ.
ಅಮೃತಮಹಲ್ ಕಾವಲ್ನಲ್ಲಿ ತೆಂಗು ಟೆಕ್ನಾಲಜಿ ಪಾರ್ಕ್ ಸ್ಥಾಪಿಸಲು ಮಂತ್ರಿಗಳಾದ ಜಯಚಂದ್ರ ಅವರು 100 ಎಕರೆ ಜಾಗ ನೀಡಿದ್ದು, ಕಲ್ಪತರು ನಾಡು ತೆಂಗು ಬೆಳೆಗಾರರಿಗೆ ಇದು ವರದಾನವಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ 2 ವರ್ಷಗಳ ನೂತನ ಪಶುಪಾಲನಾ ಡಿಪ್ಲೊಮೊ ಪಡೆದ ಎಲ್ಲಾ 43 ವಿದ್ಯಾರ್ಥಿಗಳಿಗೆ ಸಚಿವರು ಪ್ರಮಾಣ ಪತ್ರ ವಿತರಿಸಿದರು.
ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿವಿಯ ಕುಲಪತಿ ಡಾ. ಸಿ. ರೇಣುಕಾಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಬಿ. ಪ್ರಭಾಕರ್ ಹೆಗ್ಗಡೆ, ಡಾ. ಡಿ. ನಾಗೇಶ್. ಟಿ. ಮುಕುಂದವರ್ಮಾ, ಮತ್ತಿಹಳ್ಳಿ ಗ್ರಾ.ಪಂ ಅಧ್ಯಕ್ಷ ಮಹೇಶ್, ತಾ.ಪಂ. ಅಧ್ಯಕ್ಷೆ ಶಿವಗಂಗಮ್ಮ, ಸದಸ್ಯೆ ಗೀತಾ, ಸದಸ್ಯರಾದ ಉಮೇಶ್, ಪರಮೇಶ್, ಮಂಜುಳಾ, ತಾ.ಪಂ. ಮಾಜಿ ಅಧ್ಯಕ್ಷ ವೆಂಕಟೇಶಯ್ಯ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

