ಹಾಲು ಉತ್ಪಾದನೆ ಕ್ಷೇತ್ರ ಆರ್ಥಿಕ ಮುನ್ನಡೆಗೆ ಸಹಕಾರಿ
ತುಮಕೂರು: ದೇಶದ ಆರ್ಥಿಕ ಮುನ್ನಡೆಗೆ ಹಾಲು ಉತ್ಪಾದನೆ ಕ್ಷೇತ್ರ ಬಹಳ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಶಾಸಕ ಬಿ ಸುರೇಶ್ಗೌಡ ಹೇಳಿದರು.
ಕಣಕುಪ್ಪೆ ಗ್ರಾ,ಪಂ. ವ್ಯಾಪ್ತಿಯ ಬನ್ನಿಕುಪ್ಪೆ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಕೈ ಕೆಸರಾಸದರೆ ಬಾಯಿ ಮೊಸರು ಎಂಬ ನಾಣ್ಮುಡಿಯನ್ನು ನೆನಪಿಸಿದ ಶಾಸಕರು ಹೈನುಗಾರಿಕೆ ಉದ್ಯಮ ಮಾಡುತ್ತಿರುವ ಅನೇಕ ಕುಟುಂಬಗಳು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದು ಸಾಮಾಜಿಕವಾಗಿ ಆರ್ಥಿಕವಾಗಿ ಸುಸ್ಥಿರತೆ ಕಡೆಗೆ ಸಾಗುತ್ತಿರುವುದನ್ನು ನೆನಪಿಸಿದರು.
ನಮ್ಮ ಬಿಜೆಪಿ ಸರ್ಕಾರ ಇದ್ದಾಗ 2 ರು. ಬೆಂಬಲ ಬೆಲೆ ನೀಡಿ ಹೈನುಗಾರಿಕೆಗೆ ಉತ್ತೇಜನ ನೀಡಲಾಗಿತು. ಇದನ್ನು ಸದುಪಯೋಗ ಪಡಿಸಿಕೊಂಡ ಅನೇಕ ಗ್ರಾಮಗಳು ಆರ್ಥಿಕ ಅಭಿವೃದ್ಧಿಗೊಂಡಿವೆ ಎಂದು ಶಾಸಕರು ಅಭಿಪ್ರಾಯಪಟ್ಟರು. ಹೈನುಗಾರಿಕೆಯಲ್ಲಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳು ಅತೀ ಮೂಂಚೂಣಿಯಲ್ಲಿದ್ದು ನಮ್ಮ ಕ್ಷೇತ್ರದ ಜನತೆ ಹೈನುಗಾರಿಕೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಶಾಸಕರು ಸಲಹೆ ನೀಡಿದರು.
ಮಿನಿ ಬ್ಯಾಂಕ್: ಇಂದು ಹಸು ಎಮ್ಮೆ ಸಾಕಿರುವ ಮನೆಯಲ್ಲಿ ಸಣ್ಣ ಪುಟ್ಟ ಹಣಕಾಸಿಗೆ ಯಾವುದೇ ಸಮಸ್ಯೆ ಇರುವುದಿಲ್ಲ ಒಂದು ರೀತಿಯಲ್ಲಿ ಮಿನಿ ಬ್ಯಾಂಕ್ ಇದ್ದಾಗೆ ಎಂದು ಅಭಿಪ್ರಾಯಪಟ್ಟ ಶಾಸಕರು ಅನೇಕ
ಬ್ಯಾಂಕುಗಳು ಹೈನುಗಾರಿಕೆಗಾಗಿ ಸಾಲ ನೀಡಲು ಮುಂದೆ ಬಂದಿವೆ. ಮತ್ತು ಸರ್ಕಾರದಲ್ಲೂ ಕೂಡ ಅನೇಕ ಜನಪರ ಯೋಜನೆಗಳು ಜಾರಿಯಲ್ಲಿದ್ದು ಅಂಬೇಡ್ಕರ್ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ನಿಗಮ, ದೇವರಾಜು ಅರಸು ನಿಗಮದಲ್ಲಿ ಹಸು ಸಾಕಾಣಿಕೆಗೆ ಸಾಲ ಮತ್ತು ಸಹಾಯಧನದ ಸೌಲಭ್ಯವಿದ್ದು ಇದರ ಸದುಪಯೋಗಪಡಿಸಿಕೊಂಡು ಆರ್ಥಿಕ ಸ್ವಾವಲಂಬಿಗಳಾಗುವಂತೆ ಶಾಸಕರು ಅಗ್ರಹಿಸಿದರು.
