ಗ್ರಾಮೀಣ ರಂಗಭೂಮಿ ಓದು ಬರಹ ಬಾರದ ಅನಕ್ಷರಸ್ಥರ ವಿಶ್ವವಿದ್ಯಾಲಯ
ಮಧುಗಿರಿ: ಗ್ರಾಮೀಣ ರಂಗಭೂಮಿ ಓದು ಬರಹ ಬಾರದ ಅನಕ್ಷರಸ್ಥರ ವಿಶ್ವವಿದ್ಯಾಲಯ ಎಂದು ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಅಬಿಪ್ರಾಯಪಟ್ಟರು.
ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ಗುಟ್ಟೆಯಲ್ಲಿ ಶ್ರೀ ಆಂನೇಯಸ್ವಾಮಿ ಬಯಲು ರಂಗ ಮಂದಿರದಲ್ಲಿ ಅಭಿನಯ ರಂಗ ಕೇಂದ್ರ ಕರ್ನಾಟಕ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಆಶ್ರಯದಲ್ಲಿ 5 ದಿನಗಳ ಕಾಲ ನಡೆದ ಜಾನಪದ ಮತ್ತು ಪೌರಾಣಿಕ ಗ್ರಾಮೀಣ ನಾಟಕೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ನಾಟಕ ರಂಗ ಬಹುಮುಖ ಸೃಜನ ಶೀಲ ಪ್ರತಿಭೆ- ಪ್ರಯೋಗಗಳ ಸಾಧನೆ ಬೋಧನೆಗಳ ವಿಶಿಷ್ಟ ಲೋಕ ಜೀವನದ ಸರಳತೆ, ಸಂಕೀರ್ಣತೆಗಳು, ನೋವು, ನಲಿವು, ಕಲಾತ್ಮಕವಾಗಿ ಬಿಚ್ಚಿ ಕೊಳ್ಳುವ ಸ್ಥಳವೆಂದರೆ ರಂಗಭೂಮಿ ಇದರಲ್ಲಿ ಸಾಹಿತ್ಯ, ನೃತ್ಯ, ಅಭಿನಯ, ಸಂಗೀತ ಎಲ್ಲವೂ ಅಡಗಿದೆ. ರಂಗಭೂಮಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಬದುಕಿಗೆ ಸ್ಪಂದಿಸಿದಾಗ ಕ್ರಿಯಾಶೀಲತೆ ಪಡೆದುಕೊಳ್ಳುತ್ತದೆ. ಒಟ್ಟಿನಲ್ಲಿ ರಂಗಭೂಮಿ ಜೀವಂತವಾಗಿರಿಸುವ ಮಹತ್ತರ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ತಾಲೂಕು ಕಾರ್ಯ ನಿರತ ಪತ್ರರ್ಕರ ಸಂಘದ ಅಧ್ಯಕ್ಷ ಚಂದ್ರಕಾಂತ್ 5 ದಿನ ಅಭಿನಯ ರಂಗ ಕೇಂದ್ರದಿಂದ ನಡೆದ ನಾಟಕೋತ್ಸವ ಜನರ ಮನಸ್ಸಿಗೆ ರಸದೌತಣ ನೀಡಿದೆ ಎಂದರು.
ಪತ್ರಕರ್ತ ಜಿ.ನಾರಾಯಣರಾಜು ಬಡವ ಬಲ್ಲಿದನೆಂಬ ಭೇದವನ್ನೆಣಿಸದೆ ಸರ್ವರನ್ನು ಸಮಾನಾಗಿ ಕಂಡು ಪ್ರೀತಿ, ವಿಶ್ವಾಸ ಬಿತ್ತರಿಸುವ ತಾಣವೇ ರಂಗಭೂಮಿ ಎಂದರು.
ಅಭಿನಯ ರಂಗ ಕೇಂದ್ರದ ಗೌರವಾಧ್ಯಕ್ಷ ವೈ. ಸೋಮಶೇಖರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಂಗಭೂಮಿ ಪ್ರೇಕ್ಷಕರನ್ನು ಬಿಟ್ಟು ಬೆಳೆಯಲಾರದು. ನಾಟಕ ನೋಡಿ ಆನಂದಿಸುವ ಪ್ರೇಕ್ಷಕ ವರ್ಗವೆ ನಾಟಕದ ಉಸಿರು ಮತ್ತು ದೇವರು, ಜಾಗತೀಕರಣ ಛಾಯೆ, ನೆರಳು ದೇಶಿ ಸಂಸ್ಕೃತಿ ಆವರಿಸಿರುವುದರಿಂದ ಎಲ್ಲರ ಅಭಿರುಚಿ ಬದಲಾಗುತ್ತಿವೆ. ಹಾಗಾಗಿ ನಶಿಸಿ ಹೋಗುತ್ತಿರುವ ಜೀವನ ಮೌಲ್ಯಗಳು, ಮಾನವೀಯ ಸಂಬಂಧಗಳು, ಪ್ರೀತಿ, ವಿಶ್ವಾಸ, ಶಾಂತಿ, ಸಹಬಾಳ್ವೆ ರಕ್ಷಿಸಿ ಕೊಳ್ಳಬೇಕಾದರೆ ರಂಗಭೂಮಿ ಅತ್ಯುತ್ತಮ ವೇದಿಕೆ ಗುಟ್ಟೆ ಗ್ರಾಮದ ಜನತೆ ನಮ್ಮ ಅಭಿನಯ ರಂಗ ಕೇಂದ್ರ 5 ದಿನ ನಡೆಸಿರುವ ಎಲ್ಲ ನಾಟಕಗಳನ್ನು ನೋಡಿ ಪ್ರೋತ್ಸಾಹಿಸಿದ್ದಕ್ಕಾಗಿ ಗ್ರಾಮದ ಜನತೆಗೆ ಅಭಿನಂದನೆ ಸಲ್ಲಿಸಿದರು.
ಪ್ರಧಾನ ಕಾರ್ಯದರ್ಶಿ ಕೆ.ಪಿ. ಅಶ್ವತ್ಥನಾರಾಯಣ್, ಗುಟ್ಟೆ ಮೂರ್ತಿ, ಚಿಕ್ಕಮನುಮಂತಪ್ಪ, ರಾಮಹನುಮಯ್ಯ ಮಾತನಾಡಿದರು. ಇದೇ ಸಂದರ್ಭದಲ್ಲಿ ಗುಟ್ಟೆ ಗ್ರಾಮದ ಜನತೆ ಅಭಿನಯ ರಂಗ ಕೇಂದ್ರದ ರೂವಾರಿ ಕೆ.ಪಿ. ಅಶ್ವತ್ಥನಾರಾಯಣ ದಂಪತಿಗಳನ್ನು ಸನ್ಮಾನಿಸಿದರು. ಮೂರ್ತಿ ಸ್ವಾಗತಿಸಿ ವಂದಿಸಿದರು. ನಂತರ ಮಕ್ಕಳೇ ಅಭಿನಯಿಸಿರುವ ಕುರುಕ್ಷೇತ್ರ ನಾಟಕ ನಡೆದು ಜನ ಮೆಚ್ಚುಗೆಗೆ ಪಾತ್ರವಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

