ಇಂದು ಮುಡಿಸೇವೆ
ತಿಪಟೂರು: ತಾಲೂಕು ಆಲೂರಿನ ಬೀರಲಿಂಗೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಫೆ. 28 ರಂದು ಬೆಳಗ್ಗೆ 11.30 ಕ್ಕೆ ಶಿವರಾತ್ರಿ ಮೀಸಲು ಅಕ್ಕಿ ಅಳೆಯುವ, ಹರಕೆ ಸಲ್ಲಿಕೆ, ಮುಡಿಸೇವೆ ಆಯೋಜಿಸಲಾಗಿದೆ. ಅಂದು ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಈಶ್ವರಾನಂದ ಪುರಿ ಸ್ವಾಮೀಜಿ, ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ನೆರವೇರಿಸುವರು. ಅಧ್ಯಕ್ಷತೆಯನ್ನು ಬಾಲವರ್ಧನ್ ವಹಿಸಲಿದ್ದಾರೆ. ಸಂಸದ ಜಿ.ಎಸ್. ಬಸವರಾಜು, ಡಾ. ಎಂ.ಆರ್. ಹುಲಿನಾಯ್ಕರ್, ಕೆ. ಷಡಕ್ಷರಿ, ಗಾಯಿತ್ರಿ ಶಾಂತೇಗೌಡ, ಬಿ. ಸಿಂದು, ಬಿ.ಸಿ. ನಾಗೇಶ್, ಬಿ. ನಂಜಾಮರಿ, ಎಸ್. ನಾಗಣ್ಣ, ಆಗಮಿಸಲಿದ್ದಾರೆ.
ಅಹೋ ರಾತ್ರಿ ಧರಣಿ ಮುಕ್ತಾಯ
ತುರುವೇಕೆರೆ: ಕಳೆದ ಎರಡು ದಿನಗಳಿಂದ ಹೇಮಾವತಿ ನಾಲಾ ಕಚೇರಿ ಮುಂಭಾಗ ಟಾಸ್ಕ್ ವರ್ಕ್ಸ್ ದಿನಗೂಲಿ ನೌಕರರು ನಡೆಸುತ್ತಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ, ಅಧಿಕಾರಿಗಳು ನೀಡಿದ ಭರವಸೆಯ ಮೇರೆಗೆ ಮುಕ್ತಾಯ ಕಂಡಿದೆ.
ದಿನಗೂಲಿ ನೌಕರರು ತಮ್ಮನ್ನು ಕಾಯಂಗೊಳಿಸಬೇಕು ಹಾಗೂ ವರ್ಷ ಪೂರ್ತಿ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂಬ ಒತ್ತಾಯ ಸರ್ಕಾರದಿಂದ ಮಾತ್ರ ಬಗೆಹರಿಸಲು ಸಾಧ್ಯ. ಆದರೆ ಸ್ಥಳೀಯವಾಗಿ ಬಗೆಹರಿಸಬಹುದಾದ ಸಮಸ್ಯೆಗಳನ್ನು ಮುಂಬರುವ ಖಚಿತಪಡಿಸಿದ ದಿನಾಂಕದಂದು ಸಂಬಂಧಿಸಿದ ಅಧಿಕಾರಿಗಳು ಹಾಗೂ ಎಂಜಿನಿಯರ್ರ ಸಮ್ಮುಖ ಬಗೆಹರಿಸುವ ಭರವಸೆಯನ್ನು ಹೇಮಾವತಿ ನಾಲಾ ಸೂಪರಿಂಟೆಂಡೆಂಟ್ ಎಂಜಿನಿಯರ್ ರಾಜೇಗೌಡ ಮುಷ್ಕರ ನಿರತರಿಗೆ ನೀಡಿದರು.
ಹಲವಾರು ದಿನಗೂಲಿ ನೌಕರರಿಗೆ ದಿನಗೂಲಿ ನೀಡದಿರುವ ಬಗ್ಗೆ ಚರ್ಚಿಸಿ ಸಂಬಂಧಪಟ್ಟ ಎಂಜಿನಿಯರ್ ಅವರನ್ನು ಸ್ಥಳಕ್ಕೆ ಕರೆಸಿ ದಿನಗೂಲಿ ನೌಕರರಿಗೆ ಸೂಕ್ತ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರು. ಸ್ಥಳಕ್ಕೆ ತಹಸೀಲ್ದಾರ್ ನಂಜಪ್ಪ ಆಗಮಿಸಿದ್ದರು. ಮುಂಬರುವ ನಿಗದಿತ ದಿನದಂದು ತಾವೂ ಸಭೆಗೆ ಆಗಮಿಸಿ ದಿನಗೂಲಿ ನೌಕರರ ಸಮಸ್ಯೆಯನ್ನು ಪರಿಹರಿಸುವುದಾಗಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

