ಪ್ರಶಸ್ತಿ ಬಂದರೆ ಸೆನ್ಸ್, ಬಾರದಿದ್ದರೆ ನಾನ್ಸೆನ್ಸ್...
ತುಮಕೂರು: ತಮಗೆ ಪ್ರಶಸ್ತಿ ಬಂದರೆ ಸೆನ್ಸ್, ಬಾರದೇ ಇದ್ದರೆ ಪ್ರಶಸ್ತಿಯೇ ನಾನ್ಸೆನ್ಸ್ ಎಂಬ ಮನೋಭಾವವನ್ನು ಲೇಖಕರು ಬಿಟ್ಟು ಉತ್ತಮ ಸಾಹಿತ್ಯ ರಚನೆಯತ್ತ ಗಮನಹರಿಸಬೇಕಿದೆ ಎಂದು ಹಿರಿಯ ಲೇಖಕಿ ಅನ್ನಪೂರ್ಣ ವೆಂಕಟನಂಜಪ್ಪ ಲೇಖಕರಿಗೆ ಕಿವಿಮಾತು ಹೇಳಿದರು.
ನಗರದ ಗೋಮಿನಿ ಮತ್ತು ಸಮೃದ್ಧ ಪ್ರಕಾಶನದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಐದು ಪುಸ್ತಕಗಳ ಲೋಕಾರ್ಪಣೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಪುಸ್ತಕ ಪ್ರಕಾಶನವೆಂಬುದು ಮಾಫಿಯಾವಾಗಿರುವ ಕಾಲಘಟ್ಟದಲ್ಲಿ ಈ ಎರಡೂ ಪ್ರಕಾಶನಗಳು ಉತ್ತಮ ಕೃತಿಗಳನ್ನು ಮಾತ್ರ ಪ್ರಕಟಿಸುತ್ತಿರುವುದು ಪ್ರಶಂಸನೀಯವೆಂದು ಹೇಳಿದರು.
ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದ ಗಾಂಧಿಚಿಂತಕರಾದ ಎಲ್. ನರಸಿಂಹಯ್ಯ ತೊಂಡೋಟಿಯವರು ಎಲ್ಲಾ ಲೇಖಕರನ್ನು ಅಭಿನಂದಿಸಿದರು. ಮುಖ್ಯ ಅತಿಥಿಗಳಾಗಿದ್ದ ಪತ್ರಕರ್ತ ಎಸ್. ನಾಗಣ್ಣನವರು ಇಲ್ಲಿ ಪ್ರಕಟಗೊಂಡಿರುವ ಎಲ್ಲಾ ಲೇಖಕರು ಪ್ರತಿಭಾನ್ವಿತರು ಎಂಬುದು ಪುಸ್ತಕಗಳನ್ನು ಕುರಿತು ಮಾತನಾಡಿದ ಉಪನ್ಯಾಸಕರ ಮತ್ತು ವಿಮರ್ಶಕರ ಅಭಿಪ್ರಾಯದಿಂದಲೇ ಸಾಬೀತಾಗುತ್ತದೆ ಎಂದು ತಿಳಿಸಿದರು.
ವಿಶೇಷವಾಗಿ ಹದಿನೆಂಟನೇ ವಯಸ್ಸಿನಲ್ಲಿಯೇ ಕ್ಯಾನ್ಸರ್ ಗೆದ್ದು ತನ್ನ ಯಶೋಗಾಥೆಯನ್ನು ಪುಸ್ತಕ ರೂಪದಲ್ಲಿ ಓದುಗರ ಮುಂದಿಟ್ಟಿರುವ ಶಿವಮೊಗ್ಗದ ಶ್ರುತಿ ಬಿ.ಎಸ್. ಅವರನ್ನು ಎಲ್ಲರೂ ಅಭಿನಂದಿಸಿದರು.
ಡಾ. ಹಾ. ಉಮೇಶ ಸೊರಬ, ಡಾ. ನವೀನ್ ಹಳೇಮನೆ, ಡಾ. ರವಿಕುಮಾರ್ ನೀಹ ಮತ್ತು ಗುಬ್ಬಚ್ಚಿ ಸತೀಶ್ ಪುಸ್ತಕಗಳನ್ನು ಕುರಿತು ಮಾತನಾಡಿದರು. ಗೋಮಿನಿ ಪ್ರಕಾಶನದ ಜಿ.ಸಿ.ಚಂಪರಾಣಿ ಮತ್ತು ಸಮೃದ್ಧ ಪ್ರಕಾಶನದ ಸವಿತಾ ರಂಗಸ್ವಾಮಿ ಉಪಸ್ಥಿತರಿದ್ದರು.
ಪುಸ್ತಕಗಳ ಲೇಖಕರಾದ ಡಾ. ಕೆ.ಬಿ.ರಂಗಸ್ವಾಮಿ, ಶ್ರುತಿ ಬಿ.ಎಸ್., ಕಮಲಾ ಬಡ್ಡೀಹಳ್ಳಿ, ಬ್ಯಾಡನೂರ ನಾಗಭೂಷಣ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಜಾದೂಗಾರರೆಂದೇ ಹೆಸರುವಾಸಿಯಾಗಿರುವ ಟಿ.ಬಿ. ಮೋಹನ್ ಕುಮಾರ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

