ಮಾನಸಿಕ, ಬೌದ್ಧಿಕ ಚಿಂತನೆಗಳ ಬೆಳವಣಿಗೆಗೆ ಶಿಬಿರಗಳು ಸಹಕಾರಿ
ತಿಪಟೂರು: ಎನ್ಎಸ್ಎಸ್ ಶಿಬಿರಗಳು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದು ಹೆಚ್ಚು ಮಹತ್ವ ಪಡೆದಿದೆ ಎಂದು ರಂಗಾಪುರದ ಸಂಸ್ಕೃತ ಪಾಠಶಾಲೆಯ ಮುಖ್ಯಸ್ಥರಾದ ಡಿ.ಎಂ.ಗಂಗಣ್ಣನವರು ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ತಾಲ್ಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಎನ್.ಎಸ್.ಎಸ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ಮಾನಸಿಕ ಹಾಗೂ ಬೌದ್ಧಿಕ ಚಿಂತನೆಗಳ ಬೆಳವಣಿಗೆಗೆ ಶಿಬಿರಗಳು ಸಹಕಾರಿ. ಜೀವನದಲ್ಲಿ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕಾದರೆ ಧಾರ್ಮಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಪಂಚೇದ್ರಿಯಗಳನ್ನು ಮನರಂಜನೆಗೆ ಬಳಸಿಕೊಳ್ಳದೆ ಮಾನಸಿಕ ಪ್ರಬುದ್ಧತೆ ಹಾಗೂ ಭವಿಷ್ಯದ ಸುರಕ್ಷತೆಗಾಗಿ ಬಳಸಿಕೊಳ್ಳಬೇಕೆಂದರು.
ಸುಕ್ಷೇತ್ರದ ಆಡಳಿತಾಧಿಕಾರಿ ಭದ್ರಪ್ಪ ಮಾತನಾಡಿ ಕ್ಷೇತ್ರದ ಧಾರ್ಮಿಕ ಪರಿಸರವು ಶಿಬಿರಾರ್ಥಿಗಳಲ್ಲಿ ನೈತಿಕ ಪ್ರಜ್ಞೆ ಹಾಗೂ ಧಾರ್ಮಿಕ ಶ್ರದ್ಧೆ ಮೂಡಿಸಿರುವುದರಿಂದ ಶಿಬಿರ ಸಾರ್ಥಕವಾಗಿದೆ ಎಂದರು. ಕಾಲೇಜಿನ ಪೋಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಬಿಲ್ಲೇಮನೆ ಶಿಬಿರಗಳಲ್ಲಿ ಕಲಿತ ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಗುರುಕುಲಾನಂದಾಶ್ರಮದ ಕಾರ್ಯನಿರ್ವಾಹಕರಾದ ಬಿ.ಎಂ. ಹರಿಪ್ರಸಾದ್ ವಿದ್ಯಾರ್ಥಿಗಳು ವಿವೇಕಾನಂದರ ಚಿಂತನಗೆಳನ್ನು ಅಳವಡಿಸಿಕೊಳ್ಳಲು ಮನವಿ ಮಾಡಿದರು.
ಎಸ್.ಪಿ.ಎಸ್. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಆರ್. ಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು. ಚಂದ್ರಶೇಖರ್ ಬಿಲ್ಲೆಮನೆ, ಗುರುಪ್ರಸಾದ್, ಟಿ.ಪಿ. ಗಂಗಾಧರ್ ಅವರನ್ನು ಸನ್ಮಾನಿಸಲಾಯಿತು.
ಶಿಬಿರಾಧಿಕಾರಿ ಡಾ.ಹೊನ್ನಾಂಜಿನಯ್ಯ, ಕೆ.ವಿ.ನಾಗರಾಜು, ಜ್ಯೋತಿಕಿರಣ್, ನೀಲಕಂಠಸ್ವಾಮಿ, ಹಳೆ ವಿದ್ಯಾರ್ಥಿಯಾದ ತೀರ್ಥಕುಮಾರ್, ಸಹಶಿಬಿರಾಧಿಕಾರಿಗಳಾದ ಡಾ.ಎಲ್.ಎಂ. ವೆಂಕಟೇಶ್, ಮಹೇಶ್, ವಾತ್ಸಲ್ಯ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

