ವಿದ್ಯಾದೀಪ ವಿಶೇಷ ಯೋಜನೆ ಜಾರಿ
ಮಧುಗಿರಿ: ವಿದ್ಯುತ್ ಕೊರತೆಯಿಂದಾಗಿ ವಿದ್ಯಾರ್ಥಿಗಳ ಓದಿನ ಮೇಲೆ ದುಷ್ಪರಿಣಾಮ ಬೀರಬಾರದು ಎಂಬ ಸದುದ್ದೇಶದಿಂದ ರೋಟರಿ ಸಂಸ್ಥೆ ವಿದ್ಯಾದೀಪ ಎಂಬ ವಿಶೇಷ ಯೋಜನೆ ಜಾರಿಗೊಳಿಸಿದೆ ಎಂದು ರೋಟರಿ ಅಧ್ಯಕ್ಷ ಎಂ. ವೆಂಕಟರಾಮ್ ತಿಳಿಸಿದರು. ಮಧುಗಿರಿ ರೋಟರಿ ಮತ್ತು ರೋಟರಿ ಬೆಂಗಳೂರು ದಕ್ಷಿಣ ಇವರ ಸಹಭಾಗಿತ್ವದಲ್ಲಿ ಮಧುಗಿರಿ ಸಮೀಪದ ಆರ್ಯಭಾರತಿ ಪ್ರೌಢಶಾಲೆ ಮಕ್ಕಳಿಗೆ ಉಚಿತ ಸೋಲಾರ್ ಲೈಟ್ ವಿತರಿಸಿ ಮಾತನಾಡಿ ತಾಲೂಕಿನ 3 ಶಾಲೆಗಳಿಗೆ ಈ ಯೋಜನೆ ನೀಡಿದ್ದು ಇದರ ಸದ್ಬಳಕೆ ಮಾಡಿಕೊಂಡು ಮಕ್ಕಳು ಉತ್ತಮ ಫಲಿತಾಂಶ ತರಲು ಶ್ರಮಿಸಬೇಕು ಎಂದರು. ರೋಟರಿ ಕೆ.ರಂಗನಾಥ್, ಎಂ.ಶಿವಲಿಂಗಪ್ಪ, ಮಾತನಾಡಿದರು. ಮುಖ್ಯ ಶಿಕ್ಷಕ ಎಲ್. ರಾಮಾಂಜಿನರೆಡ್ಡಿ, ಎಚ್.ಎಸ್.ಶಿವಕುಮಾರ್ ಉಪಸ್ಥಿತರಿದ್ದರು.
ವಿವೇಕ ಮಿನುಗು ತಾರೆಗಳ ಪ್ರಥಮ ಮೇಳ ಉದ್ಘಾಟನೆ
ಗುಬ್ಬಿ: ಶಿಕ್ಷಣದ ಜೊತೆಗೆ ಕನ್ನಡ ಭಾಷೆ ಮತ್ತು ಜನಪದ ಸಾಹಿತ್ಯಕ್ಕೆ ಮಹತ್ವದ ನೀಡಿರುವ ವಿವೇಕಾನಂದ ವಿದ್ಯಾಪೀಠ ಮಕ್ಕಳಲ್ಲಿ ವಿನೂತನ ಕೌಶಲ್ಯ ಮೂಡಿಸುವಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ಖ್ಯಾತ ಸಾಹಿತಿ ಜರಗನಹಳ್ಳಿ ಶಿವಶಂಕರ್ ಶ್ಲಾಘಿಸಿದರು.
ಪಟ್ಟಣದ ವಿವೇಕಾನಂದ ವಿದ್ಯಾಪೀಠ ಶಾಲೆಯಲ್ಲಿ ಏರ್ಪಡಿಸಿದ್ದ ವಿವೇಕ ಮಿನುಗು ತಾರೆಗಳ ಪ್ರಥಮ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಮಕ್ಕಳಿಗೆ ಪಾಠ ಪ್ರವಚನಗಳ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಕಲಿಸಿಕೊಡುವತ್ತ ಶಿಕ್ಷಣ ಸಂಸ್ಥೆಗಳು ಚಿಂತನೆ ನಡೆಸಬೇಕೆಂದು ಕರೆ ನೀಡಿದರು.
ಮಕ್ಕಳಲ್ಲಿ ಇಂದಿನ ಸ್ಪರ್ಧಾತ್ಮಕತೆಗನುಗುಣವಾಗಿ ಗುಣಾತ್ಮಕ ಶಿಕ್ಷಣ ನೀಡುವುದರ ಜೊತೆಗೆ ಕನ್ನಡ ಭಾಷಾ ವ್ಯಾಮೋಹ ಬೆಳೆಸಿ ಅವರಿಗೆ ಮಾತೃಭಾಷಾ ಮಹತ್ವದ ಬಗ್ಗೆ ತಿಳಿಸುವತ್ತ ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದ ಅವರು ಶೈಕ್ಷಣಿಕ ಗುಣಮಟ್ಟ ಉತ್ತಮಗೊಂಡಾಗ ಮಾತ್ರ ರಾಷ್ಟ್ರದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು.
ಎಂ.ಎಸ್. ನರಸಿಂಹಮೂರ್ತಿ ಮಾತನಾಡಿ ಶಿಕ್ಷಣದ ಜೊತೆಗೆ ಮಕ್ಕಳಿಗೆ ಮನರಂಜನೆ ಅಗತ್ಯವಿದ್ದು ಈ ನಿಟ್ಟಿನಲ್ಲಿ ಶಿಕ್ಷಕರು ಪಾಠ ಪ್ರವಚನಗಳ ಜೊತೆಗೆ ನಗುವಿನ ಮೂಲಕ ಶಿಕ್ಷಣ ನೀಡುವತ್ತ ಚಿಂತನೆ ನಡೆಸಬೇಕೆಂದರು.
ಸಮಾರಂಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜೇಶ್ ಗುಬ್ಬಿ, ರಂಗಕಲಾವಿದ ವಾಸು, ಸಿದ್ಧಗಂಗಾ ಮಠದ ಶಿವಣ್ಣ, ವಿವೇಕಾನಂದ ವಿದ್ಯಾ ಪೀಠದ ಕಾರ್ಯದರ್ಶಿ ಜಿ.ಎಸ್.ಅರುಣ್ಕುಮಾರ್, ಕು.ಜಿ.ಎಸ್.ಅಚಲ ಶಾಲೆಯ ಶಿಕ್ಷಕರು ಹಾಗೂ ಪೋಷಕರು ಭಾಗವಹಿಸಿದ್ದರು. ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

