ತುಮಕೂರು

ಸಮರ್ಥ್ ಸಾಹಿತ್ಯ ಭಂಡಾರ ಸ್ಥಾಪಿಸುವ ಸಂಬಂಧ ಪೂರ್ವಭಾವಿ ಸಭೆ

Published On :

ತುಮಕೂರು: ತುಮಕೂರಿನ ಸಮರ್ಥ್ ಫೌಂಡೇಷನ್ ಸಮರ್ಥ್ ಸಾಹಿತ್ಯ ಭಂಡಾರ ಸ್ಥಾಪಿಸುವ ಸಂಬಂಧ ತುಮಕೂರಿನ ಸಾಹಿತಿಗಳನ್ನು, ಸಾಹಿತ್ಯಾಸಕ್ತರನ್ನು  ಸೇರಿಸಿ ಪೂರ್ವಭಾವಿ ಸಭೆಯನ್ನು ರೆಡ್ ಕ್ರಾಸ್ ಕಟ್ಟಡದಲ್ಲಿ ಸಮರ್ಥ್ ಫೌಂಡೇಷನ್ ನಡೆಸಿತು.   
ಸಭೆಯಲ್ಲಿ ವಿಮರ್ಶಕ ಕೆ.ಪಿ. ನಟರಾಜು ಮಾತನಾಡಿ ಫೌಂಡೇಷನ್‌ನ ಕೆಲಸವನ್ನು ಶ್ಲಾಘಿಸುತ್ತಾ ಇದು ವಿಶೇಷ ಪುಸ್ತಕಗಳು ದೊರೆಯುವ ತಾಣವಾಗಬೇಕು. ಎಲ್ಲೂ ದೊರೆಯದ ಪುಸ್ತಕಗಳು ಇಲ್ಲಿ ದೊರೆಯುವಂತಾಗಬೇಕು. ಸಂಶೋಧಕರಿಗೆ ಆಕರಗಳು ದೊರೆಯುವ ತಾಣ ಇದಾಗಬೇಕು ಎಂದರು.
ಸಾಹಿತಿಗಳಾದ ಬಾ.ಹಾ.ರಮಾಕುಮಾರಿ ಮಾತನಾಡುತ್ತಾ ಪ್ರಸ್ತುತ ಎಲ್ಲಾ ಕ್ಷೇತ್ರಗಳು ವ್ಯಾವಹಾರಿಕವಾಗಿರುವಾಗ ಯಾವುದೇ ಲಾಭಗಳಿಕೆಯ ಆಸೆಯಿಲ್ಲದೆ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಲು ಚಿಂತಿಸುತ್ತಿರುವ ಫೌಂಡೇಷನ್ನಿನ ಸದಸ್ಯರಿಗೆ ಅಭಿನಂದನೆಯನ್ನು ಸಲ್ಲಿಸುತ್ತಾ ಇದು ಕೇವಲ ಗ್ರಂಥಾಲಯವಾಗಿ ಕಾರ್ಯನಿರ್ವಹಿಸುವ ಬದಲು ಸಾಹಿತ್ಯ ಕ್ಷೇತ್ರದ ವಿವಿಧ ಮಜಲುಗಳಲ್ಲಿ, ಆಯಾಮಗಳಲ್ಲಿ ಕಾರ್ಯನಿರ್ವಹಿಸಬೇಕು ಎಂದರು.
ಈ ಪೂರ್ವಭಾವಿ ಸಭೆಯಲ್ಲಿ ಮಾಜಿ ಶಾಸಕ ನಿಂಗಪ್ಪ, ಎಂಪ್ರೆಸ್ ಪ್ರಾಂಶುಪಾಲ ಬಿ. ಮರುಳಯ್ಯ, ಗಂಗಾಧರ ಕೊಡ್ಲಿ, ಸುಗುಣಾದೇವಿ, ಸಿದ್ದಲಿಂಗಯ್ಯ ಹೊಲತಾಳ್, ಅಕ್ಕಮ್ಮ, ಸದಾಶಿವ್ ಮಂಗಳೂರು, ರಾಜಶೇಖರ್, ಸಿಂಧಿಗಿಕರ್, ಸಮರ್ಥ್ ಫೌಂಡೇಷನ್ ವತಿಯಿಂದ ಎಂ.ಎಚ್. ನಾಗರಾಜು, ಅಶೋಕ್, ರಾಣಿಚಂದ್ರಶೇಖರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.