ಬೀದಿ ದೀಪ ಅಳವಡಿಸುವಲ್ಲಿ ಪುರಸಭೆ ನಿರ್ಲಕ್ಷ್ಯ: ಆರೋಪ
ಪಾವಗಡ: ಕಳೆದ ಒಂದು ತಿಂಗಳಿಂದಲೂ ಬೀದಿ ದೀಪ ಅಳವಡಿಸುವಲ್ಲಿ ಪುರಸಭೆ ನಿರ್ಲಕ್ಷ್ಯವಹಿಸಿದ ಕಾರಣ ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಆಗಿದೆ ಎಂದು ವಿನಾಯಕ ನಗರದ ವಾಸಿ, ಮುಖಂಡ ವಿಜಯ ನರಸಿಂಹಪ್ಪ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚರಂಡಿ ದುರಸ್ತಿ ಸೇರಿದಂತೆ ರಸ್ತೆ ದುರಸ್ತಿ ಹಾಗೂ ನೈರ್ಮಲ್ಯ ಕಾಪಾಡುವಲ್ಲಿ ಪುರಸಭೆ ಸಂಪೂರ ನಿರ್ಲಕ್ಷ್ಯ ವಹಿಸಿರುವುದು ಪಟ್ಟಣದ ಜನತೆಗೆ ಗೊತ್ತಿರುವ ವಿಚಾರ. ಆದರೆ ರಾತ್ರಿ ವೇಳೆ ಮನೆಗಳ ಬೀಗ ಮುರಿದು ಸರಣಿಗಳ್ಳತನ ಪಟ್ಟಣದಲ್ಲಿ ಹೆಚ್ಚುತ್ತಿದ್ದರೂ ಸಮರ್ಪಕ ಬೀದಿ ದ್ವೀಪ ಅಳವಡಿಸುವಲ್ಲಿ ಪುರಸಭೆ ನಿರ್ಲಕ್ಷಿಸಿದ ಕಾರಣ ವಿವಿಧ ವಾರ್ಡುಗಳ ಜನತೆ ಆತಂಕದ ಪರಿಸ್ಥಿತಿ ಎದುರಿಸುತ್ತಿದ್ದಾರೆಂದು ಅವರು ದೂರಿದರು.
ಪಟ್ಟಣದ ಪೊಲೀಸ್ ಕ್ವಾರ್ಟರ್ಸ್ ಹಿಂಭಾಗದಲ್ಲಿರುವ ವಿನಾಯಕ ನಗರದಲ್ಲಿ ಬಹುತೇಕ ವಿದ್ಯಾವಂತರು, ಸರ್ಕಾರಿ ನೌಕರರು ವಾಸಿಸುವ ಪ್ರದೇಶವಾಗಿದ್ದು ಕಳೆದ 2 ತಿಂಗಳಿಂದಲೂ ಈ ವಾರ್ಡಿನಲ್ಲಿ ಬೀದಿ ದೀಪಗಳ ಬೆಳಕಿಲ್ಲದೇ ರಾತ್ರಿ ವೇಳೆ ಕಗ್ಗತ್ತಲಿನಲ್ಲಿ ಓಡಾಡುವ ದುಸ್ಥಿತಿ ಒದಗಿದೆ. ಈ ವಾರ್ಡಿನ ಸಾರ್ವಜನಿಕರು ಪುರಸಬೆ ಮುಖ್ಯಾಧಿಕಾರಿ ರಂಗಸಾಮಯ್ಯ ಅವರನ್ನು ಭೇಟಿ ಮಾಡಿ ವಿನಾಯಕ ನಗರದಲ್ಲಿ ಬೀದಿ ದೀಪ ಅಳವಡಿಸುವಂತೆ ಮನವಿ ಮಾಡಿ ಸುಮಾರು 1ತಿಂಗಳು ಕಳೆದಿದೆ. ಆದರೆ ಪುರಸಭೆ ಮುಖ್ಯಾಧಿಕಾರಿ ಇಲ್ಲಿಯವರೆಗೂ ವಿನಾಯಕ ನಗರದಲ್ಲಿ ಬೀದಿ ದೀಪ ಅಳವಡಿಸುವ ಆಸಕ್ತಿ ವಹಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಸಿ ರಸ್ತೆಗಳು ಸೇರಿದಂತೆ ಚರಂಡಿ ದುರಸ್ತಿ ಅಥವಾ ಸ್ವಚ್ಛತೆ ಬಗ್ಗೆ ನಾವು ಮುಖ್ಯಾಧಿಕಾರಿಯನ್ನು ಕೇಳಿಲ್ಲ. ಸಾರ್ವಜನಿಕರು ಹಿತ ದೃಷ್ಟಿಯಿಂದ ಸದ್ಯ ಬೀದಿ ದೀಪ ಅಳವಡಿಸಿ ಎಂದು ಮನವಿ ಮಾಡಲಾಗಿದೆ. ಆದರೂ ಅವರು ಗಮನಹರಿಸದೇ ಇರುವುದು ವಿಪರ್ಯಾಸವೆಂದರು. ಬೀದಿ ದೀಪ ಅಳವಡಿಸುವಲ್ಲಿ ಪರಿಸ್ಥಿತಿ ಇದೆ ರೀತಿ ಮುಂದುವರಿದರೆ ವಿನಾಯಕ ನಗರದ ಸಾರ್ವಜನಿಕರು ಪುರಸಭೆಗೆ ಮುತ್ತಿಗೆ ಹಾಕುವ ಅನಿವಾರ್ಯತೆ ಇದೆ ಎಂದು ಅವರು ಎಚ್ಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