ಸಲಹೆ: ಗ್ರಾಮ ಮಟ್ಟದಲ್ಲಿ ಡೈರಿಗಳು ಪ್ರಾರಂಭ ಅಗುತ್ತಿರುವುದು ರೈತರು ದೂರದ ಗ್ರಾಮಕ್ಕೆ ಹೋಗಿ ಬರುವ ಸಮಸ್ಯೆ ತಪ್ಪಲಿದ್ದು ಸಮಯ ಮತ್ತು ಶ್ರಮ ಉಳಿತಾಯವಾಗಲಿದೆ. ಆದ್ದರಿಂದ ಪ್ರತೀ ಪಂಚಾಯ್ತಿಯಲ್ಲಿ ಒಂದೆರಡು ಕಡೆ ಡೈರಿ ಪ್ರಾರಂಭ ಮಾಡುವಂತೆ ಡೈರಿ ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಸಲಹೆ ನೀಡಿದರು.
ಗ್ರಾಮಾಂತರ ಕ್ಷೇತ್ರದಲ್ಲಿ ಉತ್ತಮ ರಸ್ತೆ ಸಂಪರ್ಕವಿದೆ. ಈಗ ಹೇಮಾವತಿಯಿಂದ ಕೆರೆಗಳಿಗೆ ನೀರು ಹರಿಸಲಾಗಿದೆ ಇನ್ನು ಮುಂದೆ ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ರೈತಾಪಿ ವರ್ಗ ತಮ್ಮ ತಮ್ಮ ಜಮೀನುಗಳನ್ನು ಮಾರಾಟ ಮಾಡದೆ ಕೃಷಿಯಲ್ಲಿ ತೊಡಗಿಸಿಕೊಂಡು ಹೈನುಗಾರಿಕೆಗೆ ಹೆಚ್ಚು ಮಾನ್ಯತೆ ನೀಡಿ ಅರ್ಥಿಕ ಸಬಲೀಕರಣವಾಗುವಂತೆ ಸಭಿಕರಲ್ಲಿ ಶಾಸಕರು ಮನವಿ ಮಾಡಿದರು.
ಬರುವಂತ ದಿನಗಳಲ್ಲಿ ಹೆಬ್ಬೂರು ಹೋಬಳಿ ಕೇಂದ್ರ ಇಂದಲ್ಲ ನಾಳೆ ತಾಲೂಕು ಕೇಂದ್ರವಾಗಲಿದೆ ಈಗಾಗಲೇ ವಾಣಿಜ್ಯ ಕೇಂದ್ರವಾಗಿ ರೂಪುಗೊಂಡಿರುವ ಹೆಬ್ಬೂರು ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ, ಪ್ರಥಮ ದರ್ಜೆ ಕಾಲೇಜು, ಐಟಿಐ ಕಾಲೇಜು, ಮೊರಾರ್ಜಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಕೆಇಬಿ ಕ:ಕೇರಿ, ಡೆಪ್ಯೂಟಿ ತಹಸೀಲ್ದಾರ್ ಕಚೇರಿ ಹಾಗು ಎಪಿಎಂಸಿಯ ಉಪಮಾರುಕಟ್ಟೆ ಪ್ರಾಂಗಣ ಇರುವ ಅತಿ ದೊಡ್ಡ ಹೋಬಳಿ ಕೇಂದ್ರ ಹೆಬ್ಬೂರು ಆಗಿದೆ ಎಂದು ತಿಳಿಸಿದರು.
ಎಪಿಎಂಸಿ ಸದಸ್ಯ ಶಿವಕುಮಾರ್ ಸ್ವಾಗತಿಸಿದರು. ಗ್ರಾ.ಪಂ. ಸದಸ್ಯ ಅಂಜಿನಪ್ಪ, ರಮೇಶ್, ಸಿದ್ದಗಂಗಪ್ಪ ಹರೀಶ್, ರಾಜಣ್ಣ, ಮಾಯಣ್ಣ, ಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

