ತುಮಕೂರು

ಎಸ್ಎಸ್ಎಲ್ಸಿ ಪೂರ್ವಭಾವಿ ಪರೀಕ್ಷೆಯಿಂದ ವಂಚಿತ ವಿದ್ಯಾರ್ಥಿಗಳು

Published On :

ಕ.ಪ್ರ.ವಾರ್ತೆ ಕುಣಿಗಲ್ ಫೆ.20
ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ನಿರ್ಲಕ್ಷ್ಯದಿಂದ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಎಸ್ಎಸ್ಎಲ್ಸಿ ಪೂರ್ವಭಾವಿ ಪರೀಕ್ಷೆಯಿಂದ ವಂಚಿತರಾಗಿ ಪರದಾಡುವಂತಾಗಿದೆ.
 ಶಾಲೆಯ ಹಲವು ಸಮಸ್ಯೆಗಳನ್ನು ಮೇಲಾಧಿಕಾರಿಗಳು ಗಮನಹರಿಸಿ ಬಗೆಹರಿಸದಿದ್ದಲ್ಲಿ ಶಾಲೆ ಬಿಡಿಸುವುದು ಅನಿವಾರ್ಯವಾಗುತ್ತದೆಂದು ವಿದ್ಯಾರ್ಥಿಗಳ ಪೋಷಕರು ತಿಳಿಸಿದ್ದಾರೆ.
ಎಡೆಯೂರು ಹೋಬಳಿಯ ಮಾಗಡಿ ಪಾಳ್ಯಕ್ರಾಸ್ನಲ್ಲಿ ರಾಹೆ75ರ ಚತುಷ್ಪಥ ರಸ್ತೆಯಲ್ಲಿನ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರ ನಿರ್ಲಕ್ಷ್ಯದಿಂದ ಶಾಲೆಯಲ್ಲಿ ಸಮಸ್ಯೆಗಳ ಆಗರವಾಗುತ್ತಿದೆ ಎಂದು ಆರೋಪಿಸಿರುವ ವಿದ್ಯಾರ್ಥಿಗಳು, ಪೋಷಕರು, 19ರಿಂದ ಜಿಲ್ಲಾಮಟ್ಟದ ಎಸ್ಎಸ್ಎಲ್ಸಿ ಪೂರ್ವಭಾವಿ ಪರೀಕ್ಷೆ ನಡೆಯುತ್ತಿದ್ದು, ಸದರಿ ಶಾಲೆಯ ಮುಖ್ಯೋಪಾಧ್ಯಾಯರು ಕನ್ನಡ ಮತ್ತು ಗಣಿತ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ತಂದುಕೊಡಬೇಕಾಗಿದ್ದು, ಮುಖ್ಯೋಪಾಧ್ಯಾಯರು ಅನ್ಯಕಾರ್ಯನಿಮಿತ್ತ ಶಾಲೆಗೆ ಗೈರಾದ ಕಾರಣ ಎರಡೂ ಪರೀಕ್ಷೆಗಳು ನಡೆದಿಲ್ಲ. ಡಿಡಿಪಿಐ ನಿರ್ದೇಶನದಂತೆ ಈ ಪರೀಕ್ಷೆಗಳು ಹತ್ತನೆ ತರಗತಿ ವಿದ್ಯಾರ್ಥಿಗಳು ಅಂತಿಮ ಪರೀಕ್ಷೆ ಎದುರಿಸಲು ಸಹಾಯವಾಗಿರುವುದರಿಂದ, ಮುಖ್ಯೋಪಾಧ್ಯಾಯರ ನಿರ್ಲಕ್ಷ್ಯದಿಂದ ಈ ಶಾಲೆಯಲ್ಲಿ ಪರೀಕ್ಷೆ ನಡೆಯದಿರುವುದು ಶಾಲೆಯ ಕಾರ್ಯವೈಖರಿಗೆ ಕೈಗನ್ನಡಿಯಾಗಿದೆ.
ಪರದಾಟ: ಶಾಲೆಯ ವಿದ್ಯಾರ್ಥಿಗಳಿಗಾಗಿ 5 ಲಕ್ಷ ರು.ವೆಚ್ಚದಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸಿದ್ದು, ಸ್ವಚ್ಛತೆ ಇಲ್ಲದ ಕಾರಣ ನಿತ್ಯಕರ್ಮ ಪೂರೈಸಲು ಹುಡುಗರು ಸಮೀಪದ ಬಯಲಿಗೆ ತೆರಳಿದರೆ, ಹೆಣ್ಣುಮಕ್ಕಳ ಪಾಡಂತೂ ಹೇಳತೀರದಾಗಿದೆ. ಬಿಸಿಯೂಟ ಯೋಜನೆ ಸಂಪೂರ್ಣ ಕಳಪೆಯಾಗಿದ್ದು ಅಕ್ಕಿಯಲ್ಲಿ ಸಾಕಷ್ಟು ಹುಳುಗಳಿದ್ದು ಗುಣಮಟ್ಟ ಕಾಪಾಡುತ್ತಿಲ್ಲ. ಸಿಬ್ಬಂದಿಯನ್ನು ಪ್ರಶ್ನಿಸಿದರೆ, ಎಚ್ಎಂ ಕೊಡುವ ಅಲ್ಪಸ್ವಲ್ಪದರಲ್ಲೆ ಮಾಡಬೇಕು, ಹೆಚ್ಚಿಗೆ ಕೊಡುವುದಿಲ್ಲವೆಂದು ಅಡುಗೆ ಸಿಬ್ಬಂದಿ ಹೇಳುತ್ತಾರೆಂದು ವಿದ್ಯಾರ್ಥಿಗಳು ಆರೋಪಿಸಿದ್ದರೆ, ವಿದ್ಯಾರ್ಥಿನಿಯರು ಸರ್ಕಾರವು ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ಎನ್ನುತ್ತದೆ. ಆದರೆ ನಮ್ಮದು ಸರ್ಕಾರಿ ಶಾಲೆಯಾದರೂ ಪ್ರತಿಯೊಂದಕ್ಕೂ ಹಣ ಪಾವತಿಸಲೇಬೇಕು. ಉಚಿತ ಪಠ್ಯಪುಸ್ತಕ, ಸಮವಸ್ತರ ವಿತರಣೆ ಸೇರಿದಂತೆ ಪ್ರತಿಯೊಂದಕ್ಕೂ ಹತ್ತರಿಂದ ಐವತ್ತು ರು. ಪಾವತಿಸಬೇಕು.  ಇಲ್ಲವಾದರೆ ಮನಬಂದಂತೆ ನಿಂದಿಸುತ್ತಾರೆಂದು ದೂರಿದರಲ್ಲದೆ ಶೌಚಾಲಯದಲ್ಲಿ ಸ್ವಚ್ಛತೆ ಕಾಪಾಡುವುದಿಲ್ಲ ವಿದ್ಯಾರ್ಥಿಗಳು ಕೇಳಲು ಹೋದರೆ ನೀವೇ ಮಾಡಿಕೊಳ್ಳಿ ಎಂದು ಗದರಿಸುತ್ತಾರೆ. ಹೀಗಾಗಿ ನಾವು ಶಾಲಾವಧಿಯಲ್ಲಿ ನಿತ್ಯಕರ್ಮದ ಯಾವುದೇ ಸಮಸ್ಯೆ ಬಂದರೂ ಪರದಾಡಬೇಕಾಗುತ್ತೆ ಎಂದು ಅಳಲು ತೋಡಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.