ತುಮಕೂರು

ಭೋವಿ ಜನಾಂಗ ಮುಖ್ಯವಾಹಿನಿಗೆ ಬರಲಿ

Published On :

ಕ,ಪ್ರ,ವಾರ್ತೆ, ಮಧುಗಿರಿ, ಫೆ.23
ಭೋವಿ ಜನಾಂಗ  ಸಂಘಟಿತರಾಗುವ ನಿಟ್ಟಿನಲ್ಲಿ  ಸಾಮಾಜಿಕ, ಆರ್ಥಿಕ  ಹಾಗೂ ಶೈಕ್ಷಣಿಕವಾಗಿ ಸಮಾಜದ ಮುಖ್ಯವಾಹಿನಿ ಸೇರಬೇಕು ಎಂದು ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ ಕರೆ ನೀಡಿದರು.
ತಾಲೂಕು ಭೋವಿ ಸಂಘ, ಭೋವಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪಟ್ಟಣದ ಮಾಲೀಮರಿಯಪ್ಪ ರಂಗಮಂದಿರದಲ್ಲಿ  ನಡೆದ ಭೋವಿ ಸಮಾಜದ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪೋಷಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಕಷ್ಟಪಟ್ಟು ಓದಿಸುವ ಮೂಲಕ ಸ್ವಾಭಿಮಾನದ ಬದುಕು ಸಾಗಿಸಲು ಶ್ರಮಿಸಬೇಕು.  ಮಕ್ಕಳಿಗೆ ಆಸ್ತಿ ಬೇಡ, ಮಕ್ಕಳನ್ನು ಶಿಕ್ಷಣವಂತರನ್ನಾಗಿಸುವ ನಿಟ್ಟಿನಲ್ಲಿ ಮಕ್ಕಳನ್ನೇ ಆಸ್ತಿಯನ್ನಾಗಿ ಪರಿವರ್ತಿಸಿ, ರಾಜ್ಯದಲ್ಲಿ 45 ಲಕ್ಷಕ್ಕೂ ಅಧಿಕ ಜನಸಂಖ್ಯೆಯಿದ್ದರೂ ಒಗ್ಗಟ್ಟಾಗುವುದೇ ಕಷ್ಟ. ಸರ್ಕಾರದ ಸವಲತ್ತು ಪಡೆಯಲು ಜನಾಂಗ ಜಾಗೃತರಾಗಿ   ಸಹಕಾರಿ ಸಂಘ ಸ್ಥಾಪಿಸುವ ಮೂಲಕ ಆರ್ಥಿಕವಾಗಿ  ಮುಂದೆ ಬನ್ನಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ವರ್ಗಗಳ  ಕಲ್ಯಾಣಕ್ಕಾಗಿ ಸಾಕಷ್ಟು ಯೋಜನೆ  ರೂಪಿಸಿದ್ದು, ದೊರೆಯುವ ಎಲ್ಲ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ಮಾಜಿ ಸಚಿವ ವೆಂಕಟರಮಣಪ್ಪ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ ನೆರವೇರಿಸಿ ದುಶ್ಚಟ ಬಿಟ್ಟು ಭೂಮಿ ಕಟ್ಟಿಕೊಳ್ಳುವ ಮೂಲಕ  ಬಲಿಷ್ಠರಾಗಿ ಎಂದರು.     
ದುಶ್ಚಟ ಬಿಡಿ: ಶಾಸಕ ಕೆ.ಎನ್.ರಾಜಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಭೋವಿ ಸಮಾಜ ಶ್ರಮ  ಜೀವಿಗಳು. ಕಷ್ಟಪಟ್ಟು ಬೆವರು ಸುರಿಸಿ ದುಡಿದು ಸ್ವಾಭಿಮಾನದ ಬದುಕು ಕಟ್ಟಿಕೊಂಡವರು. ದುಶ್ಚಟ ದೂರ ಮಾಡಿ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ, ತಾಲೂಕು ಕೇಂದ್ರದಲ್ಲಿ ಎಲ್ಲ ಸಮಾಜದವರು ಒಂದು ವಿದ್ಯಾರ್ಥಿ ನಿಲಯ ಅಥವಾ ಸಮುದಾಯ ಭವನ ಕಟ್ಟೋಣ, ಆಸ್ತಿ ಇದ್ದರೆ ನಗರಕ್ಕೆ ಬಂದು ಹೋಗು ಜನರಿಗೆ ಅನುಕೂಲವಾಗಲಿದೆ.ರಾಜಕೀಯ ಅಧಿಕಾರ ಪಡೆಯಲು ಎಲ್ಲರೂ ಜಾಗೃತರಾಗಬೇಕು ಎಂದರು.      
ಚಿತ್ರದುರ್ಗ ಭೋವಿ ಗುರುಪೀಠ ಶ್ರೀ ಇಮ್ಮಡಿ ಸಿದ್ದರಾಮೇಶ್ವರಸ್ವಾಮಿ  ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ  ಶಿಕ್ಷಣ ಕೊಟ್ಟರೆ ಸಂಸ್ಕಾರ, ಸಂಘಟನೆ ಜೊತೆಗೆ  ಜ್ಞಾನ ಸಂಪಾದನೆ ತಾನಾಗೆ ಒಲಿಯುತ್ತದೆ ಎಂದರು.          
ನೌಕರರ ಸಂಘದ ಅಧ್ಯಕ್ಷ ರಾಮಚಂದ್ರಪ್ಪ ಪ್ರಾಸ್ತಾವಿಕ ಭಾಷಣ ಮಾಡಿ ಕತ್ತಲಲ್ಲಿ ಜೀವಿಸುವ ಸಮಾಜಕ್ಕೆ  ಶಾಸಕ ಕೆ.ಎನ್.ರಾಜಣ್ಣ ಬೆಳಕು ನೀಡಿದ್ದಾರೆ ಎಂದು ಕೊಂಡಾಡಿದರು.
ತಾ.ಅಧ್ಯಕ್ಷ ನಾಗರಾಜು, ಪುರಸಭೆ ಅಧ್ಯಕ್ಷ ಎನ್.ಗಂಗಣ್ಣ, ಸದಸ್ಯ ಎಂ.ಎಸ್. ಚಂದ್ರಶೇಖರ್, ಎಂ.ವಿ. ಗೋವಿಂದರಾಜು, ಕೆ.ಪ್ರಕಾಶ್, ತಾ.ಪಂ.ಉಪಾಧ್ಯಕ್ಷೆ, ಎಂ.ಜಿ.ಶ್ರೀನಿವಾಸಮೂರ್ತಿ, ಪಿಸಿಕೆ ರೆಡ್ಡಿ, ತಾ.ಪಂ.ಸದಸ್ಯೆ ಯಶೋಧ ರಾಜಣ್ಣ, ಆನಂದ್, ಪುಟ್ಟಮ್ಮ, ತಹಸೀಲ್ದಾರ್ ರಮೇಶ್, ಎಂಜಿನಿಯರ್ ರಾಧಕೃಷ್ಣ, ಸುಬ್ಬರಾಯಪ್ಪ, ಬಂದ್ರೇಹಳ್ಳಿ ಮಂಜು, ರೋಟರಿ ಮಾಜಿ ಅಧ್ಯಕ್ಷ ಹನುಮಪ್ಪ, ನೌಕರರ ಸಂಘದ ಅಧ್ಯಕ್ಷ
ಎನ್. ಮಹಾಲಿಂಗೇಶ್, ಭೋವಿ ಸಮಾಜದ ಬಂಧುಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.