ತುಮಕೂರು

ಮಾಜಿ ಕುಲಪತಿ ಎಸ್.ಸಿ. ಶರ್ಮಾ ಕಾಲಾವಧಿ ಅಕ್ರಮ ನ್ಯಾಯಾಂಗ ತನಿಖೆ ನಡೆಸಿ

Published On :

ತುಮಕೂರು: ಮಾಜಿ ಕುಲಪತಿ ಡಾ. ಎಸ್.ಸಿ. ಶರ್ಮಾ ಅವರ ಕಾಲಾವಧಿಯಲ್ಲಿ ಆಗಿರುವ ಎಲ್ಲಾ ಅಕ್ರಮಗಳನ್ನು ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ತುಮಕೂರಿನಲ್ಲಿ ಪತ್ರ ಚಳವಳಿಗೆ ಚಾಲನೆ ನೀಡಲಾಯಿತು. ತುಮಕೂರು ವಿಶ್ವವಿದ್ಯಾನಿಲಯದ  ಕುಲಪತಿ ಶರ್ಮಾ ಅವರು ಕುಲಪತಿಗಳಾಗಿದ್ದ ಅವಧಿಯಲ್ಲಿ ಯುಜಿಸಿ ನಿಯಾಮಾವಳಿ ಮೀರಿ ಮತ್ತು ಸಂವಿದಾನದ ಅನುಚ್ಚೇದ 14-21 ನ್ನು ವಿರೋಧಿಸಿ ಕರ್ನಾಟಕದ ಯಾವುದೇ ವಿ.ವಿ ನೀಡದಷ್ಟು ಡಿ.ಲಿಟ್ ಮತ್ತು ಡಿ.ಎಸ್.ಸಿ ಪದವಿಯನ್ನು ನೀಡಿರುವುದನನು ವಾಪಸ್ಸ್ ಪಡೆಯಬೇಕು ಮತ್ತು ಅವರ ಕಾಲಾವದಿಯಲ್ಲಿ ನಡೆದಿರುವ ಎಲ್ಲಾ ಅಕ್ರಮಗಳನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ವಿ.ವಿ. ಲಾಂಛನ ಉಳಿಸಿ ಹೋರಾಟ ಸಮಿತಿ ವತಿಯಿಂದ ಪತ್ರ ಚಳವಳಿ ನಡೆಸಲಾಯಿತು. ರಾಷ್ಟ್ರಪತಿಗಳು, ರಾಜ್ಯಪಾಲರು, ಮುಖ್ಯಮಂತ್ರಿಗಳು ಮತ್ತು ಉನ್ನತ ಶಿಕ್ಷಣ ಸಚಿವರು ಹಾಗೂ ಮಾನವ ಹಕ್ಕುಗಳ ಸಮಿತಿ, ನವದೆಹಲಿ ಇವರುಗಳಿಗೆ ಪತ್ರ ಚಳುವಳಿಯನ್ನು ನಡೆಸುವ ಹೋರಾಟಕ್ಕೆ ಚಾಲನೆ ನೀಡಲಾಯಿತು. ಈ ಪತ್ರ ಚಳುವಳಿಯಲ್ಲಿ ಹಿರಿಯ ಪ್ರಗತಿಪರ ಚಿಂತಕ ಪ್ರೊ.ಕೆ. ದೊರೈರಾಜ್, ಪ್ರೊ. ಜಿ.ಎಂ.ಶ್ರೀನಿವಾಸಯ್ಯ, ಎಂಜಿನಿಯರ್ ರಾಮಚಂದ್ರಯ್ಯ, ಗೋವಿಂದಯ್ಯ, ಸುರೇಂದ್ರ, ಸಿದ್ದಯ್ಯ, ಎಸ್. ರಮೇಶ್, ಸುದೀಂದ್ರಕುಮಾರ್, ವೆಂಕಟೇಶ್, ನವೀನ್, ಗಂಗಾಧರ್‌ಮೂರ್ತಿ, ಸಿ.ಯತಿರಾಜು, ಜವಹಾರ್, ಎನ್.ಕೆ. ಸುಬ್ರಮಣ್ಯ, ಸೈಯದ್ ಮುಜೀಬ್, ಟಿ.ಡಿ.ಶಾಂತ್ ಕುಮಾರ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.