ಶ್ರಮಕ್ಕೆ ಯಾವುದೇ ಪರ್ಯಾಯವಿಲ್ಲ
ತುಮಕೂರು: ಶ್ರಮಕ್ಕೆ ಯಾವುದೇ ಪರ್ಯಾಯವಿಲ್ಲ ಎಂದು ಹುಲಿಯೂರು ದುರ್ಗ ಸಪಪೂ ಕಾಲೇಜು ಪ್ರಿನ್ಸಿಪಾಲ್ ಗುರುಸಿದ್ದಯ್ಯ ಅಭಿಪ್ರಾಯಪಟ್ಟರು.
ಅವರು ಹುಲಿಯೂರು ಸಪಪೂ ಕಾಲೇಜಿನಲ್ಲಿ ಏರ್ಪಾಟಾಗಿದ್ದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮೀಣ ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು ಸಾಧಿಸಬೇಕೆಂಬ :ಬಲ ಹೊಂದಬೇಕು. ಇದಕ್ಕಿರುವುದು ಒಂದೇ ಮಾರ್ಗ ಶ್ರಮಪಡುವುದು. ಇದನ್ನು ಬಿಟ್ಟು ಬೇರೆ ಮಾರ್ಗವಿಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬಹಳಷ್ಟು ಸಾಧಿಸಲು ಅವಕಾಶವಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯೋನ್ಮುಖರಾಗಬೇಕೆಂದು ತಿಳಿಸಿದರು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಸರಿ ಸಮಾನವಾದ ಪ್ರಾಮುಖ್ಯತೆಯನ್ನು ನೀಡಿ, ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿದ್ದ ಪ್ರೊ. ಅಶ್ವಾಕ್ ಅಹಮದ್ ಮಾತನಾಡಿ, ಪದವಿ ಪೂರ್ವ ಶಿಕ್ಷಣವು ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖ ಘಟ್ಟವಾಗಿದ್ದು, ಎಚ್ಚರಿಕೆಯಿಂದ ವಿದ್ಯಾರ್ಥಿಗಳು ಜೀವನ ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ಬೆಟ್ಟದಷ್ಟು ಸಾಧನೆ: ಮಾನವ ಇಂದು ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಬೆಟ್ಟದಷ್ಟು ಸಾಧಿಸಿದ್ದಾನೆ. ಆದರೆ ಮಾನವನಂತೆ ಬದುಕುವುದನ್ನೇ ಮರೆತಿದ್ದಾನೆ. ಸಾಧನೆ ಹೂವಿನ ಹಾಸಿಗೆಯಲ್ಲ. ಕಲ್ಲು-ಮುಳ್ಳುಗಳ ಸಂಕೀರ್ಣ. ಸಾಧನೆಯು ವಿನಯದಿಂದ, ಶ್ರಮದಿಂದ, ಶ್ರದ್ಧೆಯಿಂದ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳ ಮನಸ್ಸು ಚಂಚಲವಾಗಿದ್ದು, ಮನಸ್ಸನ್ನು ನಿಯಂತ್ರಣ ಮಾಡಲು ವಿಫಲರಾದವರು ಅಕ್ರಮಗಳಲ್ಲಿ ತೊಡಗಿ ತಮ್ಮ ಜೀವನವನ್ನು ನಾಶಗೊಳಿಸಿಕೊಳ್ಳುತ್ತಾರೆ. ಮಾನವೀಯ ಮೌಲ್ಯಗಳ ಕೊರತೆ, ದುರ್ನಡತೆಗಳು ಇಂದು ಸಮಾಜದಲ್ಲಿ
ತಾಂಡವವಾಡುತ್ತಿವೆ. ಬಾಲ್ಯದಲ್ಲಿಯೇ ಇಂದು ಮಕ್ಕಳನ್ನು ತಿದ್ದಿ, ತೀಡಿ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕಾಗುತ್ತದೆ. ಏಕಾಗ್ರತೆ, ಛಲ, ಆತ್ಮವಿಶ್ವಾಸ, ಕರ್ತವ್ಯಪ್ರಜ್ಞೆ ಇದ್ದ ವ್ಯಕ್ತಿ ಸಾಧನೆಯ ಹಾದಿಯಲ್ಲಿ ಬಹುದೂರ ಸಾಗುತ್ತಾನೆ ಎಂದು ಅಶ್ವಾಕ್ ಅಹಮದ್ ಅಭಿಪ್ರಾಯಪಟ್ಟರು.
ಕಾಲೇಜಿನ ಹಿರಿಯ ಉಪನ್ಯಾಸಕರಾದ ರಂಗಸ್ವಾಮಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿ, ಕಾಲೇಜಿನ ಹಿಂದಿನ ವಿದ್ಯಾರ್ಥಿಗಳು ಕಾಲೇಜಿಗೆ ಉತ್ತಮ ಫಲಿತಾಂಶ ತಂದುಕೊಟ್ಟಿದ್ದು, ಈ ಬಾರಿಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ತಂದು ಕೊಡುವಂತೆ ಕರೆ ನೀಡಿದರು.
ನಿಡಸಾಲೆ ಸಪಪೂ ಕಾಲೇಜು ಪ್ರಿನ್ಸಿಪಾಲ್ ದಿಲ್ಲಿಗೌಡರು, ಉಪನ್ಯಾಸಕರಾದ ಡಾ. ನರೇಶ್ಕುಮಾರ್, ಕೆ.ಆರ್. ಷಡಾಕ್ಷರಯ್ಯ, ವಿಜಯ ನಿರ್ಮಲ, ಎಚ್.ಎಸ್. ವೀಣಾ ಹಾಜರಿದ್ದರು.
ಸೌಮ್ಯ ಪ್ರಾರ್ಥಿಸಿ, ವೀಣಾ ಸ್ವಾಗತಿಸಿ, ಶ್ರೀನಿವಾಸ್ ವಂದಿಸಿದರು. ಅರ್ಷಿಯಾ ಬಾನು ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

