ತುಮಕೂರು

ಮಹಿಳೆಯರು ಮುಂದುವರೆಯ ಬೇಕಾದರೆ ವಿದ್ಯಾಭ್ಯಾಸ ಅಗತ್ಯ: ಶ್ರೀನಿವಾಸಮೂರ್ತಿ

Published On :

ತುಮಕೂರು: ಮಹಿಳೆಯರು ಹೆಚ್ಚಿನ ರೀತಿಯಲ್ಲಿ ಮುಂದುವರೆಯಬೇಕಾದರೆ ವಿದ್ಯಾಭ್ಯಾಸದ ಕಡೆ ಹೆಚ್ಚು-ಹೆಚ್ಚು ಆಸಕ್ತಿ ತಾಳಬೇಕು ಎಂದು ಗುಬ್ಬಿ ರಂಗ ಕಲಾವಿದ ಜಿ.ವಿ. ಶ್ರೀನಿವಾಸಮೂರ್ತಿ (ಗುಬ್ಬಿ ವಾಸು) ಅಭಿಪ್ರಾಯಪಟ್ಟರು. ಅವರು ಕನ್ನಡ ಸಂಸ್ಕೃತಿ ಇಲಾಖ, ಕಣ್ಮುಚ್ಚಾಲೆ ಮಕ್ಕಳ ಗುಂಪು ಹಾಗೂ ಮಡೇನಹಳ್ಳಿ ಶಾರದಾ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಯುವ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜ್ಞಾನಾರ್ಜನೆಯಿಂದ ಮಹಿಳೆಯರು, ಅದರಲ್ಲೂ ಗ್ರಾಮೀಣ ಜನತೆ ಸ್ವಾವಲಂಬಿಗಳಾಗಬಹುದು ಎಂದರು. ಮಡೇನಹಳ್ಳಿ ಶಾರದಾ ಸ್ತ್ರೀಶಕ್ತಿ ಸ್ವಹಾಯ ಸಂಘದ ಪ್ರಧಾನ ಕಾರ್ಯದರ್ಶಿ ಶಿವಮ್ಮ ಅವರನ್ನು ಸನ್ಮಾನಿಸಿ ಮಾತನಾಡಿದ ಸಾಹಿತಿ ಸಿದ್ದರಾಜ ಐವಾರ್, ಭಾರತೀಯ ಮಹಿಳೆಯರು, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಉನ್ನತ ಮಟ್ಟದ ಸಾಧನೆ ಮಾಡುತ್ತಿದ್ದಾರೆ. ಈ ಸಾಧನೆ ನಿರಂತರವಾಗಿ ಮುಂದುವರೆಯಲಿ ಎಂದರು. ಗುಬ್ಬಿ ಆರೋಗ್ಯ ಇಲಾಖೆಯ ಟಿ.ಆರ್. ಶಾರದಮ್ಮ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿ, ಗೆಳೆತನ ಎಂಬುದು ಪವಿತ್ರವಾದ ಸಂಬಂಧ. ಇಲ್ಲಿ ಬಡತನ, ಸಿರಿತನ, ವಿದ್ಯಾವಂತ, ಅವಿದ್ಯಾವಂತ ಇತ್ಯಾದಿ ಭೇದ-ಭಾವ ಇರುವುದಿಲ್ಲ ಎಂದರು. ಇದೇ ಸಂದರ್ಭದಲ್ಲಿ ಮಡೇನಹಳ್ಳಿ ಶ್ರೀ ಶಾರದಾ ಸ್ತ್ರೀಶಕ್ತಿ ಸಂಘದ ಪ್ರಧಾನ ಕಾರ್ಯದರ್ಶಿ ಶಿವಮ್ಮ ಅವರನ್ನು ಸನ್ಮಾನಿಸಲಾಯಿತು. ಬಸವೇಶ್ವರ ಸ್ತ್ರೀಶಕ್ತಿ ಸ್ವ ಸಹಾಯ ಸಂಘ, ಚನ್ನಬಸವೇಶ್ವರ ಗೋಸಲ ಸ್ತ್ರೀಶಕ್ತಿ ಸಂಘ, ಇತರರು ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಗೌರಮ್ಮ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.