ತುಮಕೂರು

ಎನ್ಎಸ್ಎಸ್ ವಿದ್ಯಾರ್ಥಿಗಳಿಂದ ರೈತ ಜನಾಂಗಕ್ಕೆ ಗೌರವ ಸಮರ್ಪಣೆ

Published On :

ತಿಪಟೂರು: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ರೈತ ನೇತಾರ ಪ್ರೊ.ಎಂ.ಡಿ. ನಂಜುಂಡಸ್ವಾಮಿ ವೇದಿಕೆಯಲ್ಲಿ ಶಿಬಿರಾರ್ಥಿಗಳು ಗ್ರಾಮದ ಹಿರಿಯ ರೈತರಾದ ಮಠದ ಮಹಲಿಂಗಪ್ಪನವರ ಪಾದ ಪೂಜೆ ನಡೆಸಿ ದೇಶದ ರೈತ ಜನಾಂಗಕ್ಕೆ ಗೌರವ ಸಮರ್ಪಣೆ ಮಾಡಿ ಧನ್ಯತೆ ಮೆರೆದು, ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.
 ಮಾನವ ಜನಾಂಗ ನಾಗರಿಕತೆಯ ಅಂಚಿನಲ್ಲಿ ನೆಲೆನಿಂತ ದಿನದಿಂದಲೂ ರೈತ ನೇಗಿಲನ್ನ ನೊಗದಿಂದ ಕಳಚದೆ ಇಡೀ ಮಾನವ ಕುಲಕ್ಕೆ ಅನ್ನವನ್ನ ನೀಡುತ್ತಿದ್ದಾರೆ. ಇಂತಹ ರೈತ ಹೊಲ, ಗದ್ದೆ, ತೋಟದ ಹಾದಿಯಲ್ಲಿ ಸವೆಸಿದ ಪಾದಗಳನ್ನು ನೀರೆರೆದು ತೊಳೆದು ಹೂಗಳನ್ನು ಅರ್ಪಿಸಿ ರೈತನೇ ದೇವರು ಎಂಬುದನ್ನ ಸಾರಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಯದೇವಪ್ಪ ಮಾತನಾಡಿ ಗ್ರಾಮೀಣ ಯುವ ವಿದ್ಯಾರ್ಥಿಗಳಲ್ಲಿನ ಕೃಷಿ ಮತ್ತು ರೈತನ ಮೇಲಿನ ಭಾವನೆಗಳು ಅವರು ಕೃಷಿಗೆ ನೀಡುತ್ತಿರುವ ಗೌರವವನ್ನು ಎತ್ತಿ ತೋರಿಸಿದ್ದು, ರೈತರ ಉದ್ಧಾರಕ್ಕಾಗಿ ದುಡಿಯುವ ರೈತ ಸಂಘಟನೆಗಳ ಕೂಗಿಗೆ ಬೆಂಬಲ ನೀಡುವಂತಿದೆ ಎಂದರು.  ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿಬಿರಾಧಿಕಾರಿ ಡಾ.ಡಿ.ಆರ್. ಹೊನ್ನಾಂಜಿನಯ್ಯ ಇಂದಿನ ರೈತ ಸಮುದಾಯಕ್ಕೆ ವಿದ್ಯಾರ್ಥಿಗಳು ನೀಡಿರುವ ಗೌರವ ಶ್ಲಾಘನೀಯ. ವಿದ್ಯಾರ್ಥಿಗಳಿಗೆ ಇಂದಿನ ಕೃಷಿಕರ ಬಗ್ಗೆ ಕಾಳಜಿ ಇರುವುದು  ಸ್ಪಷ್ಟವಾಗಿದೆ ಎಂದರು.  ವಿದ್ಯಾರ್ಥಿಗಳ ಈ ಕಾರ್ಯವನ್ನು ಕಾಲೇಜು ಪೋಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಬಿಲ್ಲೇಮನೆ, ಸಂಸ್ಕೃತ ಪಾಠಶಾಲೆಯ ಮುಖ್ಯಸ್ಥರಾದ ಡಿ.ಎಚ್.ಗಂಗಣ್ಣ, ಶಿಬಿರಾಧಿಕಾರಿಗಳಾದ ನಾಗರಾಜು, ಕೆ.ವಿ. ಜ್ಯೋತಿಕಿರಣ್, ಎಸ್. ನೀಲಕಂಠಸ್ವಾಮಿ, ಸಹ ಶಿಬಿರಾಧಿಕಾರಿಗಳಾದ ಡಾ.ಎಲ್.ಎಂ. ವೆಂಕಟೇಶ್,
ಪಿ. ವಾತ್ಸಲ್ಯ ಶ್ಲಾಘಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.