ತುರ್ತಾಗಿ ಅಂತರ್ಜಲ ವೃದ್ಧಿ ಸಂಯೋಜನೆ ಬೇಕಿದೆ: ಶಾಸಕ
ಕುಣಿಗಲ್: ಗ್ರಾಮಾಂತರ ಪ್ರದೇಶದಲ್ಲಿ ಕುಡಿವ ನೀರು ಪೂರೈಸಲು ಬೋರ್ವೆಲ್ ಕೊರೆಯುವುದೇ ಪರಿಹಾರವಲ್ಲ ಎಂಬುದನ್ನು ಗ್ರಾಮಸ್ಥರು ಮನಗಾಣಬೇಕಿದೆ ಎಂದು ಶಾಸಕ ಡಿ.ನಾಗರಾಜಯ್ಯ ತಿಳಿಸಿದರು.
ಶುಕ್ರವಾರ, ತಾಲೂಕಿನ ಕಸಬಾ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ವಿವಿಧ ಇಲಾಖೆಗಳ ಐದುವರೆ ಕೋಟಿ ರುಪಾಯಿ ಅನುದಾನ ದಡಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಚನ್ನತಿಮ್ಮನಪಾಳ್ಯದಲ್ಲಿ ಹತ್ತು ಬೋರ್ವೆಲ್ ಕೊರೆಸಿದರೂ ನೀರು ಸಿಗದೆ ಹನ್ನೊಂದನೇ ಯತ್ನಕ್ಕೆ ನೀರು ಸಿಕ್ಕರೆ, ಬೇಗೂರು ಗ್ರಾಪಂ ವ್ಯಾಪ್ತಿಗೆ ನೀರು ಪೂರೈಸಲು ಹನ್ನೆರಡು ಬೋರ್ವೆಲ್ ಕೊರೆಸಿ ವಿಫಲವಾಗಿ ಕೊನೆ ಕೆರೆದಂಡೆ ಪ್ರದೇಶದಲ್ಲಿ ಕೊರಸೆಲಾದ 13ನೇ ಬೋರ್ವೆಲ್ ಅಲ್ಪ ಪ್ರಮಾಣದ ನೀರು ದೊರೆತಿದೆ. ಆದ್ದರಿಂದ ಗ್ರಾಮಸ್ಥರು ಇರುವ ನೀರನ್ನು ಮಿತಿಯಾಗಿ, ಅವಶ್ಯಕತೆ ಅನುಗುಣವಾಗಿ ಬಳಸಿಕೊಳ್ಳಬೇಕಿದೆ.
ಟ್ಯಾಂಕರ್ ಮೂಲಕ ನೀರು ಪೂರೈಸಲು ಸರ್ಕಾರದ ನಿಯಮಾವಳಿಗಳ ಪ್ರಕಾರ ಜನಸಂಖ್ಯೆಗೆ ಅನುಗುಣವಾಗಿ ಪೂರೈಸಬೇಕಾಗಿದೆ. ಆದ್ದರಿಂದ ಗ್ರಾಮಾಂತರ ಪ್ರದೇಶದ ಜನತೆ ನೀರಿನ ವಿಶಯದಲ್ಲಿ ಗೊಂದಲ ಮಾಡಿಕೊಂಡು ಶಾಂತಿಕದಡದೆ, ಸಮಸ್ಯೆಯನ್ನು ಸೌಹಾರ್ದವಾಗಿ ಬಗೆಹರಿಸುವ ನಿಟ್ಟಿನಲ್ಲಿ ಸಹಕರಿಸಬೇಕೆಂದರು.
ಕಸಬಾ ಜಿಪಂ ಸದಸ್ಯೆ ಸುಮಿತ್ರಮ್ಮ ಗೈರು ಹಾಜರಿಯಲ್ಲಿ ಕಾರ್ಯಕ್ರಮ ನೆರವೇರಿದ್ದು ಸದಸ್ಯೆ ಪತಿ ಶಿವಣ್ಣ, ಜಿಪಂ ಸದಸ್ಯ ಡಾ.ಬಿ.ಎನ್.ರವಿ, ಬೇಗೂರು ಗ್ರಾಪಂ ಅಧ್ಯಕ್ಷೆ ಗಂಗನರಸಮ್ಮ, ಪ್ರಮುಖರಾದ ಸುರೇಶ್, ರಮೇಶ್, ತಹಶೀಲ್ದಾರ್ ಪುಟ್ಟನರಸಯ್ಯ, ತಾಪಂ ಇಒ ಶಂಕರಯ್ಯ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

