ಮಾಧ್ಯಮಗಳು ಜಾಗೃತಿ ಮೂಡಿಸಬೇಕು
ಚಿಕ್ಕನಾಯಕನಹಳ್ಳಿ: ಮಾಧ್ಯಮಗಳು ಜನರಲ್ಲಿನ ಮಾಸ್ ಮತ್ತು ಕ್ಲಾಸ್ಗಳ ನಡುವೆ ಜನರಲ್ಲಿ ಜಾಗೃತಿಯನ್ನು ಮೂಡಿಸುವಂತಹ ಜವಾಬ್ದಾರಿಯನ್ನು ಹೊರಬೇಕಾಗಿದೆ ಎಂದು ಸುವರ್ಣ ನ್ಯೂಸ್ ಸಹಸಂಪಾದಕ ಲಕ್ಷ್ಮಣ ಹೂಗಾರ್ ಹೇಳಿದರು.
ಚಿಕ್ಕನಾಯಕನಹಳ್ಳಿಯ ಕನ್ನಡ ಸಂಘದ ಲಕ್ಷ್ಮಣಪ್ಪ ವೇದಿಕೆಯಲ್ಲಿ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಕಾಲೀನ ಕರ್ನಾಟಕ ಮಾಧ್ಯಮಗಳ ಪ್ರತಿಬಿಂಬ ಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಅಭಿರುಚಿಗೆ ತಕ್ಕಂತಹ ವಿಷಯಗಳನ್ನು ಕೊಡಲು ಹೋದರೆ ವಿಚಾರವಂತರ ವಿಮರ್ಶೆಗೆ ಒಳಗಾಗಬೇಕು. ವಿಚಾರವಂತರ ವಿಮರ್ಶೆಗೆ ನಿಲುಕುವಂತಹ ವಿಷಯಗಳನ್ನು ಕೊಟ್ಟರೆ ಹೆಚ್ಚು ಜನರನ್ನು ಆಕರ್ಷಿಸುವಲ್ಲಿ ಟಿ.ಆರ್.ಪಿ. ಸೋಲುತ್ತಿದೆ, ಟಿ.ಆರ್.ಪಿ.ಯನ್ನು ಉಳಿಸಿಕೊಂಡು ಜನರಲ್ಲಿ ವಿಚಾರವಂತಿಕೆಯನ್ನು ಬೆಳೆಸುವುದು ಮಾಧ್ಯಮದ ಹೊಣೆಯಾಗಿದೆ ಎಂದರು.
ಸಾಮಾಜಿಕ ಮತ್ತು ರಾಜಕೀಯವಾಗಿ ಇಂದು ಅಣ್ಣಹಜಾರೆ, ಕೇಜ್ರಿವಾಲ್ರಂತಹ ಮುಖಂಡರು ದೇಶಾದ್ಯಂತ ಪ್ರಚಲಿತವಿರುವುದು ಮಾಧ್ಯಮಗಳಿಂದ, ಇವರು ಕೆಟ್ಟವರು, ಉತ್ತಮರು ಎಂದು ಮಾಧ್ಯಮ ತಿಳಿಸಿದರೆ ಅವರನ್ನು ಪ್ರತಿನಿತ್ಯ ಜನರು ಗುರುತಿಸುತ್ತಲೇ ಇರುತ್ತಾರೆ ಎಂದರು.
ಕನ್ನಡಪ್ರಭ ಪತ್ರಿಕೆ ಪ್ರಧಾನ ವರದಿಗಾರ ಉಗಮ ಶ್ರೀನಿವಾಸ್ ಮಾತನಾಡಿ ಮಾಧ್ಯಮಗಳು ನಾಡಿನ ಸಮಸ್ಯೆಗಳನ್ನು ಹುಡುಕಿ ವರದಿ ಮಾಡಬೇಕು. ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಎಚ್ಚೆತ್ತು ವರದಿ ನೀಡಬೇಕು. ಜಿಲ್ಲೆಯ ಪಾವಗಡದಲ್ಲಿ ನಡೆಯುತ್ತಿರುವ ವಿಧವೆಯರ ಹರಾಜು, ದುಡ್ಡಿಗಾಗಿ ಮಕ್ಕಳನ್ನು ಹಡೆಯುತ್ತಿರುವ ಇಂತಹ ಹಲವಾರು ಸಮಸ್ಯೆಗಳ ಬಗ್ಗೆ ವರದಿ ನೀಡಬೇಕಿದೆ ಎಂದರು. ಸಮ್ಮೇಳನಾಧ್ಯಕ್ಷ ನಟರಾಜ್ ಹುಳಿಯಾರ್, ಸುವರ್ಣ ನ್ಯೂಸ್ನ ಭಾನುಮತಿ ಬಿ.ಸಿ, ಕೆ.ಕರಿಸ್ವಾಮಿ, ಡಾ.ರಘುಪತಿ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

