ತುಮಕೂರು

ಕಾರ್ಯದರ್ಶಿ ಮೇಲಿನ ಹಲ್ಲೆ ಸುಳ್ಳು: ಗ್ರಾ.ಪಂ. ನೌಕರರ ಸಂಘ ಸ್ಪಷ್ಟನೆ

Published On :

ಚಿಕ್ಕನಾಯಕನಹಳ್ಳಿ: ಕೋರಗೆರೆ ಗ್ರಾಮಪಂಚಾಯ್ತಿ ಕಾರ್ಯದರ್ಶಿಯ ಮೇಲೆ ನಡೆದಿದೆಯೆನ್ನಲಾದ ಹಲ್ಲೆ ಸುಳ್ಳು  ಎಂದು ಕರ್ನಾಟಕ ಗ್ರಾಮಪಂಚಾಯ್ತಿ ನೌಕರರ ಸಂಘ ಆರೋಪಿಸಿದೆ.
ಈ ಹಿಂದೆ ವಾಟರ್‌ಮನ್ ಮತ್ತು ಬಿಲ್ ಕಲೆಕ್ಟರ್ ಹುದ್ದೆ ಖಾಲಿಯಾದಾಗ ಅದೇ ಗ್ರಾಮ ಪಂಚಾಯ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಾಟರ್ ಮನ್, ಸ್ವೀಪರ್‌ಗೆ ಬಿಲ್ ಕಲೆಕ್ಟರ್‌ಗಳಿಗೆ ಆದ್ಯತೆ ನೀಡಬೇಕೆಂದು ಆದೇಶವಿದ್ದರೂ ಸದರಿ ಆದೇಶವನ್ನು ಗಾಳಿಗೆ ತೂರಿ ಸ್ವಹಿತಾಸಕ್ತಿಯಿಂದ  ಬೇರೆಯವರನ್ನು ನೇಮಕ ಮಾಡಿಕೊಂಡಿದ್ದಲ್ಲದೆ, ಗ್ರಾಮಪಂಚಾಯ್ತಿ ಸದಸ್ಯರನ್ನು  ದಿಕ್ಕುತಪ್ಪಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಸದರಿ ಅನ್ಯಾಯಕ್ಕೊಳಗಾದ  ಕೃಷ್ಣಮೂರ್ತಿ ಮೇಲೆ  ಪಂಪ್ ಮೋಟಾರು ಕಳವಿನ ಸುಳ್ಳು ಆರೋಪ ಹೊರಿಸಿ ದೂರು ನೀಡಿರುತ್ತಾರೆ. ಅವರಿಗೆ ಉಪ್ಪಾರಹಳ್ಳಿ , ಸಾಲಾಪುರಕ್ಕೆ 5 ಕಿ.ಮೀ. ಆಗುತ್ತದೆ. ಇಲ್ಲಿಂದ ಅಲ್ಲಿಗೆ ಹೋಗಿ ಕಳ್ಳತನ ಮಾಡಲು ಸಾಧ್ಯವೆ. ಯುಕ್ತಾಯುಕ್ತ ವಿಚಾರಮಾಡದೆ, ಕಾನೂನು ಬಾಹಿರ ನೇಮಕಾತಿ ಬಗ್ಗೆ ಪ್ರಶ್ನಿಸಿದ್ದಕ್ಕೆ ಕಳ್ಳತನದ ಆರೋಪ ಹೊರಿಸಿದ್ದು ಸಾಲದೆ, ಈಗ ಹಲ್ಲೆಯ ಆರೋಪ ಹೊರಿಸಿ ಕೃಷ್ಣಮೂರ್ತಿ ಬಾಯಿ ಮುಚ್ಚಿಸುವ ಹುನ್ನಾರ ಇದಾಗಿದೆ. ಗ್ರಾಮಪಂಚಾಯ್ತಿಯ ದೂರಿನ ಬಗ್ಗೆ ಠಾಣಾಧಿಕಾರಿ ಕರೆಸಿ ತನಿಖೆ ಮಾಡಿದ್ದು, ಆರೋಪ ರುಜುವಾಗಿಲ್ಲದಿರುವುದು ಇವರಿಗೆ  ಸಹಿಸಿಕೊಳ್ಳಲು ಆಗಿಲ್ಲ. ಆದ್ದರಿಂದ ಗ್ರಾಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳು ಅಮಾಯಕ ಗ್ರಾಮಪಂಚಾಯ್ತಿ ನೌಕರರ ಮೇಲೆ ಸುಳ್ಳು ದೂರು ಕೊಡುವುದು,ಮಾನಸಿಕವಾಗಿ ಹಿಂಸಿಸುವುದನ್ನು ಕೈಬಿಡದಿದ್ದರೆ, ಮುಂಬರುವ ದಿನಗಳಲ್ಲಿ ತಾಪಂ ಕಾರ್ಯಾಲಯದ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳ ಬೇಕಾಗುತ್ತದೆ ಎಂದು  ಕರ್ನಾಟಕ ನೌಕರರ ಸಂಘದ ತಾಲೂಕು ಘಟಕ ಎಚ್ಚರಿಕೆ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.