ಹೆಣ್ಣುಮಕ್ಕಳ ಆತ್ಮಸ್ಥೈರ್ಯ ಹೆಚ್ಚಿಸಿದ ಹೊಸ ವರ್ಷಾಚರಣೆ
ತುಮಕೂರು: ಹೊಸ ವರ್ಷ ಹರ್ಷದಾಯಕವಾಗಿ ಮೂಡಿ ಬರುವುದೆಂಬ ಆಶಯದಿಂದ ಶ್ರೀ ಸಿದ್ಧಗಂಗಾ ಮಹಿಳಾ
ಪದವಿಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಏರ್ಪಡಿಸಿ ಹೆಣ್ಣುಮಕ್ಕಳ ಆತ್ಮಸ್ಥೈರ್ಯ ಹೆಚ್ಚಿಸುವ ಹೊಸ ವರ್ಷಾಚರಣೆಯನ್ನು ಆಚರಿಸಲಾಯಿತು.
ನೂತನ ವರ್ಷಾರಂಭಕ್ಕೆ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆ, ಜಾನಪದ ಗೀತೆ, ಭಾವಗೀತೆ ಗಾಯನ, ಅಡುಗೆ ಸ್ಪರ್ಧೆ, ಮೆಹಂದಿ, ತರಕಾರಿ ಕೆತ್ತನೆ, ಶಾಸ್ತ್ರೀಯ ನೃತ್ಯ, ಕೇಶವಿನ್ಯಾಸ, ಅಂತ್ಯಾಕ್ಷರಿ ಸ್ಪರ್ಧೆಗಳಲ್ಲಿ 1 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಸಡಗರದಿಂದ ಪಾಲ್ಗೊಂಡು ಸಂತಸಪಟ್ಟರು. ವಿದ್ಯಾರ್ಥಿನಿಯರು ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಸಾಂಸ್ಕೃತಿಕ ಕಲಾಮಂಟಪದಲ್ಲಿ ದೀಪ ಬೆಳಗಿಸುವುದರ ಮೂಲಕ ಹೊಸ ವರ್ಷ ಬರಮಾಡಿಕೊಂಡರು. ಮಹಿಳೆ ಇಂದು ಎಲ್ಲಾ ಕ್ಷೇತ್ರಗಳಲ್ಲೂ ದಾಪುಗಾಲು ಇಡುತ್ತಿದ್ದಾಳೆ. ಇಂತಹ ಸನ್ನಿವೇಶದಲ್ಲಿ ಕಳೆದ ಸಾಲು ಆಕೆಯ ಸ್ಥೈರ್ಯಕ್ಕೆ ಪೆಟ್ಟು ನೀಡಿದ್ದರೂ, ಎದೆಗುಂದದ ನಾರಿಯರು ಮತ್ತು ನಾಗರಿಕರು ತಮ್ಮ ಹಕ್ಕಿಗಾಗಿ ಹೋರಾಡಿ ಯಶಸ್ಸು ಗಳಿಸಿದ್ದಾರೆ. ಪ್ರಜಾಪ್ರಭುತ್ವ ರಾಷ್ಟ್ರವನ್ನು ಪ್ರಜ್ಞಾವಂತ ಪ್ರಜೆಗಳು ನಿಯಂತ್ರಿಸುವ ದಿಶೆಯಲ್ಲಿ ವರ್ಷಾರಂಭ ಕಂಡು ಬಂದಿರುವುದು ಸಂತಸ. ಎಲ್ಲರ ಬಾಳಿನಲ್ಲಿ ಸುಖ, ಸಂತೋಷ, ಸಮೃದ್ಧಿ ನೆಲೆಸಲಿ, ಯಶಸ್ಸು ಲಭಿಸಲಿ ಎಂದು ಪ್ರಾಂಶುಪಾಲ ಜಿ.ಎಸ್. ರೇಣುಕಪ್ಪ ಹಾರೈಸಿದರು. ನಂತರ ವಿದ್ಯಾರ್ಥಿನಿಯರಿಗೆ ಕೇಕ್ ವಿತರಿಸಲಾಯಿತು.
ಕಾಲೇಜಿನಲ್ಲಿ ಗುರುವಾರ ಬೆಳಗ್ಗೆ 10 ಗಂಟೆಗೆ ಸಂಸ್ಕೃತಿ ಸಾಂಸ್ಕೃತಿಕ ಸಂಭ್ರಮದ ಸಮಾರೋಪ ಸಮಾರಂಭ ಜರುಗಲಿದ್ದು, ಸಂಸ್ಥೆಯ ಸಂಸ್ಥಾಪಕ ಡಾ. ಶಿವಕುಮಾರ ಮಹಾಸ್ವಾಮಿಗಳವರು ಸಾನಿಧ್ಯ ವಹಿಸಲಿದ್ದಾರೆ. ಖ್ಯಾತ ಗಾಯಕ, ರಾಜ್ಯ ಸಂಗೀತ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಯಶವಂತ ಹಳಿಬಂಡಿಯವರು ಸಮಾರೋಪ ಭಾಷಣ ಮಾಡಲಿದ್ದಾರೆ. ಪತ್ರಕರ್ತ ಎಸ್. ನಾಗಣ್ಣನವರನ್ನು ಸನ್ಮಾನಿಸಲಾಗುವುದು. ತುಮಕೂರು ನಗರಪಾಲಿಕೆಯ ಮಹಾಪೌರರಾದ ಗೀತಾ ರುದ್ರೇಶ್ ಅವರು ಬಹುಮಾನ ವಿತರಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ. ನಾಗಭೂಷಣ ಭಾಗವಹಿಸಲಿದ್ದು, ಜಿ.ಎಸ್. ರೇಣುಕಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

