ವಾಜಪೇಯಿ ವಸತಿ ಶಾಲೆಗೆ ಭೂಮಿ ನೀಡಿದ ರಾಮಾಂಜನೇಯಗೆ ಸನ್ಮಾನ
ಪಾವಗಡ: ತಾಲೂಕಿನ ದೊಡ್ಡಹಳ್ಳಿ ಗ್ರಾಮದಲ್ಲಿ ಎ.ಬಿ. ವಾಜಪೇಯಿ ವಸತಿ ಶಾಲೆ ನಿರ್ಮಾಣಕ್ಕೆ ನಿವೃತ್ತ ಡಿಸಿ ರಾಮಾಂಜನೇಯ 8ಎಕರೆ ಜಮೀನು ಉಚಿತವಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ ಎಂದು ಎಪಿಎಂಸಿ ನಿರ್ದೇಶಕ ಸತ್ಯನಾರಾಯಣ ಚೌಧರಿ ಅಭಿಪ್ರಾಯಪಟ್ಟರು.
ತಾಲೂಕು ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮತ್ತು ವಸತಿ ಶಾಲೆ ನಿರ್ಮಿಸಲು ಉಚಿತವಾಗಿ ಜಮೀನು ದಾನ ಕೊಟ್ಟ ಹಿನ್ನಲೆಯಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪಟ್ಟಣದ ಎಪಿಎಂಸಿ ಹಾಲ್‌ನಲ್ಲಿ ನಿವೃತ್ತ ಜಿಲ್ಲಾಧಿಕಾರಿ ದೊಡ್ಡಹಳ್ಳಿ ರಾಮಾಂಜಿನೇಯ ಅವರಿಗೆ ಏರ್ಪಾಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ರಾಮಾಂಜಿನೇಯ ಅವರಿಗೆ ಸನ್ಮಾನಿಸಿ ಮಾತನಾಡಿದರು.
ನಿವೃತ್ತ ಡಿಸಿ ರಾಮಾಂಜಿನೇಯ ಅವರು ದೊಡ್ಡಹಳ್ಳಿ ಗ್ರಾಮದ ವಾಸಿಗಳಾಗಿದ್ದು ಈಗ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.ತಮ್ಮ ಗ್ರಾಮದ ಬಗ್ಗೆ ಅಪಾರ ಪ್ರೀತಿಹೊಂದಿದ್ದು ಹಣ ಮತ್ತು ಉಚಿತ ನೀವೇಶನ ನೀಡುವ ಮೂಲಕ ಗ್ರಾಮದಲ್ಲಿ ಬೃಹದಾಕಾರದ ಅಂಜನೇಯಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ಸಹಕರಿಸಿದ್ದಾರೆಂದರು.ಮೊರಾರ್ಜಿ ವಸತಿ ಶಾಲೆ ಹಾಗೂ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ನಿರ್ಮಾಣಕ್ಕೆ ಸುಮಾರು 15ಎಕರೆ ಜಮೀನು ಉಚಿತವಾಗಿ ನೀಡಿರುವುದನ್ನು ಸ್ಮರಿಸಿದ ಅವರು ತಾಲೂಕಿನ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹಿನ್ನಲೆಯಲ್ಲಿ ಗ್ರಾಮದಲ್ಲಿರುವ ಕೋಟ್ಯಂತರ ರು.ಗಳ ವೆಚ್ಚದ 8ಎಕರೆ ಜಮೀನು ಉಚಿತವಾಗಿ ದಾನ ನೀಡಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ನಿರ್ಮಾಣಕ್ಕೆ ಸಹಕರಿಸಿದ್ದಾರೆ ಎಂದು ತಿಳಿಸಿದರು. ಅಭಿವೃದ್ಧಿ ಹಿನ್ನಲೆಯಲ್ಲಿ ಸಂಕಷ್ಟದಲ್ಲಿದ್ದ ಆನೇಕ ಬಡವರಿಗೆ ಅರ್ಥಿಕ ನೆರವಾಗಿದ್ದಾರೆ ಎಂದು ಅವರು ಪ್ರಶಂಸಿದರು.
ತಾಲೂಕು ಸಮಾಜ ಕಲ್ಯಾಣ ಇಲಾಖೆ ವೈ.ಆರ್.ಚೌಧರಿ, ರಾಜ್ಯ ರೇಷ್ಮೆ ಮಂಡಳಿ ಸದಸ್ಯ ನರಸಿಂಹಯ್ಯ,ಮುಖಂಡ ಡಾ.ಜಿ.ವೆಂಕಟರಾಮಯ್ಯ, ಎಂಪಿಎಂಸಿ ನಿರ್ದೇಶಕ ಅಂಜಯ್ಯ, ಮುಖಂಡರಾದ ಲಕ್ಷ್ಮೀನಾರಾಯಣಪ್ಪ. ವೆಂಕಟೇಶ್ ಚೌಧರಿ ಇತರರು ಮಾತನಾಡಿದರು. ನಿಲಯ ಪಾಲಕರಾದ ಪಿ.ಎ.ಹನುಮಂತರಾಯಪ್ಪ, ವೆಂಕಟೇಶಪ್ಪ ಜಯರಾಮ್,ನಾಗರಾಜ್, ಶಿವಪ್ಪ, ರಮೇಶ್, ಸುರೇಶ್, ಸೌಕತ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

